ನಿಮ್ಮ ಬಳಿ ಯಾವುದೇ ಹೊಲ ಅಥವಾ ಜಮೀನು ಇದ್ದಾಗ, ಹೊಲದಲ್ಲಿ ಕೃಷಿ ಚಟುವಟಿಕೆಗಳನ್ನು ಎಷ್ಟು ಮುಖ್ಯವೋ, ಅದೇ ರೀತಿ ಹೊಲಕ್ಕೆ ಹೋಗಿಬರುವ ದಾರಿ ಸರಿ ಇದೆಯಾ ಎಂದು ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗುತ್ತದೆ.
ಒಂದು ವೇಳೆ ಜಮೀನಿಗೆ ಹೋಗಿ ಬರುವುದಕ್ಕೆ ಸರಿಯಾದ ದಾರಿಯ ವ್ಯವಸ್ಥೆ ಇಲ್ಲದೇ ಹೋದರೆ, ಅದರಿಂದ ನೀವೆ ತೊಂದರೆ ಅನುಭವಿಸುತ್ತೀರಿ ಹಾಗಾಗಿ ಈ ಒಂದು ವಿಷಯದಲ್ಲಿ ನೀವು ಎಲ್ಲವನ್ನು ಸರಿಯಾಗಿ ಗಮನಿಸಿ, ಓಡಾಡುವುದಕ್ಕೆ ದಾರಿ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ..
ವ್ಯವಸಾಯ ಮಾಡುವವರು, ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಜಮೀನಿಗೆ ತೆಗೆದುಕೊಂಡು ಹೋಗಬೇಕು ಎಂದರೆ, ಅವುಗಳನ್ನು ತೆಗೆದುಕೊಂಡು ಹೋಗಲು, ಸರಿಯಾದ ಮಾರ್ಗ ಇರಬೇಕು. ಒಂದು ವೇಳೆ ನೀವು ಅಕ್ಕಪಕ್ಕದ ಜಮೀನಿನವರನ್ನು ಕೇಳಿ, ಅವರುಗಳು ಕೂಡ ನಿಮಗೆ ದಾರಿ ಕೊಡಲು ತಕರಾರು ಮಾಡುತ್ತಿದ್ದಾರೆ ಎಂದರೆ, ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.
ನೀವು ಕಾನೂನಿನ ಮೊರೆ ಹೋಗಿ, ಕಾನೂನಿನ ಮೂಲಕವೇ ನಿಮ್ಮ ಜಮೀನಿಗೆ ಹೋಗುವುದಕ್ಕೆ ದಾರಿ ಮಾಡಿಸಿಕೊಳ್ಳಬಹುದು. ಅದು ಹೇಗೆ ಎಂದು ಇಂದು ಪೂರ್ತಿಯಾಗಿ ತಿಳಿಯೋಣ..
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ನಿರ್ಧಾರ, ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ನಿಮಗಾಗಿಯೇ ಒಂದು ಕಾಯ್ದೆ ಇದೆ:
ಕಾನೂನು ವ್ಯವಸ್ಥೆಯಲ್ಲಿ ಒಂದು ಜಮೀನಿಗೆ ಹೋಗಲು ಬೇಕಾದ ದಾರಿಯ ಬಗ್ಗೆ ಕಾನೂನು ಜಾರಿಗೆ ತರಲಾಗಿದೆ. ಇದರ ಹೆಸರು Easement Act, ಇದರಲ್ಲಿ Easement of Necessity ಎನ್ನುವ ಒಂದು ವಿಶೇಷತೆ ಇದೆ.
ಈ ಕಾನೂನಿನ ನಿಯಮದ ಅರ್ಥವೇನು ಎಂದರೆ, ಯಾವುದೇ ಜಮೀನಿನ ಮುಂಭಾಗದಲ್ಲಿ ಇನ್ನೊಂದು ಜಮೀನು ಇದ್ದಾಗ, ಹಿಂಭಾಗದಲ್ಲಿ ಇರುವ ರೈತರು ಮುಂಭಾಗದಲ್ಲಿ ಇರುವ ರೈತರಿಗಾಗಿ ಜಮೀನಿಗೆ ಹೋಗುವುದಕ್ಕೆ ದಾರಿ ಬಿಟ್ಟುಕೊಡಬೇಕು. ಹಾಗಾಗಿ ಒಂದು ವೇಳೆ ನಿಮಗೆ ದಾರಿ ಕೊಡುತ್ತಿಲ್ಲ ಎಂದರೆ, ಕೇಸ್ ಹಾಕಿ ದಾರಿ ಪಡೆಯಬಹುದು..
Easement of Prescription:
Easement act ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವಿದೆ. ಅದೇನು ಎಂದರೆ, ಒಂದು ವೇಳೆ ಜಮೀನಿನ ದಾರಿ ಬಹಳ ವರ್ಷಗಳ ಹಿಂದೆಯೇ ಮುಚ್ಚಿ ಹೋಗಿ, ಅದೇ ದಾರಿಯಲ್ಲಿ ವ್ಯವಸಾಯ ಮಾಡುವುದಕ್ಕೆ ಶುರು ಮಾಡಿಬಿಟ್ಟಿದ್ದರೆ, ಆ ಥರದ ಪರಿಸ್ಥಿತಿಯಲ್ಲಿ ಕೂಡ ನೀವು ಕಾನೂನಿನ ಮೊರೆ ಹೋಗಬಹುದು.
ಕಾನೂನಿನ ಮೂಲಕ ಕಾಲುದಾರಿಯ ವಿಚಾರದಲ್ಲಿ ಸಹಾಯಧನ ಪಡೆಯುವುದಕ್ಕೆ ಅರ್ಜಿ ಸಲ್ಲಿಸಬಹುದು. ರೈತರಿಗೆ ಅನುಕೂಲ ಆಗುವ ಹಾಗೆ ಈ ಒಂದು ಕಾನೂನನ್ನು ಜಾರಿಗೆ ತರಲಾಗಿದೆ.
ಗೃಹಲಕ್ಷ್ಮಿ ಹಣ ಇಂದು ಬರುತ್ತೆ, ನಾಳೆ ಬರುತ್ತೆ ಅಂತ ಕಾಯ್ತಾ ಇರೋ ಮಹಿಳೆಯರಿಗೆ ಇಲ್ಲಿದೆ ಅಪ್ಡೇಟ್
Easement of Custom:
Easement Act ಬಗ್ಗೆ ತಿಳಿದುಕೊಳ್ಳಬೇಕಾದ ಮತ್ತೊಂದು ಪ್ರಮುಖವಾದ ವಿಷಯ ಇದು. ಇದರ ಮೂಲಕ ನಾವು ತಿಳಿಯಬೇಕಾಗಿರುವುದು ಏನು ಎಂದರೆ, ಒಂದು ವೇಳೆ ನಿಮ್ಮ ತಾತ, ಮುತ್ತಾತ ಅವರ ಸಮಯದಿಂದಲು ಅಲ್ಲಿ ದಾರಿಯ ವ್ಯವಸ್ಥೆ ಇದ್ದು, ಅದನ್ನು ಕಾಲುದಾರಿಯಾಗಿ ಬಳಕೆ ಮಾಡುತ್ತಿದ್ದರೆ, ಆ ದಾರಿಯನ್ನು ಮುಚ್ಚುವ ಹಾಗಿಲ್ಲ.
ಇನ್ನೊಂದು ಜಮೀನಿಗೆ ಹೋಗುವುದಕ್ಕೆ ಆ ದಾರಿಯನ್ನು ನೀಡಬೇಕು ಎನ್ನುವ ಕಾನೂನಿನ ನಿಯಮವಿದೆ. ಇಷ್ಟೆಲ್ಲಾ ನಿಯಮಗಳು ರೈತರಿಗಾಗಿ ಇರುವಾಗ, ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.
new rules if Neighbors are Not giving way to your Agriculture Land
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.