ಬೆಳಗಾವಿ ಹಾಗೂ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

Story Highlights

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್ ಸ್ಫೋಟಿಸುತ್ತೇವೆ ಎಂದು ಕೆಲ ಪುಂಡರು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು (Bengaluru): ದೇಶದಲ್ಲಿ ಇತ್ತೀಚೆಗೆ ವಿಮಾನಗಳು ಹಾಗೂ ವಿಮಾನ ನಿಲ್ದಾಣಗಳಿಗೆ (Airport) ಬಾಂಬ್ ಬೆದರಿಕೆ ಕರೆಗಳು ಗೊಂದಲ ಸೃಷ್ಟಿಸುತ್ತಿವೆ. ಅದೇ ರೀತಿ ಬೆಳಗಾವಿ ವಿಮಾನ ನಿಲ್ದಾಣ (Belagavi Airport) ಮತ್ತು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ (Bengaluru Airport) ಬಾಂಬ್‌ ಬೆದರಿಕೆ ಬಂದಿತ್ತು.

ಕೆಂಪೇಗೌಡ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್ ಸ್ಫೋಟಿಸುತ್ತೇವೆ ಎಂದು ಕೆಲ ಪುಂಡರು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಆರು ವಿಮಾನಗಳಲ್ಲಿ 12 ಬಾಂಬರ್‌ಗಳು ಇದ್ದವು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ನಾಳೆ ಕೂಡ ಬೆಂಗಳೂರು ಶಾಲೆಗಳಿಗೆ ರಜೆ ಇದಿಯಾ! ಅಧಿಕೃತ ಪ್ರಕಟಣೆಯಲ್ಲಿ ಏನಿದೆ?

ಈ ಟ್ವೀಟ್‌ಗಳು ಅನಾಮಧೇಯ ಟ್ವಿಟರ್ ಖಾತೆಯಿಂದ ಬಂದಿವೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರಿಗೆ ಇಮೇಲ್ ಕಳುಹಿಸಲಾಗಿದೆ.

ನಂತರ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಎರಡೂ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ತೀವ್ರಗೊಳಿಸಿದ್ದು, ಭದ್ರತೆ ಹೆಚ್ಚಿಸಿದ್ದಾರೆ.

ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

ಕೆಲವು ದಿನಗಳಿಂದ ಇದೆ ರೀತಿಯ ಬೆದರಿಕೆ ಕರೆಗಳು ಬರುತ್ತಿದ್ದು, ಎಲ್ಲವೂ ಹುಸಿ ಎಂದು ತಳ್ಳಿ ಹಾಕುವಂತಿಲ್ಲ ಎಂಬುದು ಸಹ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಪೊಲೀಸರು ಈ ಬಗ್ಗೆ ನಿರಂತರ ತನಿಖೆ ನಡೆಸುತ್ತಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.

bomb threats to Belagavi and Bengaluru Kempegowda Airport

Related Stories