ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆ 20ನೇ ಕಂತಿನ ಹಣ ವರ್ಗಾವಣೆಗೆ ಸರ್ಕಾರ ಸಜ್ಜು

ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆಯಾದ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣ ಜೂನ್ 25ರೊಳಗೆ ಲಭ್ಯವಾಗಲಿದೆ. ಫಲಾನುಭವಿಗಳು ಈ ಮೂಲಕ ಮಾಹಿತಿ ನೀಡಲಾಗಿದೆ

  • ಜೂನ್ 25ರೊಳಗೆ ₹2000 ಹಣ ಖಾತೆಗೆ ಜಮೆ
  • e-KYC ಹಾಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ
  • ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸರ್ಕಾರದ ದಿಟ್ಟ ಹೆಜ್ಜೆ

ಬೆಂಗಳೂರು (Bengaluru): ಬಡ ಮತ್ತು ಮಧ್ಯಮವರ್ಗದ ಮಹಿಳೆಯರಿಗೆ ನೇರ ಆರ್ಥಿಕ ಸಹಾಯ ನೀಡುವ ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದೆ.

ಜೂನ್ 25, 2025 ರೊಳಗೆ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಈ ಬಾರಿ ಸರ್ಕಾರ ಹೆಚ್ಚು ಒತ್ತುವರಿ ನೀಡಿರುವುದು ಫಲಾನುಭವಿಗಳ ಆಧಾರ್ ಸೀಡಿಂಗ್ ಹಾಗೂ e-KYC ಪ್ರಕ್ರಿಯೆ ಪೂರ್ಣಗೊಳಿಸುವ ಕಡೆ. ಆರ್ಥಿಕ ಇಲಾಖೆ ಜೊತೆ ಸಂಯೋಜನೆ ಮಾಡಿಕೊಂಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಪೂರ್ಣ ರೂಪರೇಖೆ ಸಿದ್ಧಪಡಿಸಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಕರ್ನಾಟಕ ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಸಬ್ಸಿಡಿ ಯೋಜನೆ! ಅರ್ಜಿ ಸಲ್ಲಿಸಿ

ಈ ಯೋಜನೆಯು ಮನೆಮನೆಯ ಮಹಿಳೆಯರಿಗೆ ಆರ್ಥಿಕ ಬೆಂಬಲ ತಂದಿದೆ. ಕೆಲವರು ಈ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತಿದ್ದಾರೆ, ಕೆಲವರು ಮನೆಯನ್ನು ನಡೆಸುತ್ತಿದ್ದಾರೆ, ಬೋರ್ ವೆಲ್, ಅಂಗಡಿ ಸೇರಿದಂತೆ ಜೀವನೋಪಾಯ ಕಂಡುಕೊಂಡಿದ್ದಾರೆ. ಹೀಗೆ ಪ್ರತಿ ₹2000 ಸಹಾಯ ಮನೆ ಬದುಕಿಗೆ ಉತ್ಸಾಹ ತುಂಬುತ್ತಿದೆ.

ಪ್ರತಿ ತಿಂಗಳು ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗವಾಗುವುದರಿಂದ, ಮಹಿಳೆಯರು ತಮ್ಮ ಖರ್ಚುಗಳನ್ನು ತಮ್ಮದೇ ತೀರ್ಮಾನದಿಂದ ನಿರ್ವಹಿಸುತ್ತಿದ್ದಾರೆ. ಇದೊಂದು ರೀತಿಯ financial independence ಅನ್ನಿಸುತ್ತಿದೆ ಎನ್ನುವುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ

Gruha Lakshmi Scheme

ಸಮಾಜದಲ್ಲಿ ಬದಲಾವಣೆ ತರಲು ಯೋಜನೆ ಯಶಸ್ವಿ!

ಬೆಂಗಳೂರಿನ ಜೊತೆ, ಬಳ್ಳಾರಿ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭ ಪಡೆದಿದ್ದಾರೆ. ಶೇಕಡಾ 90ರಷ್ಟು ಫಲಾನುಭವಿಗಳು ಕಂತುಗಳನ್ನು ಪೂರ್ತಿಯಾಗಿ ಪಡೆದಿದ್ದಾರೆ ಎನ್ನುವುದು ಸಚಿವರ ಮಾಹಿತಿ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಬ್ಸಿಡಿ ಬೆಲೆಗೆ ಕೌಮ್ಯಾಟ್‌ ವಿತರಣೆ, ಇಂದೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಯಶಸ್ಸು ಗಮನದಲ್ಲಿ ಇಟ್ಟುಕೊಂಡು, ಸರ್ಕಾರ ಮುಂದಿನ ಹಂತದಲ್ಲಿ ಇನ್ನಷ್ಟು ಮಹಿಳೆಯರನ್ನು ಈ ಯೋಜನೆಯಡಿ ಸೇರಿಸಲು ಸಜ್ಜಾಗಿದೆ. ಹೊಸ ಅರ್ಜಿಯನ್ನು ಸಹ ಆಹ್ವಾನಿದೆ.

ಈ ನಿಟ್ಟಿನಲ್ಲಿ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಸಾಧ್ಯತೆ ಇದೆ.

Gruha Lakshmi 20th Instalment by June 25

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories