ಬೆಂಗಳೂರು ಹಳೆಯ ಮತ್ತು ಅಕ್ರಮ ಕಟ್ಟಡಗಳ ನೆಲಸಮ! ಘರ್ಜಿಸಿದ ಜೆಸಿಬಿ
ಬೆಂಗಳೂರು ನಗರದ ಬಾಬುಸಾಪಾಳ್ಯದಲ್ಲಿ ಬೃಹತ್ ಕಟ್ಟಡ ಕುಸಿದು 9 ಮಂದಿ ಸಾವನ್ನಪ್ಪಿದ ದುರಂತದಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.
ಬೆಂಗಳೂರು (Bengaluru): ಬೆಂಗಳೂರು ನಗರದ ಬಾಬುಸಾಪಾಳ್ಯದಲ್ಲಿ ಬೃಹತ್ ಕಟ್ಟಡ ಕುಸಿದು 9 ಮಂದಿ ಸಾವನ್ನಪ್ಪಿದ ದುರಂತದಿಂದ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ. ಹಳೆಯ, ಅಕ್ರಮ ಕಟ್ಟಡಗಳತ್ತ ಗಮನ ಹರಿಸಲಾಗಿದೆ.
ಬುಧವಾರ ಮಹದೇವಪುರ ದಲ್ಲಿ (Mahadevapura) ಶಿಥಿಲಗೊಂಡ ಕಟ್ಟಡಗಳು ನೆಲಸಮಗೊಂಡಿವೆ. 30 ರಿಂದ 60 ಚದರಡಿಯಲ್ಲಿ ಫಿರೋಜ್ ಖಾನ್ ಎಂಬ ವ್ಯಕ್ತಿ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ನೆಲಮಹಡಿ ಮತ್ತು ಮೊದಲ ಮಹಡಿ ಶಿಥಿಲಗೊಂಡಿದ್ದವು, ನೋಟಿಸ್ ನೀಡಿದ ನಂತರ ಪಾಲಿಕೆ ಎಂಜಿನಿಯರ್‌ಗಳು ಜೆಸಿಬಿ ಯಂತ್ರಗಳ ಮೂಲಕ ಕಟ್ಟಡವನ್ನು ಕೆಡವಿದರು. ಇಸ್ಲಾಂಪುರ, ಕಗ್ಗದಾಸಪುರದಲ್ಲೂ ನೆಲಸಮ ನಡೆದಿದೆ.
ಬೆಂಗಳೂರು: ಕರ್ನಾಟಕ ಉಚಿತ ಬಸ್ ಯೋಜನೆ ರದ್ದಾಗುವ ಸಾಧ್ಯತೆ! ಇಲ್ಲಿದೆ ಬಿಗ್ ಅಪ್ಡೇಟ್
ಹಳೆಯ, ಅಕ್ರಮ ಕಟ್ಟಡಗಳ ಸರ್ವೇ ನಡೆಸುತ್ತಿರುವ ಅಧಿಕಾರಿಗಳ ಅಂತಹ ಅಪಾಯ ಮಟ್ಟದಲ್ಲಿರುವ ಕಟ್ಟಡಗಳನ್ನು ಕೂಡಲೇ ಕೆಡವಲು ನೋಟಿಸ್ ಜಾರಿ ಮಾಡುತ್ತಿದ್ದಾರೆ, ಜೊತೆಗೆ ಅಂತಹ ಕಟ್ಟಡಗಳ (Old Buildings) ತೆರವು ಕಾರ್ಯ ಬಿರುಸಾಗಿ ನಡೆದಿದೆ.
ಇನ್ನು ಇತ್ತೀಚೆಗಷ್ಟೇ ಬಾಬುಸಾಪಾಳ್ಯದಲ್ಲಿ ಬೃಹತ್ ಕಟ್ಟಡ ಕುಸಿದು 9 ಮಂದಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಡಿ ಕೆ ಶಿವಕುಮಾರ್ ರವರು (DK Shivakumar) ರಾಜಕಾಲುವೆ ಒತ್ತುವರಿ ಸೇರಿದಂತೆ ಕೆರೆ ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗಿಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
Demolition of old and illegal buildings in Bengaluru