ಅನುಮತಿ ಇಲ್ಲದೆ ಕಟ್ಟಡ, ಮನೆ ಕಟ್ಟುವವರಿಗೆ ಕಾನೂನು ಸಂಕಷ್ಟ: ಡಿ.ಕೆ.ಶಿವಕುಮಾರ್

ಕಾನೂನು ಅನುಮತಿ ಇಲ್ಲದೆ ಮನೆ ಕಟ್ಟಿದರೆ ನೀರು-ವಿದ್ಯುತ್ ಸಂಪರ್ಕವೇ ಸಿಗದು; ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು

  • ಸುಪ್ರೀಂ ತೀರ್ಪಿನಿಂದ ಮನೆ ಕಟ್ಟುವವರು ಸಮಸ್ಯೆಗೆ ಸಿಲುಕುವ ಸಾಧ್ಯತೆ
  • ಕಟ್ಟಡ ಅನುಮತಿ ಇಲ್ಲದೆ ಸಕ್ರಮ ಮಾಡುವುದು ಅಸಾಧ್ಯ: ಡಿಸಿಎಂ

ಬೆಂಗಳೂರು (Bengaluru): ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), “ಕಟ್ಟಡ ನಕ್ಷೆ (building plan), ಅನುಮತಿ ಹಾಗೂ ಕಾನೂನು ಮಾನ್ಯತೆ ಇಲ್ಲದ ಮನೆಗಳಿಗೆ ಮುಂದೆ ನೀರು ಅಥವಾ ವಿದ್ಯುತ್ ಸಂಪರ್ಕ (utilities) ಸಿಗುವುದಿಲ್ಲ” ಎಂದು ಎಚ್ಚರಿಸಿದರು.

ಇತ್ತೀಚೆಗಿನ ಸುಪ್ರೀಂ ಕೋರ್ಟ್ ತೀರ್ಪು ಎಲ್ಲ ರಾಜ್ಯಗಳಿಗೆ ಅನ್ವಯವಾಗಲಿದ್ದು, ಸರ್ಕಾರದ ಮೇಲೂ ಹೆಚ್ಚುವರಿ ಹೊಣೆಗಾರಿಕೆ ಬೀಳಲಿದೆ ಎಂದರು.

ಇದನ್ನೂ ಓದಿ: ಬೆಂಗಳೂರು ಸರ್ಕಾರಿ ಸೈಟುಗಳ ಹರಾಜು! ಕಮ್ಮಿ ಬೆಲೆಗೆ ನಿವೇಶನ ಖರೀದಿಸುವ ಅವಕಾಶ

“ಈ ತೀರ್ಪಿನಿಂದಾಗಿ ಈಗಾಗಲೇ 2.5 ಲಕ್ಷ ಮಂದಿ ಮನೆಗಳನ್ನು ಅನುಮತಿ ಇಲ್ಲದೆ ನಿರ್ಮಿಸಿರುವುದು ಮತ್ತು ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಜನರು ಮತ್ತಷ್ಟು ತೊಂದರೆ ಎದುರಿಸದಂತೆ ಈ ವಿಚಾರದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ” ಎಂದು ಹೇಳಿದರು.

ಈ ಕುರಿತು ಕಾನೂನು ಸಲಹೆಗಾರರೊಂದಿಗೆ ಚರ್ಚೆ ನಡೆಸಿರುವುದಾಗಿ ಅವರು ವಿವರಿಸಿದರು. “ಕೆಲವರು ಕೆಇಬಿಗೆ ಠೇವಣಿ ಮೊತ್ತ ಪಾವತಿಸಿದ್ದು, ಈಗ ಅದರ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದೇವೆ. ಬೇರೆ ರಾಜ್ಯಗಳು ಈ ತೀರ್ಪನ್ನು ಹೇಗೆ ನಿರ್ವಹಿಸುತ್ತಿವೆ ಎಂಬ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಗ್ರಾಮ ಪಂಚಾಯತಿಗಳಲ್ಲಿ ಇನ್ಮುಂದೆ ಇ-ಖಾತೆ ಕಡ್ಡಾಯ ಘೋಷಣೆ! ಬಿಗ್ ಅಪ್ಡೇಟ್

DK Shivakumar

ಸಕ್ರಮೀಕರಣದ ಪ್ರಶ್ನೆಗೆ ಉತ್ತರಿಸುತ್ತಾ, “ಅಕ್ರಮ ಮನೆಗಳಿಗೆ ಸಕ್ರಮ ಮಾಡಲು ಸುಪ್ರೀಂ ತಡೆಯಿದೆ. ಈಗಲೂ ಕೆಲವು ಶಾಸಕರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆದರೆ ಕಾನೂನು ಬದ್ಧ ರೀತಿಯಲ್ಲೇ ಜನರಿಗೆ ಸಹಾಯ ಮಾಡುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಂಪರ್ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಹೊರಟು 7 ದೇವಾಲಯಗಳ ದರ್ಶನ

“110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಸರ್ಕಾರ ಮುಂದಾಗಿತ್ತು. ಆದರೆ ಈ ತೀರ್ಪಿನಿಂದಾಗಿ ಬೆಂಗಳೂರು ಜಲಮಂಡಳಿಗೆ ತೊಂದರೆ ಉಂಟಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 39,000 ಸಂಪರ್ಕ ನೀಡಿದಿದ್ದೇವೆ. ಆದರೆ ಈ ವರ್ಷ ಕೇವಲ 300 ಮಾತ್ರ ನೀಡಿದ್ದೇವೆ” ಎಂಬುದನ್ನು ಶಿವಕುಮಾರ್ ಉಲ್ಲೇಖಿಸಿದರು.

DK Shivakumar warns, Don’t build houses without plan approval

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories