ಕರ್ನಾಟಕ ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಳ, ಬೆಂಗಳೂರು ಪ್ರಮುಖ ಟಾರ್ಗೆಟ್
ಸೈಬರ್ ಕ್ರೈಂ ಹೆಚ್ಚಳ: ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ದುಃಖಕರ ಸ್ಥಿತಿ, ಸೈಬರ್ ಅಪರಾಧಿಗಳಿಗೆ ಬೆಂಗಳೂರು ರಾಜ್ಯದ ಪ್ರಮುಖ ತಾಣವಾಗಿದೆ.

- ಬೆಂಗಳೂರಿನಲ್ಲಿ ಶೇಕಡಾ 80 ಸೈಬರ್ ವಂಚನೆಗಳು
- 1930 ಸಹಾಯವಾಣಿ ಮೂಲಕ ಲಕ್ಷಾಂತರ ಕರೆಗಳು
- ವಿದ್ಯಾವಂತರು, ಉದ್ಯಮಿಗಳೆ ವಂಚನೆಗೆ ಬಲಿ
ಬೆಂಗಳೂರು (Bengaluru News): ಸೈಬರ್ ಅಪರಾಧಿಗಳಿಂದ ರಕ್ಷಣೆ ಪಡೆಯುವಿಕೆ ತಕ್ಷಣ ಕ್ರಮ ಕೈಗೊಂಡರೆ ಸಾಧ್ಯವಾಗಿದೆ. ತಕ್ಷಣವೇ ದೂರು ನೀಡಿದರೆ “ಗೋಲ್ಡನ್ ಅವರ್” ಸಮಯದಲ್ಲಿ ಹಣವನ್ನು ಮರುಪಡೆಯುವ ಸಾಧ್ಯತೆ ಇದೆ.
ಈ ಮಾಹಿತಿಯನ್ನು ತಿಳಿದುಕೊಂಡು ಇದೀಗ ಜನರು 1930 ಸಹಾಯವಾಣಿ ಮೂಲಕ ದೂರು ನೀಡುವಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ದೂರು ದಾಖಲಿಸಿದವರು ತಮ್ಮ ಹಣವನ್ನು ಮರು ಪಡೆದುಕೊಂಡ ಘಟನಾವಳಿಗಳಿವೆ.
ರಾಜ್ಯದಲ್ಲಿ ಸೈಬರ್ ಅಪರಾಧದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿವಿಧ ರೀತಿಯ ವಂಚನೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಖಾಸಗಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವುದು, ಡಿಜಿಟಲ್ ಜಾಲಗಳಲ್ಲಿ ಬಿಕ್ಕಟ್ಟಿಗೆ ಒಳಗಾಗುವುದು, ಹಾಗೂ ಆನ್ಲೈನ್ ಜಾಹೀರಾತುಗಳ ಮೂಲಕ ಹಣ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಆಸ್ತಿ ನೋಂದಣಿ ಕಾನೂನಿನಲ್ಲಿ ತಿದ್ದುಪಡಿ! ಜಿಪಿಎ ಆಧಾರಿತ ಆಸ್ತಿಗೆ ಹೊಸ ರೂಲ್ಸ್
2024 ರಲ್ಲಿ ಒಟ್ಟೂ 10.79 ಲಕ್ಷ ಕರೆಗಳು 1930 ಕ್ಕೆ ಬಂದಿದ್ದು, ಮೇ ಅಂತ್ಯದ ಹೊತ್ತಿಗೆ ಈ ಸಂಖ್ಯೆಯು 17.50 ಲಕ್ಷಕ್ಕೆ ಏರಿದೆ. ಇವುಗಳಲ್ಲಿ ಶೇಕಡಾ ಹೆಚ್ಚಿನವು ಬೆಂಗಳೂರಿನಿಂದಲೇ ಬಂದಿವೆ. 2024 ರಲ್ಲಿ ಒಟ್ಟು ವಂಚನೆಯ ಮೊತ್ತ 2,396 ಕೋಟಿ ರೂ. ಇದ್ದರೆ, 2025 ರ ಮೊದಲ 5 ತಿಂಗಳಲ್ಲಿ ಈ ಮೊತ್ತ 938 ಕೋಟಿ ರೂ.ಗೆ ತಲುಪಿದೆ ಎಂದು ಗೃಹ ಇಲಾಖೆ ವರದಿ ಮಾಡಿದೆ.
ಫೋನ್ ಕರೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ 17.5 ಲಕ್ಷಕ್ಕೂ ಅಧಿಕ ಕರೆಗಳು ಬಂದಿದ್ದು, ಸೈಬರ್ ಅಪರಾಧಿಗಳ ವಿರುದ್ಧ ಜನರಲ್ಲಿ ಅರಿವು ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಆದರೆ ವಂಚನೆಗಳು ತಡೆಯಲಾಗುತ್ತಿಲ್ಲ ಎಂಬುದು ಆತಂಕಕಾರಿ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಮತ್ತೊಂದು ನವ ಶಕ್ತಿ ಸ್ಕೀಮ್
ವಿದ್ಯಾವಂತರು, ನಿವೃತ್ತ ಅಧಿಕಾರಿಗಳು ಮತ್ತು ಉದ್ಯಮಿಗಳೇ ಈ ವಂಚನೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅವರು ಬಳಸುತ್ತಿರುವ ಮೊಬೈಲ್ ಅಪ್ಲಿಕೇಶನ್ಗಳು, ಆನ್ಲೈನ್ ಜಾಹೀರಾತುಗಳು, ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್ ಕಳ್ಳರು ಅವರ ಮಾಹಿತಿ ಪಡೆದು ಹಣ ವಂಚಿಸುತ್ತಿದ್ದಾರೆ.
ಸೈಬರ್ ಅಪರಾಧಿಗಳಿಂದ ಜನರು ಮೋಸ ಹೋಗುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣಗಳನ್ನು ವರದಿ ಮಾಡಲು ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ ಮತ್ತು ವೆಬ್ಚಾಟ್ ಅಪ್ಲಿಕೇಶನ್ ಅನ್ನು 1930 ಸಂಖ್ಯೆಯೊಂದಿಗೆ ರಚಿಸಲಾಗಿದ್ದು, ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ.
Cyber crimes rising in Karnataka, Bengaluru records more fraud cases







