ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಬಿಟ್ಟುಹೋದ ಹೆಸರು ಸೇರಿಸಲು ಅವಕಾಶ! ಗುಡ್ ನ್ಯೂಸ್ ಕೊಟ್ಟ ಸರ್ಕಾರ!

ಮೊಬೈಲ್ ನಲ್ಲಿಯೇ ಹೇಗೆ ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಅರ್ಜಿ ಸಲ್ಲಿಸುವುದು? ಪೂರ್ತಿ ಮಾಹಿತಿಯನ್ನು ಇಂದು ತಿಳಿಸುತ್ತೇವೆ ನೋಡಿ..

Bengaluru, Karnataka, India
Edited By: Satish Raj Goravigere

ರೇಶನ್ ಕಾರ್ಡ್ ಹೊಂದಿರುವ ಹಲವರು ತಮ್ಮ ರೇಷನ್ ಕಾರ್ಡ್ ಗಳನ್ನು (Ration Cards) ತಿದ್ದುಪಡಿ ಮಾಡಬೇಕು ಎಂದು ಕಾಯುತ್ತಿದ್ದಾರೆ. ಅಂಥವರಿಗೆ ಈಗ ಸರ್ಕಾರ ಒಂದು ಅವಕಾಶ ಕೊಡುವುದಕ್ಕೆ ಮುಂದಾಗಿದೆ. ಈ ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಹೆಚ್ಚು ದಿನಗಳ ಕಾಲ ಅವಕಾಶ ಸಿಗಲಿದ್ದು, ಈ ಒಂದು ಕೆಲಸವನ್ನು ಸುಲಭವಾಗಿ ಹೇಗೆ ಮಾಡುವುದು, ಮೊಬೈಲ್ ನಲ್ಲಿಯೇ ಹೇಗೆ ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಅರ್ಜಿ ಸಲ್ಲಿಸುವುದು? ಪೂರ್ತಿ ಮಾಹಿತಿಯನ್ನು ಇಂದು ತಿಳಿಸುತ್ತೇವೆ ನೋಡಿ..

ನಿಮ್ಮ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ವಾ! ಅದಕ್ಕೂ ಬಂತು ಹೊಸ ರೂಲ್ಸ್

correction of ration card and addition of Family Members name

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು?

*ಆಧಾರ್ ಇಕೆವೈಸಿ
*ಅಡ್ರೆಸ್ ಚೇಂಜ್
*ಹೊಸ ಸದಸ್ಯರ ಹೆಸರು ಸೇರಿಸುವುದು
*ನ್ಯಾಯಬೆಲೆ ಅಂಗಡಿಯ ಬದಲಾವಣೆ
*ಹೆಸರು ತಿದ್ದುಪಡಿ
ಇದಿಷ್ಟು ಕೆಲಸಗಳನ್ನು ಕೂಡ ಮಾಡಬಹುದು.

ಬೇಕಾಗುವ ದಾಖಲೆಗಳು;

*ಅರ್ಜಿ ಹಾಕುವವರ ಆಧಾರ್ ಕಾರ್ಡ್ ಕಾಪಿ
*ಹೊಸ ಹೆಸರು ಸೇರಿಸಲು ಕ್ಯಾಸ್ಟ್ ಮತ್ತು ಇನ್ಕನ್ ಸರ್ಟಿಫಿಕೇಟ್
*ಫೋನ್ ನಂಬರ್
*ಈಗಿರುವ ರೇಷನ್ ಕಾರ್ಡ್

ಅರ್ಜಿ ಸಲ್ಲಿಕೆ ಎಲ್ಲಿ?

ಒಂದು ವೇಳೆ ನೀವು ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ, ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.

ಎಲ್ಲಿಯವರೆಗೂ ತಿದ್ದುಪಡಿ ಮಾಡಬಹುದು?

2/8/2024 ರಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು, 10/8/2024 ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ. ಈ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ಒಳಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಸರ್ವರ್ ತೊಂದರೆಯಾದರೆ, ಈ ಬಾರಿ ಕೂಡ ಪೂರ್ತಿ ಕೆಲಸ ಆಗುವುದಿಲ್ಲ.

ರೇಶನ್ ಕಾರ್ಡ್ ತಿದ್ದುಪಡಿಯ ಸ್ಟೇಟಸ್ ಚೆಕ್ ಮಾಡೋದು ಹೇಗೆ?

*ನೀವು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ, ಅಥವಾ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ, ಮೊದಲಿಗೆ ನೀವು ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಇದು https://ahara.kar.nic.in/Home/EServices ವೆಬ್ಸೈಟ್ ಲಿಂಕ್ ಆಗಿದೆ..

*ಇದರಲ್ಲಿ E status ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ, ಅದರಲ್ಲಿ ತಿದ್ದುಪಡಿ ವಿನಂತಿ ಸ್ಥಿತಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇಲ್ಲಿ ನಿಮಗೆ ಮೂರು ವಿವಿಧ ಆಪ್ಶನ್ ತೋರಿಸುತ್ತದೆ..

1. Only for Bengaluru Districts click here

(Bengaluru (Urban/Rural/City)Districts Only)

2. Only for Kalaburagi/Bengaluru Divisions Except Bengaluru (Urban/Rural/City) Click here

(Bidar, Ballari, Chikkaballapura, Chitradurga, Davanagere, Kalaburagi, Kolar, Koppal, Shivamogga, Raichur, Ramanagar, Tumkur, Yadgiri, Vijayanagara District Only)

3. Only for Belagavi/Mysuru Division Click here

(Belagavi, Bagalakote, Chamarajanagara, Chikkamagluru, Dakshina Kannada, Dharawada, Gadag, Hassan, Haveri, Kodagu, Mandya, Mysuru, Udupi, Uttarkannada, Vijayapura Districts Only)

*ಈ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಕ್ಲಿಕ್ ಮಾಡಿ, ಮುಂದುವರಿಯಬೇಕು.

*ಈಗ RC number ಮತ್ತು Acknowledgement ನುಂಬೇರ್ ಇವೆರಡನ್ನೂ ಹಾಕಿ Go ಎನ್ನುವ ಆಪ್ಶನ್ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ತೋರಿಸುತ್ತದೆ.

correction of ration card and addition of Family Members name