ಬೆಂಗಳೂರು ಸೇರಿದಂತೆ ದೇಶದ ವಿಮಾನಗಳಿಗೆ ನಿರಂತರ ಬಾಂಬ್ ಬೆದರಿಕೆ ಕರೆಗಳು
ಬೆಂಗಳೂರು ಸೇರಿದಂತೆ ದೇಶದ ವಿಮಾನ ನಿಲ್ದಾಣ, ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ನಿಲ್ಲುತ್ತಿಲ್ಲ. ಇತ್ತೀಚೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 30 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಬೆಂಗಳೂರು (Bengaluru): ಬೆಂಗಳೂರು ಸೇರಿದಂತೆ ದೇಶದ ವಿಮಾನ ನಿಲ್ದಾಣ, ವಿಮಾನಗಳಿಗೆ (Flights) ಬಾಂಬ್ ಬೆದರಿಕೆ ಕರೆಗಳು ನಿಲ್ಲುತ್ತಿಲ್ಲ. ಇತ್ತೀಚೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 30 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಇಂಡಿಗೋ, ಏರ್ ಇಂಡಿಯಾ (Air India) ಮತ್ತು ವಿಸ್ತಾರಾ (Vistara) ಕಂಪನಿಗಳ 30 ವಿಮಾನಗಳಿಗೆ (Flights) ಬೆದರಿಕೆ ಕರೆಗಳು ಮತ್ತು ಮೇಲ್‌ಗಳು ಬಂದಿವೆ. ಸೋಮವಾರವೂ ಅಪರಿಚಿತ ದುಷ್ಕರ್ಮಿಗಳು ವಿಸ್ತಾರಾ ಏರ್‌ಲೈನ್ಸ್‌ನ ವಿಮಾನಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಿದ್ದ.
ಬೆಂಗಳೂರು ಕೆಂಗೇರಿಯಲ್ಲಿ ದುರ್ಘಟನೆ, ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಅಣ್ಣ ತಂಗಿ
ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳನ್ನು ಭದ್ರತಾ ಸಿಬ್ಬಂದಿ ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ದೇಶದ ವಿಮಾನಯಾನ ಕ್ಷೇತ್ರವನ್ನು ಅಪಖ್ಯಾತಿಗೊಳಿಸಲು ಯಾರೋ ಈ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆದರಿಕೆ ಕರೆಯನ್ನು ಸ್ವೀಕರಿಸಿದ ನಂತರ, ವಿಮಾನದಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತದೆ, ಇದು ಹಲವಾರು ಗಂಟೆಗಳ ವಿಳಂಬವನ್ನು ಉಂಟುಮಾಡುತ್ತದೆ. ಇದರಿಂದ ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟುಮಾಡುತ್ತದೆ
ಕನ್ನಡ ಟೀಚರ್.. ಬೆಂಗಳೂರಿನ ಈ ಆಟೋ ಡ್ರೈವರ್! ಇಲ್ಲಿದೆ ವೈರಲ್ ಸುದ್ದಿ
ಇನ್ನು ಈ ಬಗ್ಗೆ ಸರ್ಕಾರ ತೀಕ್ಷ್ಣ ಗಮನಹರಿಸಿದ್ದು ಇಂತಹ ಬೆದರಿಕೆ ಹಿಂದಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗುತ್ತದೆ ಎಂದು ಎಚ್ಚರಿಗೆ ನೀಡಿದೆ.
Constant bomb threat calls to national flights including Bengaluru