ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು, ವೈದ್ಯರಿಂದ 2 ದಿನ ವಿಶ್ರಾಂತಿ ಸಲಹೆ
ಸಿಎಂ ಸಿದ್ದರಾಮಯ್ಯ ಅವರ ಎಡಗಾಲಿನ (knee pain) ಸಮಸ್ಯೆ ಹೆಚ್ಚಾದ ಹಿನ್ನೆಲೆ, ಬೆಂಗಳೂರಿನ ಖಾಸಗಿ (private hospital) ಆಸ್ಪತ್ರೆಗೆ ದಾಖಲು, ವೈದ್ಯರಿಂದ ವಿಶ್ರಾಂತಿ ಸೂಚನೆ.
- ಸಿಎಂ ಸಿದ್ದರಾಮಯ್ಯ (Siddaramaiah) ಎಡಗಾಲಿನ ನೋವಿನಿಂದ ಆಸ್ಪತ್ರೆಗೆ ದಾಖಲು
- ವೈದ್ಯರಿಂದ 2 ದಿನ ವಿಶ್ರಾಂತಿ ಪಡೆಯಲು ಸಲಹೆ
- ಚಿಕ್ಕಬಳ್ಳಾಪುರ, ರಾಮನಗರ ಪ್ರವಾಸ ದಿಢೀರ್ ರದ್ದು
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಎಡಗಾಲಿನ ನೋವು ಹೆಚ್ಚಾದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಇಂದು ನಡೆಯಬೇಕಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸವನ್ನು ರದ್ದು ಮಾಡಲಾಗಿದೆ.
ವೈದ್ಯಕೀಯ ತಪಾಸಣೆಯ ನಂತರ, ವೈದ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ದಿನ ಸಂಪೂರ್ಣ ವಿಶ್ರಾಂತಿ (rest) ಪಡೆಯುವಂತೆ ಸಲಹೆ ನೀಡಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅವರು ಹಿಂದೆಯೇ ಲೆಗಮೆಂಟ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕಾರಣ, ಅದೇ ಜಾಗದಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ವೈದ್ಯರು ಎಕ್ಸ್-ರೇ (X-ray) ನಡೆಸಿ, ಎಲ್ಲವೂ ಸಹಜವಾಗಿದೆ ಎಂದು ದೃಢಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಭದ್ರತೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಸಿಎಂ ಭೇಟಿ ತಾತ್ಕಾಲಿಕವಾಗಿ ರದ್ದಾದ ಕಾರಣ, ಪೊಲೀಸರು ನಿಯೋಜಿತ ಸ್ಥಳದಿಂದ ಭದ್ರತೆ ಹಿಂತೆಗೆದುಕೊಳ್ಳಲಾಯಿತು.
CM Siddaramaiah Hospitalized, Advised Two Days Rest