ಬೆಂಗಳೂರು: ಸಿಎಂ ಆಗಿದ್ದರೂ ನನಗೆ ಇನ್ನೂ ಸ್ವಂತ ಮನೆ ಇಲ್ಲ; ಸಿದ್ದರಾಮಯ್ಯ

Story Highlights

ನಾನು ಮುಖ್ಯಮಂತ್ರಿಯಾಗಿದ್ದರೂ ಸ್ವಂತ ಮನೆ ಇಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ, ಅಲ್ಲದೆ ತಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ

ಬೆಂಗಳೂರು (Bengaluru): ನಾನು ಮುಖ್ಯಮಂತ್ರಿಯಾಗಿದ್ದರೂ ಸ್ವಂತ ಮನೆ ಇಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ (Karnataka CM Siddaramaiah) ಹೇಳಿದ್ದಾರೆ, ಅಲ್ಲದೆ ತಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.

ತಮ್ಮ ಕ್ಷೇತ್ರ ವರುಣಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ತಾವು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಪ್ರತಿಪಕ್ಷಗಳು ಅದರಲ್ಲೂ ಬಿಜೆಪಿ ಸಹಿಸಿಕೊಳ್ಳುತ್ತಿಲ್ಲ ಎಂದರು.

ಬೆಂಗಳೂರು ಸೇರಿದಂತೆ ದೇಶದ ವಿಮಾನಗಳಿಗೆ ನಿರಂತರ ಬಾಂಬ್ ಬೆದರಿಕೆ ಕರೆಗಳು

ತಾವು ಮುಖ್ಯಮಂತ್ರಿ ಆಗಿರುವುದು ಬಿಜೆಪಿಗೆ ಇಷ್ಟವಿಲ್ಲ ಎಂದ ಅವರು, ಸಾಮಾಜಿಕ ನ್ಯಾಯ ಹಾಗೂ ಬಡವರ ವಿರುದ್ಧ ಪಕ್ಷವಿದೆ ಎಂದು ಹೇಳಿದರು. ಬಡವರ ಪದ ಇರುವ ಪಕ್ಷ ನಮ್ಮದು, ಇಲ್ಲ ಸಲ್ಲದ ಆರೋಪಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.

ತಾನು ಎರಡನೇ ಭಾರಿ ಸಿಎಂ ಆಗಿದ್ದರೂ ತನಗೆ ಇನ್ನೂ ಸ್ವಂತ ಮನೆ ಇಲ್ಲ, ಆದರೆ ಪ್ರತಿಪಕ್ಷಗಳು ತನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿವೆ, ಅದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಕನ್ನಡ ಟೀಚರ್.. ಬೆಂಗಳೂರಿನ ಈ ಆಟೋ ಡ್ರೈವರ್! ಇಲ್ಲಿದೆ ವೈರಲ್ ಸುದ್ದಿ

Karnataka CM Siddaramaiah said that he does not even have his own house

Related Stories