ಬೆಂಗಳೂರು ಪ್ರತಿಷ್ಠಿತ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ

Story Highlights

ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷಪ್ ಕಾಟನ್ ಶಾಲೆಗೆ ಗುರುವಾರ ಬೆಳಗ್ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.

ಬೆಂಗಳೂರು (Bengaluru): ಬೆಂಗಳೂರು ಪ್ರತಿಷ್ಠಿತ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಹೌದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷಪ್ ಕಾಟನ್ ಶಾಲೆಗೆ ಗುರುವಾರ ಬೆಳಗ್ಗೆ ಬಾಂಬ್ ಬೆದರಿಕೆಯ ಇಮೇಲ್ (Bomb threat) ಬಂದಿದೆ.

ಕೆಲ ದಿನಗಳಿಂದ ಇಂತಹ ಹಲವಾರು ಹುಸಿ ಬಾಂಬ್ ಬೆದರಿಕೆ ಕರೆಗಳು, ಇಮೇಲ್ ಗಳು ತಲೆಬಿಸಿ ಮಾಡಿವೆ, ರೈಲು, ಹೋಟೆಲ್, ವಿಮಾನುಗಳು ಸೇರಿದಂತೆ ದೊಡ್ಡ ದೊಡ್ಡ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಬರುತ್ತಿವೆ. ಇದೊಂದು ಹುಸಿ ಕರೆಯೆಂದು ಬಿಟ್ಟುಬಿಡುವಂತೂ ಇಲ್ಲ, ಮುಂದಾಗುವ ಅವಘಡ ತಪ್ಪಿಸಲು ತಪಾಸಣೆ, ಪರಿಶೀಲನೆ ಮಾಡಲೇಬೇಕಾಗುತ್ತದೆ.

ಈನಡುವೆ ಇದೆ ರೀತಿಯ ಬೆದರಿಕೆ ಕರೆ ಬಂದಿದ್ದು, ಶಾಲೆಯಲ್ಲಿ (School) ಬಾಂಬ್ ಇಡಲಾಗಿದ್ದು, ಯಾವಾಗ ಬೇಕಾದರೂ ಸ್ಫೋಟಗೊಳ್ಳಲಿದೆ ಎಂದು ಬೆಂಗಳೂರು ಶಾಲೆಗೇ  ಬೆದರಿಕೆ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ, ಯುವತಿಗೆ ಐದು ಇಂಜೆಕ್ಷನ್ ನೀಡಿದ ಕುಡುಕ ಡಾಕ್ಟರ್

ಇಮೇಲ್ ನೋಡಿದ ಸಿಬ್ಬಂದಿ ತಕ್ಷಣ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಬಾಂಬ್‌ ಸ್ಕ್ವಾಡ್‌, ಶ್ವಾನದಳ ಆಗಮಿಸಿ ಶಾಲೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.

ಇದು ಹುಸಿ ಬಾಂಬ್ ಬೆದರಿಕೆ (Hoax bomb threat) ಎನ್ನುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆಯಿಂದ ಮಕ್ಕಳು ಮತ್ತು ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದರು. ವಿದ್ಯಾರ್ಥಿಗಳನ್ನು ಮಧ್ಯದಲ್ಲೇ ಮನೆಗೆ ಕಳುಹಿಸಲಾಯಿತು.

Bomb threat Email to Bengaluru to Bishop Cotton School

Related Stories