ರದ್ದಾಗಿರುವ ಕಾರ್ಡ್‌ಗಳ ಪಟ್ಟಿ ಬಿಡುಗಡೆ, ಬಿಪಿಎಲ್ ಕ್ಯಾನ್ಸಲ್ ಲಿಸ್ಟ್ ನಲ್ಲಿ ನಿಮ್ಮ ಕಾರ್ಡ್ ಇದ್ಯಾ? ಚೆಕ್ ಮಾಡಿಕೊಳ್ಳಿ
ಅನರ್ಹರಾಗಿರುವ ಹಲವು ಕುಟುಂಬಗಳ ಬಳಿ, ಬಿಪಿಎಲ್ ರೇಷನ್ ಕಾರ್ಡ್ ಇದ್ದು, ಅಂಥ ಕುಟುಂಬಗಳ ರೇಷನ್ ಕಾರ್ಡ್ ಕ್ಯಾನ್ಸಲ್ (Ration Card Cancellation) ಮಾಡುವ ಕೆಲಸವನ್ನು ಸರ್ಕಾರ ಈಗಾಗಲೇ ಶುರು ಮಾಡಿದೆ.
ನಮ್ಮ ರಾಜ್ಯದ ಜನರಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲೆ ಎಂದರೆ ಬಿಪಿಎಲ್ ಕಾರ್ಡ್ (BPL Card). ಹೌದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ನಮಗೆ ಸಿಗಬೇಕು ಎಂದರೆ, ನಮ್ಮ ಬಳಿ ಬಿಪಿಎಲ್ ಕಾರ್ಡ್ ಇರಲೇಬೇಕು. ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಈ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಸಿಗುತ್ತಿದೆ.
ಸಾಮಾನ್ಯವಾಗಿ ಒಂದು ರಾಜ್ಯದಲ್ಲಿ 5.6% ನಷ್ಟು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳು ಇರಬೇಕು. ಆದರೆ ನಮ್ಮ ರಾಜ್ಯದ ಕಥೆ ಉಲ್ಟಾ ಆಗಿದೆ. ಕರ್ನಾಟಕದಲ್ಲಿ 80% ನಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ (BPL Ration Card) ಇದೆ. ಅಂದರೆ 1.27 ಕೋಟಿ ಗಿಂತ ಹೆಚ್ಚು ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಇದೆ.
ಇದು ಬಹಳ ಹೆಚ್ಚಿನ ಪ್ರಮಾಣ, ಹಾಗೆಯೇ ನಂಬಲು ಅಸಾಧ್ಯ ಅನ್ನಿಸುವ ಪ್ರಮಾಣವಾದರು, ಇದು ಸತ್ಯವೇ ಆಗಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಅನರ್ಹರಾಗಿರುವ ಹಲವು ಕುಟುಂಬಗಳ ಬಳಿ, ಬಿಪಿಎಲ್ ರೇಷನ್ ಕಾರ್ಡ್ ಇದ್ದು, ಅಂಥ ಕುಟುಂಬಗಳ ರೇಷನ್ ಕಾರ್ಡ್ ಕ್ಯಾನ್ಸಲ್ (Ration Card Cancellation) ಮಾಡುವ ಕೆಲಸವನ್ನು ಸರ್ಕಾರ ಈಗಾಗಲೇ ಶುರು ಮಾಡಿದೆ.
ಕೊನೆಗೂ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ! ಈ ಜಿಲ್ಲೆಗಳಿಗೆ ಎರಡು ತಿಂಗಳ ₹4,000 ಒಟ್ಟಿಗೆ ವರ್ಗಾವಣೆ
ಹೌದು, ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೋ ಅಂಥವರ ಬಿಪಿಎಲ್ ಕಾರ್ಡ್ ಗಳು ಕ್ಯಾನ್ಸಲ್ ಆಗಲಿದೆ. ಸರ್ಕಾರಿ ಕೆಲಸ ಹೊಂದಿರುವವರ, ಸ್ವಂತ ವಾಹನಗಳನ್ನು ಹೊಂದಿರುವವರ, ಬಡತನದ ರೇಖೆಗಿಂತ ಮೇಲಿರುವವರ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ಕ್ಯಾನ್ಸಲ್ ಆಗಲಿದೆ. ಎಲ್ಲರ ಮಾಹಿತಿಯನ್ನು ಪರಿಶೀಲಿಸುತ್ತಿರುವ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುವ ಕೆಲಸವನ್ನು ಶುರು ಮಾಡಿಕೊಂಡಿದೆ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಿ ಹೋದರೆ ಏನು ಮಾಡಬೇಕು ಎಂದು ನಿಮಗೆ ಪ್ರಶ್ನೆ ಶುರುವಾಗಬಹುದು, ಅದಕ್ಕೊಂದು ಉತ್ತರ ಕೂಡ ಇದ್ದು, ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಎಪಿಎಲ್ ರೇಷನ್ ಕಾರ್ಡ್ ಆಗಿ ಚೇಂಜ್ ಮಾಡಿಸಿಕೊಳ್ಳಬಹುದು.
ನಿಮ್ಮ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿಕೊಂಡು, ಬಿಪಿಎಲ್ ಇದ್ದ ರೇಷನ್ ಕಾರ್ಡ್ ಅನ್ನು ಎಪಿಎಲ್ ಮಾಡಿಸಿಕೊಳ್ಳಬಹುದು. ಇದನ್ನು ಹೊರತುಪಡಿಸಿ, ಇನ್ನೇನನ್ನು ಮಾಡಲು ಸಾಧ್ಯ ಆಗುವುದಿಲ್ಲ. ಅರ್ಹರಿಗೆ ಮಾತ್ರ ಸೌಲಭ್ಯಗಳು ಸಿಗಲಿ ಎನ್ನುವುದು ಸರ್ಕಾರದ ಉದ್ದೇಶ.
ಬಿಪಿಎಲ್ ಕಾರ್ಡ್ ಇರೋ ಕುಟುಂಬಗಳಿಗೆ ಕೇಂದ್ರದಿಂದ ಮಹತ್ವದ ಯೋಜನೆ! ಇನ್ನೊಂದು ಉಚಿತ ಸೇವೆ
ಇನ್ನು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಬೇಕು ಎಂದುಕೊಂಡಿರುವವರಿಗೆ ಕೂಡ ಸರ್ಕಾರದ ಕಡೆಯಿಂದ ಒಂದು ಅವಕಾಶ ಸಿಗಲಿದೆ. ಹಾಗೆಯೇ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಎನ್ನುವುದನ್ನು ಕೂಡ ನೀವು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು..
https://ahara.kar.nic.in ಈ ಲಿಂಕ್ ಗೆ ಭೇಟಿ ನೀಡಿ, Eservices ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇದರಲ್ಲಿ Eration card ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಇಲ್ಲಿ ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ಸೆಲೆಕ್ಟ್ ಮಾಡಿ, ಇಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ ಇದಿಷ್ಟನ್ನೂ ಹಾಕಿದರೆ, ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಗಳ ಲಿಸ್ಟ್ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.
Canceled cards list released, Check is your card in the BPL card cancellation list