ಬೆಂಗಳೂರು ಮಳೆ, ನೀರು ತುಂಬಿದ ಗುಂಡಿಗೆ ಬಿದ್ದ ಅಂಗವಿಕಲ ಮಹಿಳೆ!
ಬೆಂಗಳೂರಿನ ರಸ್ತೆಗಳು ಪ್ರಯಾಣಿಕರಿಗೆ ನರಕ ತೋರಿಸುತ್ತಿವೆ. ಇತ್ತೀಚೆಗೆ, ಬೆಂಗಳೂರು ಪೂರ್ವ ವರ್ತೂರಿನ ರಸ್ತೆಯೊಂದರಲ್ಲಿ ಅಂಗವಿಕಲ ಮಹಿಳೆ ಗುಂಡಿಗೆ ಬಿದ್ದಿದ್ದಾರೆ
ಬೆಂಗಳೂರು (Bengaluru): ಬೆಂಗಳೂರಿನ ರಸ್ತೆಗಳು ಪ್ರಯಾಣಿಕರಿಗೆ ನರಕ ತೋರಿಸುತ್ತಿವೆ. ಇತ್ತೀಚೆಗೆ, ಬೆಂಗಳೂರು ಪೂರ್ವ ವರ್ತೂರಿನ ರಸ್ತೆಯೊಂದರಲ್ಲಿ (Bengaluru Varthur) ಅಂಗವಿಕಲ ಮಹಿಳೆ ಗುಂಡಿಗೆ ಬಿದ್ದಿದ್ದಾರೆ.
ನೀರು ತುಂಬಿದ ರಸ್ತೆಯಲ್ಲಿ ಮೂರು ಚಕ್ರದ ಸ್ಕೂಟರ್‌ನಲ್ಲಿ ಅಂಗವಿಕಲ ಮಹಿಳೆ ನಿಯಂತ್ರಣ ತಪ್ಪಿ ರಸ್ತೆಯೊಂದರಲ್ಲಿ ಬಿದ್ದಿದ್ದರು. ಹೊಂಡದಿಂದ ಹೊರಬರಲು ಹರಸಾಹಸ ಪಡುತ್ತಿದ್ದ ಆಕೆಗೆ ಸ್ಥಳೀಯರು ಸಹಾಯ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ರಸ್ತೆಗಳ ದುಸ್ಥಿತಿ ಬಗ್ಗೆ ನೆಟ್ಟಿಗರು ತೀವ್ರ ಟೀಕೆ ಮಾಡುತ್ತಿದ್ದಾರೆ.
ಬೆಂಗಳೂರು: ಸಿಎಂ ಆಗಿದ್ದರೂ ನನಗೆ ಇನ್ನೂ ಸ್ವಂತ ಮನೆ ಇಲ್ಲ; ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ (Heavy Rains) ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಜನವಸತಿ ಪ್ರದೇಶಗಳು ಮತ್ತು ರಸ್ತೆಗಳು ಮೊಣಕಾಲು ಆಳದ ನೀರಿನಿಂದ ಜಲಾವೃತಗೊಂಡಿವೆ.
ಬಾಬುಸಾಪಾಳ್ಯದಲ್ಲಿ (Babusapalya) ಸುರಿದ ಭಾರಿ ಮಳೆಗೆ (Rain) ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕರು ಸಾವನ್ನಪಿದ್ದಾರೆ, ಯಲಹಂಕದಲ್ಲಿ (Yelahanka) ಮಂಗಳವಾರ ಕೇವಲ 6 ಗಂಟೆಗಳಲ್ಲಿ 157 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Disabled woman falls into pothole in waterlogged Bengaluru Varthur