ಬೈಕ್‌ನಿಂದ ಬಿದ್ದ ಮಹಿಳೆ ಮೇಲೆ BMTC ಬಸ್ ಹರಿದು ಸ್ಥಳದಲ್ಲೇ ದುರ್ಮರಣ
ಬೆಂಗಳೂರು ನಾಯಂಡನಹಳ್ಳಿಯಲ್ಲಿ ಭೀಕರ ಅಪಘಾತ, ಕಾರಿನ ಡೋರ್ ಆಕಸ್ಮಿಕವಾಗಿ ತೆರೆದ ಪರಿಣಾಮ ಬೈಕ್‌ನಿಂದ ಬಿದ್ದ ಮಹಿಳೆ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಸಾವು
- ಬಿಎಂಟಿಸಿ ಬಸ್ ಅಪಘಾತ, ರಸ್ತೆಯಲ್ಲೇ ಮಹಿಳೆಯ ದುರ್ಮರಣ
- ಕಾರಿನ ಡೋರ್ ಅಚಾನಕ್ ತೆರೆದುಕೊಂಡಿದ್ದು ಅಪಘಾತಕ್ಕೆ ಕಾರಣ
- ಬ್ಯಾಟರಾಯನಪುರ (Traffic Police) ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು (Bengaluru) ನಗರದ ನಾಯಂಡನಹಳ್ಳಿಯಲ್ಲಿ (Nayandahalli) ಭೀಕರ ರಸ್ತೆ ಅಪಘಾತ ಸಂಭವಿಸಿದೆ. 42 ವರ್ಷದ ಸರೋಜಾ ಎಂಬ ಮಹಿಳೆ BMTC ಬಸ್ ಚಕ್ರಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಘಟನೆ ಸಂಭವಿಸಿದ ವೇಳೆ ಸರೋಜಾ ತಮ್ಮ ಸೋದರನೊಂದಿಗೆ ಹೋಂಡಾ ಆ್ಯಕ್ಟಿವಾ (Honda Activa) ನಲ್ಲಿ ಪ್ರಯಾಣಿಸುತ್ತಿದ್ದರು.
ಜ್ಞಾನಭಾರತಿಯಲ್ಲಿ ಮದುವೆ ಮುಗಿಸಿ, ರಾತ್ರಿ 9.30ರ ಸುಮಾರಿಗೆ ತಮ್ಮ ಮನೆಗೆ ಹಿಂತಿರುಗುವ ವೇಳೆ, ದಾರಿಯಲ್ಲಿ ನಿಲ್ಲಿಸಿದ್ದ ಕಾರಿನ (Car) ಬಾಗಿಲು ಆಕಸ್ಮಿಕವಾಗಿ ತೆರೆದಿದೆ.
ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು, ವೈದ್ಯರಿಂದ 2 ದಿನ ವಿಶ್ರಾಂತಿ ಸಲಹೆ
ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸರೋಜಾ ಡೋರ್‌ಗೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ, ಹಿಂಬದಿ ಬರುತ್ತಿದ್ದ BMTC ಬಸ್ ಅವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಕುರಿತು ಬ್ಯಾಟರಾಯನಪುರ ಸಂಚಾರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ, ಸ್ಥಳೀಯರು ವಾಹನ ಚಾಲಕರ ನಿರ್ಲಕ್ಷ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
BMTC Bus Accident, Woman Dies After Falling from Bike