ರೈತರ ಗೇರು ಕೃಷಿಗೆ ₹1.20 ಲಕ್ಷ ಹಣಕಾಸು ನೆರವು! ನೀವು ಅರ್ಜಿ ಹಾಕಿದ್ದೀರಾ?
ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ವತಿಯಿಂದ 2025–26 ನೇ ಸಾಲಿಗೆ ಹನಿ ನೀರಾವರಿ ಮತ್ತು ಗೇರು ಸಸಿಗಳಿಗಾಗಿ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ 31 ಆಗಸ್ಟ್.

- ಗೇರು ಗಿಡಗಳಿಗೆ ರೂ. 75 ಸಾವಿರವರೆಗೆ ಸಹಾಯ
- ಹನಿ ನೀರಾವರಿ ವ್ಯವಸ್ಥೆಗೆ ವಿಶೇಷ ಸಬ್ಸಿಡಿ
- ಎರಡು ಪದ್ದತಿಗಳಲ್ಲಿ ಆಯ್ಕೆಮಾಡಿಕೊಂಡು ಅರ್ಜಿ ಸಲ್ಲಿಸಬಹುದು
ಗೇರು ಬೆಳೆ ಹಾಕೋ ಯೋಜನೆಯಿದ್ದರೆ, ಪುತ್ತೂರಿನಿಂದ ಸಿಗಬಹುದಾದ ಸಹಾಯಧನದ ಬಗ್ಗೆ ನೀವೇನು ಕೇಳಿದ್ದೀರಾ? ಗೇರು ಸಂಶೋಧನಾ ನಿರ್ದೇಶನಾಲಯ 2025–26 ನೇ ಸಾಲಿನಲ್ಲಿ ಹೊಸ ಸಬ್ಸಿಡಿ ಯೋಜನೆ ಪ್ರಕಟಿಸಿದೆ.
ಇದು ಎರಡು ವಿಭಿನ್ನ ಪದ್ಧತಿಗಳ ಮೂಲಕ ರೈತರ ಕೈಗೆ ನೇರ ಆರ್ಥಿಕ ನೆರವನ್ನು ತಲುಪಿಸಲು ಉದ್ದೇಶಿತವಾಗಿದೆ.
ಇದನ್ನೂ ಓದಿ: ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆ 20ನೇ ಕಂತಿನ ಹಣ ವರ್ಗಾವಣೆಗೆ ಸರ್ಕಾರ ಸಜ್ಜು
ಸಾಮಾನ್ಯ ಪದ್ಧತಿ (Cashewnut Farming – General Pattern) ಮತ್ತು ಸಾಂದ್ರ ಪದ್ಧತಿ (High-Density Plantation) ಎನ್ನೋ ಎರಡು ಮಾರ್ಗಗಳಿವೆ. ಎರಡೂ ರೂಪದಲ್ಲಿಯೂ ನೀವು ಗೇರು ಬೆಳೆ ಬೆಳೆದರೆ, ಹನಿ ನೀರಾವರಿ ವ್ಯವಸ್ಥೆ, ಗಿಡ ಖರೀದಿ ಮತ್ತು ಕೀಟ ನಿರ್ವಹಣೆಗೆ ಸರ್ಕಾರ ಹಣ ನೀಡುತ್ತೆ. ಆದರೆ ಗಿಡಗಳನ್ನು ನಿರ್ದೇಶನಾಲಯದಿಂದಲೇ ಖರೀದಿಸಬೇಕಾಗಿರುತ್ತೆ ಎಂಬುದು ಮುಖ್ಯ (nursery bill required).
ಹೆಚ್ಚುವರಿ ಸಬ್ಸಿಡಿ ಬೇಕು ಅಂದರೆ ಸಾಂದ್ರ ಪದ್ಧತಿ ಒಳ್ಳೆಯ ಆಯ್ಕೆ. ಇಲ್ಲಿ 4 ಮೀ x 4 ಮೀ ಅಂತರದಲ್ಲಿ ಪ್ರತಿಎಕರೆಗೆ 250 ಗಿಡ ನೆಡುವ ಜವಾಬ್ದಾರಿ. ಈ ಮಾದರಿಯಲ್ಲಿ ₹1.12 ಲಕ್ಷವರೆಗೆ ಸಹಾಯ ಸಿಗುತ್ತದೆ (Drip Irrigation Subsidy). ಆದ್ರೆ ಗಿಡಗಳೆಂದರೆ Bidhan Bonsai Kaju, ನೇತ್ರ ವಾಮನ ಜಾತಿ ಇರಬೇಕು ಎಂಬ ನಿಯಮ ಇದೆ.
ಇದನ್ನೂ ಓದಿ: ಕೃಷಿ ಇಲಾಖೆಯಿಂದ ಕರ್ನಾಟಕ ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಸಬ್ಸಿಡಿ ಯೋಜನೆ! ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು, ಗಿಡಗಳ ನರ್ಸರಿ ರಸೀದಿ, ಬ್ಯಾಂಕ್ ಪಾಸ್ ಬುಕ್, ಹನಿ ನೀರಾವರಿ ಖರೀದಿ ಪಾವತಿ ರಶೀದಿ ಮುಂತಾದ ದಾಖಲೆಗಳು ಅಗತ್ಯವಿದೆ.
ಸ್ಥಳೀಯವಾಗಿ ಡಾ. ಈರದಾಸಪ್ಪ ಅವರ ಸಂಪರ್ಕ (9916074454) ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ರೈತ ಸ್ನೇಹಿತರೆ, ಇದೇ ಸೂಕ್ತ ಸಮಯ (Cashew Farming Scheme) ನಿಮ್ಮ ಭೂಮಿಯಲ್ಲಿ ಗೇರು ಬೆಳೆ ಬೆಳೆಸಲು!
ಅರ್ಜಿ ಸಲ್ಲಿಸಲು ಕೊನೆಯ ದಿನ 31 ಆಗಸ್ಟ್ 2025. ನೀವು ಸಹ ಅರ್ಜಿ ಹಾಕಿ, ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ
Cashew Cultivation Subsidy, Apply Before August 31




