ಕರ್ನಾಟಕ ರೈತರಿಗೆ ಸಬ್ಸಿಡಿ ಬೆಲೆಗೆ ಕೌಮ್ಯಾಟ್ ವಿತರಣೆ, ಇಂದೇ ಅರ್ಜಿ ಸಲ್ಲಿಸಿ
ಪಶುಪಾಲನಾ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಎರಡು ಕೌಮ್ಯಾಟ್ಗಳ ಸಹಿತ ರಬ್ಬರ್ ನೆಲಹಾಸು ವಿತರಣೆ, ಅರ್ಜಿ ಸಲ್ಲಿಸಲು ಫ್ರೂಟ್ಸ್ ಐಡಿ ಕಡ್ಡಾಯ.

- ಪ್ರತಿ ಫಲಾನುಭವಿಗೆ ಎರಡು ಕೌಮ್ಯಾಟ್ಗಳ ವಿತರಣೆಯ ಯೋಜನೆ
- ಶೇ.50ರಷ್ಟು ಅನುದಾನ, ಉಳಿದ ಮೊತ್ತವನ್ನು ರೈತರು ಭರಿಸಬೇಕು
- ಮಹಿಳೆ, ಅಲ್ಪಸಂಖ್ಯಾತ, ಅಂಗವಿಕಲರಿಗೆ ಆದ್ಯತೆ
ಬೆಂಗಳೂರು (Bengaluru): ರೈತರು ಮತ್ತು ಪಶುಪಾಲಕರು ತಮ್ಮ ಪಶುಪಾಲನೆಗೆ ಸಹಕಾರಿಯಾಗುವಂತಹ ಸೌಲಭ್ಯ ಪಡೆಯಲು ಮತ್ತೊಂದು ಅವಕಾಶ ದೊರೆಯುತ್ತಿದೆ.
ಪಶುಪಾಲನಾ ಇಲಾಖೆ (Animal Husbandry Department) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (RKVY Scheme) ‘ರಬ್ಬರ್ ನೆಲಹಾಸು ವಿತರಣಾ ಯೋಜನೆ’ ರಾಜ್ಯದ ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ..
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟ ಶಕ್ತಿ ಯೋಜನೆಯ ಬಿಗ್ ಅಪ್ಡೇಟ್
ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ಎರಡು ಕೌಮ್ಯಾಟ್ಗಳನ್ನು (Rubber Cow Mats) ನೀಡಲಾಗುವುದು. ಘಟಕದ ಒಟ್ಟು ವೆಚ್ಚ ರೂ.5,598 ಇದ್ದು, ಅದರಲ್ಲಿ ಶೇ.50ರಷ್ಟು ಮೊತ್ತವನ್ನು ಸಹಾಯಧನವಾಗಿ ಸರ್ಕಾರ ನೀಡಲಿದೆ. ಉಳಿದ ಮೊತ್ತವನ್ನು ಫಲಾನುಭವಿಗಳು ಸ್ವಂತವಾಗಿ ಭರಿಸಬೇಕು.
ಅರ್ಜಿ ಸಲ್ಲಿಸಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಿದೆ. ಅರ್ಜಿದಾರರು ಫ್ರೂಟ್ಸ್ ಐಡಿ (Fruits ID) ಹೊಂದಿರಬೇಕು ಮತ್ತು ಕನಿಷ್ಠ 2 ಜಾನುವಾರುಗಳನ್ನು ಸಾಕಿರಬೇಕು. ಜಾತಿ ಪ್ರಮಾಣಪತ್ರ (ಆರ್.ಡಿ ಸಂಖ್ಯೆ ಸಹಿತ), ಅಂಗವಿಕಲರ ಪ್ರಮಾಣಪತ್ರ ಇದ್ದರೆ ಅದನ್ನು ಕೂಡಾ ಸಲ್ಲಿಸಬೇಕು.
ಇದನ್ನೂ ಓದಿ: ಸರ್ಕಾರಿ ಭೂಮಿಯ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಮಹತ್ವದ ಮಾಹಿತಿ
ವಿಶೇಷವಾಗಿ, ಯೋಜನೆಯಡಿಯಲ್ಲಿ ಶೇ.33.3ರಷ್ಟು ಮಹಿಳೆಗಳಿಗೆ, ಶೇ.15ರಷ್ಟು ಅಲ್ಪಸಂಖ್ಯಾತರಿಗೆ ಮತ್ತು ಶೇ.3ರಷ್ಟು ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರೈತರ ಕೃಷಿಗೆ ಹೊಸ ಸ್ಕೀಮ್! ಕುಸುಮ್-ಸಿ ಸೋಲಾರ್ ಯೋಜನೆ ಜಾರಿ
ಹೆಚ್ಚಿನ ಮಾಹಿತಿ ಅಥವಾ ಅರ್ಜಿ ಸಲ್ಲನೆಗೆ ಸಂಬಂಧಿಸಿದಂತೆ, ರೈತರು ತಮ್ಮ ತಾಲೂಕುಗಳ ಸಹಾಯಕ ನಿರ್ದೇಶಕರು ಅಥವಾ ಮುಖ್ಯ ಪಶುವೈದ್ಯಾಧಿಕಾರಿಗಳನ್ನು (ಆಡಳಿತ) ಸಂಪರ್ಕಿಸಬಹುದು.
ಜಿಲ್ಲಾ ಪಶು ಆಸ್ಪತ್ರೆಗಳಲ್ಲೂ ಹೆಚ್ಚಿನ ವಿವರ ಲಭ್ಯವಿದೆ. ಈ ಸೌಲಭ್ಯದಿಂದ ರೈತರು ತಮ್ಮ ಪಶುಪಾಲನೆಗೆ ಅನುಕೂಲ ಮಾಡಿಕೊಳ್ಳಬಹುದು.
Subsidy for Rubber Cow Mats, Application Open




