ಬೆಂಗಳೂರು ಕೆಂಪೇಗೌಡ ಏರ್ಪೋಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಇಲಿ, ಹಲ್ಲಿ, ಆಮೆ ಪತ್ತೆ

Story Highlights

ಕಸ್ಟಮ್ಸ್ ಅಧಿಕಾರಿಗಳು ಇನ್ನೊಂದು ಪ್ರಕರಣದಲ್ಲಿ ಕೌಲಲಾಂಪುರದಿಂದ ಕೆಂಪೇಗೌಡ ಏರ್ಪೋಟ್​ಗೆ ಒಳ ಉಡುಪಿನಲ್ಲಿ ಒಂದುೂವರೆ ಕೆಜಿ ಚಿನ್ನ (Gold) ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ವೇಳೆ ಪತ್ತೆಯಾಗಿದ್ದು, ಬಂಧಿಸಲಾಗಿದೆ

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ (Bengaluru Kempegowda International Airport) ಕಸ್ಟಮ್ಸ್‌ ಅಧಿಕಾರಿಗಳು 40 ಬಾಕ್ಸ್‌ಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಪ್ರಾಣಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದ ಪ್ರಾಣಿಗಳಲ್ಲಿ ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ ಹಾಗೂ ಕೆಂಪು ಇಲಿ ಸೇರಿವೆ. ಈ ಪ್ರಾಣಿಗಳನ್ನು ಕೌಲಲಾಂಪುರದಿಂದ (Kuala Lumpur) MHO192 ವಿಮಾನದಲ್ಲಿ ತರಲಾಗಿತ್ತು.

ಏರ್‌ಪೋರ್ಟ್‌ನಲ್ಲಿ (Airport) ಪರಿಶೀಲನೆ ಸಮಯದಲ್ಲಿ ಬಾಕ್ಸ್‌ಗಳಲ್ಲಿ ಪ್ರಾಣಿಗಳಿರುವುದನ್ನು ಪತ್ತೆ ಮಾಡಲಾಗಿದೆ. ಹೀಗಾಗಿ, ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆ (Wildlife Protection Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ, ಕಸ್ಟಮ್ಸ್ ಅಧಿಕಾರಿಗಳು ಇನ್ನೊಂದು ಪ್ರಕರಣದಲ್ಲಿ ಕೌಲಲಾಂಪುರದಿಂದ ಕೆಂಪೇಗೌಡ ಏರ್ಪೋಟ್​ಗೆ ಒಳ ಉಡುಪಿನಲ್ಲಿ ಒಂದುೂವರೆ ಕೆಜಿ ಚಿನ್ನ (Gold) ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ವೇಳೆ ಪತ್ತೆಯಾಗಿದ್ದು ಆ ವ್ಯಕ್ತಿಯನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಒಂದೂವರೆ ಕೆಜಿ ಚಿನ್ನವನ್ನ ವಶಪಡಿಸಿಕೊಂಡಿದ್ದರು.

Customs Seizes Animals at Bengaluru Kempegowda International Airport

Related Stories