ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ ಪ್ರಕಟ; ಆನ್ಲೈನ್ ಮೂಲಕವೂ ಅವಕಾಶ
- ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ಅವಕಾಶ
- ಆನ್ಲೈನ್ ನಲ್ಲಿಯೂ ಪಡಿತರ ಚೀಟಿ ತಿದ್ದುಪಡಿ ಮಾಡಬಹುದು
- ಮಕ್ಕಳ ಹೆಸರು ಸೇರ್ಪಡೆಗೆ ಈ ದಾಖಲೆ ಕಡ್ಡಾಯ
Ration Card Correction : ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡುತ್ತಿದೆ. ನಿಮ್ಮ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಹೊಸ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ.
ಏನೆಲ್ಲ ತಿದ್ದುಪಡಿ ಮಾಡಬಹುದು!
ಪಡಿತರ ಚೀಟಿಯಲ್ಲಿ, ಮನೆಯ ಸದಸ್ಯರ ಹೆಸರನ್ನು ಸೇರಿಸುವುದು, ಮಕ್ಕಳ ಹೆಸರನ್ನು ಸೇರಿಸುವುದು, ಹೆಂಡತಿ ಹೆಸರಿನ ಸೇರ್ಪಡೆ, ಸತ್ತು ಹೋಗಿರುವ ಸದಸ್ಯ ಹೆಸರನ್ನು ತೆಗೆದುಹಾಕುವುದು, ವಿಳಾಸ ತಿದ್ದುಪಡಿ ಹೀಗೆ ಮೊದಲಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ.
ಎಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು?
ಹತ್ತಿರದ ನ್ಯಾಯ ಬೆಲೆ ಅಂಗಡಿಯಲ್ಲಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಸೈಬರ್ ಕೇಂದ್ರಕ್ಕೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ತಿದ್ದುಪಡಿ ಮಾಡಿಕೊಳ್ಳಬಹುದು. ಇನ್ನು ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಲು ರಾಜ್ಯದ ಅಧಿಕೃತ ಆಹಾರ ಸರಬರಾಜು ಇಲಾಖೆ ವೆಬ್ ಸೈಟ್ ಗೆ ಹೋಗಿ ನಿಮ್ಮ ಐಡಿ ಕ್ರಿಯೇಟ್ ಮಾಡಿ ನಂತರ ತಿದ್ದುಪಡಿ ಮಾಡಿಕೊಳ್ಳಬಹುದು.
ಬೇಕಾಗಿರುವ ದಾಖಲೆಗಳು
ಮಕ್ಕಳ ಹೆಸರು ಸೇರ್ಪಡೆಗೆ, ಜನನ ಪ್ರಮಾಣ ಪತ್ರ ಮತ್ತು ಪಾಲಕರ ಆಧಾರ್ ಕಾರ್ಡ್ ದಾಖಲೆಯಾಗಿ ಕೊಡಬೇಕು. ಹೆಂಡತಿ ಹೆಸರು ಸೇರಿಸಲು ಮದುವೆ ಸರ್ಟಿಫಿಕೇಟ್ ಕೊಡಬೇಕು. ವಿಳಾಸ ಬದಲಿಸುವುದಕ್ಕೆ, ಕರೆಂಟ್ ಬಿಲ್ ಅಥವಾ ವಿಳಾಸ ಪುರಾವೆ ಕೊಡಬೇಕು.
ಕೊನೆಯ ದಿನಾಂಕ ಪ್ರಕಟ
ಇನ್ನು ಪಡಿತರ ಚೀಟಿಯಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಜನವರಿ 31, 2025 ಕೊನೆಯ ದಿನಾಂಕವಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ತಿದ್ದುಪಡಿಗೆ ಅವಕಾಶ ಇದೆ. ಅಷ್ಟರ ಒಳಗೆ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಿ. ಪಡಿತರ ಚೀಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ, ಮುಂದಿನ ದಿನಗಳಲ್ಲಿ ಪಡಿತರ ವಸ್ತುಗಳು ಸಿಗದೇ ಹೋಗಬಹುದು.
Deadline for Ration Card Correction Announced, Online Option Available