ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ನಿರ್ಧಾರ, ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಯಾರೆಲ್ಲಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೋ ಅಂಥವರಿಗೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಎರಡು ಕೂಡ ಸಿಗುವುದಿಲ್ಲ.
ನಮ್ಮ ದೇಶದಲ್ಲಿ ಬಡತನದಲ್ಲಿರುವವರು ಕಷ್ಟ ಅನುಭವಿಸುವುದು ಬೇಡ ಎನ್ನುವ ಸಲುವಾಗಿ, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಿಸಲಾಗಿದೆ.
ಪ್ರಸ್ತುತ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕಡೆಯಿಂದ 5 ಗ್ಯಾರೆಂಟಿ ಯೋಜನೆಗಳು ಜಾರಿಗೆ ಬಂದ ನಂತರ, ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದುಕೊಂಡಿರುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ.
ಆದರೆ ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ, ನಮ್ಮ ರಾಜ್ಯದಲ್ಲಿ ಬಹಳಷ್ಟು ಜನರು ಸುಳ್ಳು ಮಾಹಿತಿಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ (BPL Card) ಮಾಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅರ್ಹರಿಗೆ ಮಾತ್ರ ಈ ಎಲ್ಲಾ ಸೌಲಭ್ಯಗಳು ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ, ಆದರೆ ಬಹಳಷ್ಟು ಜನರು ಬಡವರಾಗಿಲ್ಲದೇ ಹೋದರು ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಅಂಥವರ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಸುಮಾರು 12.7 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಈಗಾಗಲೇ ಕ್ಯಾನ್ಸಲ್ ಮಾಡಲಾಗಿದೆ.
ಗೃಹಲಕ್ಷ್ಮಿ ಹಣ ಇಂದು ಬರುತ್ತೆ, ನಾಳೆ ಬರುತ್ತೆ ಅಂತ ಕಾಯ್ತಾ ಇರೋ ಮಹಿಳೆಯರಿಗೆ ಇಲ್ಲಿದೆ ಅಪ್ಡೇಟ್
ಈ ಒಂದು ಮಾಹಿತಿ ಇದೀಗ ತಿಳಿದುಬಂದಿದ್ದು, ಸರ್ಕಾರ ಈಗ ನಕಲಿ ದಾಖಲೆಗಳು, ನಕಲಿ ಮಾಹಿತಿಗಳನ್ನು ನೀಡಿ ರೇಷನ್ ಕಾರ್ಡ್ ಮಾಡಿಸಿರುವವರನ್ನು ಕಂಡು ಹಿಡಿಯಲು, RTO ಕಚೇರಿ, ಆದಾಯ ತೆರಿಗೆ ಇಲಾಖೆ, ಸಬ್ ರಿಜಿಸ್ಟ್ರಾರ್ ಆಫೀಸ್ ಈ ಎಲ್ಲಾ ಕಡೆಯಿಂದ ಡೇಟಾ ಬೇಸ್ ಕಲೆಕ್ಟ್ ಮಾಡಿ, ಬಿಪಿಎಲ್ ಕಾರ್ಡ್ ಹೊಂದಿರುವವರ ಬಗ್ಗೆ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದು, ಈಗಾಗಲೇ ಸಾಕಷ್ಟು ಜನರ ರೇಷನ್ ಕಾರ್ಡ್ ಅನ್ನು ಬಂದ್ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಎಲ್ಲರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್:
*ಯಾರೆಲ್ಲಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೋ ಅಂಥವರಿಗೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಎರಡು ಕೂಡ ಸಿಗುವುದಿಲ್ಲ.
*ಬಿಪಿಎಲ್ ಕಾರ್ಡ್ ಇರುವವರ ಹತ್ತಿರ ದುಬಾರಿ ಬೆಲೆಯ ಸ್ವಂತ ಕಾರ್ ಇರಬಾರದು.
*ಇವರ ಬಳಿ ಇರುವ ಕೃಷಿ ಭೂಮಿ ಎಕರೆಗಿಂತ ಜಾಸ್ತಿ ಇರಬಾರದು.
*ಸರ್ಕಾರಿ ಕೆಲಸ ಹೊಂದಿರುವವರಿಗೆ ಕೂಡ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.
ಎಲ್ಲರ ಬಗ್ಗೆ ಕೂಡ ಆದಾಯ ತೆರಿಗೆ ಇಲಾಖೆ ಇಂದ ಮಾಹಿತಿಗಳನ್ನು ಪಡೆಯಲಾಗುತ್ತಿದೆ, ಯಾರೆಲ್ಲರ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಜಾಸ್ತಿ ಇದೆಯೋ, ಅವರೆಲ್ಲರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.
ಹಾಗೆಯೇ ಯಾರೆಲ್ಲರ ಬಳಿ ಸ್ವಂತದ್ದೇ ಆಗಿರುವ ದುಬಾರಿ ಕಾರ್ ಇದೆಯೋ ಅವರೆಲ್ಲರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ. ಕ್ಯಾನ್ಸಲ್ ಆಗಿರುವವರ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಬದಲಾಯಿಸಲಾಗಿದೆ. ಅರ್ಹತೆ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಲಿ ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.
Decision to cancel the ration card of such people, strict action by the government