ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿಗಳು ಕ್ಯಾನ್ಸಲ್! ಗೃಹಲಕ್ಷ್ಮಿ ಯೋಜನೆ ಹಣ ಸಿಗಲ್ಲ

Story Highlights

ಗೃಹಲಕ್ಷ್ಮಿ ಯೋಜನೆಯಿಂದ ಸರ್ಕಾರಕ್ಕೆ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ ಎಂಬ ಆರೋಪ ಇದೀಗ ಗಂಭೀರ ಚರ್ಚೆಯಾಗುತ್ತಿದೆ.

  • ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆ
  • ಗೃಹಲಕ್ಷ್ಮಿ ಯೋಜನೆಯ ಹೊರೆ ತಪ್ಪಿಸಲು ಕ್ರಮ ಎಂಬ ಆರೋಪ
  • ರಾಜ್ಯದ 11 ಲಕ್ಷ ಪಡಿತರ ಚೀಟಿಗಳು ರದ್ದು

ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಹಾಗೂ ಬಸ್ ಫ್ರೀ ಯೋಜನೆಗಳನ್ನು ಜಾರಿಗೆ ತಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಮಹಿಳೆಯ ಖಾತೆಗೆ ನೇರವಾಗಿ ತಿಂಗಳಿಗೆ ₹2000 ಹಣ ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯಿಂದ (Gruha Lakshmi Scheme) ಸರ್ಕಾರಕ್ಕೆ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಪಿಎಲ್ ಕಾರ್ಡ್‌ಗಳ (BPL Ration Card) ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ ಎಂಬ ಆರೋಪ ಇದೀಗ ಗಂಭೀರ ಚರ್ಚೆಯಾಗುತ್ತಿದೆ.

ಹಾಸನ ಜಿಲ್ಲೆಯಲ್ಲಿಯೇ ಒಟ್ಟಾರೆ 3925 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ, ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಕಾರಣದಿಂದ 3408 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ₹1,20,000 ಆದಾಯ ಮಿತಿಯನ್ನು ಮೀರಿಸಿದ 415 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಗೊಂಡಿವೆ. ಸರ್ಕಾರಿ ನೌಕರರಾಗಿರುವ ಕಾರಣಕ್ಕಾಗಿ 102 ಕಾರ್ಡ್‌ಗಳು ಬದಲಾವಣೆಯಾಗಿವೆ.

BPL Ration Card

ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಸುನಿಲ್ ಕುಮಾರ್ ಈ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 11 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ. ಬಿಪಿಎಲ್ ಕಾರ್ಡ್‌ಗಳ ಈ ಬದಲಾವಣೆಯು ಗೃಹಲಕ್ಷ್ಮಿ ಯೋಜನೆಯ ಹಣಕಾಸಿನ ಉಳಿತಾಯಕ್ಕಾಗಿ ಸರ್ಕಾರ ಮಾಡಿರುವ ಉದ್ದೇಶಿತ ಕ್ರಮವೇ ಎಂದು ಪ್ರಶ್ನೆ ಹುಟ್ಟಿದೆ.

ಕೋಲಾರದಲ್ಲಿ (Kolar) ಈ ಪರಿವರ್ತನೆಯ ಪ್ರಕ್ರಿಯೆ ಸಕ್ರಿಯವಾಗಿದೆ. 6500 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾಯಿಸಲಾಗುತ್ತಿದೆ. ಅದರಲ್ಲಿ, ತೆರಿಗೆ ಪಾವತಿಸುತ್ತಿರುವ 3500 ಕಾರ್ಡ್‌ಗಳು ಮತ್ತು ಸರ್ಕಾರಿ ನೌಕರರ 80 ಕಾರ್ಡ್‌ಗಳು ಬಿಪಿಎಲ್ ನಿಂದ ಎಪಿಎಲ್‌ಗೆ ಬದಲಾವಣೆಗೊಂಡಿವೆ.

ಹಾಸನ ಜಿಲ್ಲೆಯಲ್ಲಿ 83 ಪಡಿತರ ಚೀಟಿಗಳನ್ನು ನೇರವಾಗಿ ರದ್ದುಪಡಿಸಲಾಗಿದೆ. ಇತರ ತಾಂತ್ರಿಕ ಕಾರಣಗಳಿಂದಲೂ ಅನೇಕ ಕಾರ್ಡ್‌ಗಳನ್ನು ಅಮಾನತು ಮಾಡಲಾಗಿದೆ. ಈ ಬದಲಾವಣೆಯು ಬಿಪಿಎಲ್ ಯೋಗ್ಯತಾ ಮಿತಿಗಳ ಪುನರ್ವಿಚಾರವಾಗಿ ನೋಡಲಾಗುತ್ತಿದೆಯೋ ಅಥವಾ ಯೋಜನೆಯ ಹೊರೆ ತಗ್ಗಿಸುವ ಉದ್ದೇಶವೋ ಎಂಬುದರ ಬಗ್ಗೆ ಚರ್ಚೆಗಳು ಮುಂದುವರಿಯುತ್ತಿವೆ.

Controversy Over BPL Card Cancellations in Karnataka

Related Stories