Bengaluru NewsKarnataka News

ಗೃಹಲಕ್ಷ್ಮಿ ಯೋಜನೆ ಹಣ 5 ಸಾವಿರ ಕೊಡ್ತೀವಿ! ಹೆಚ್‌ಡಿಕೆ, ಡಿಕೆಶಿ ನಡುವೆ ಮಾತಿನ ಸಮರ

ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಹೆಚ್‌ಡಿಕೆ ಮತ್ತು ಡಿಕೆಶಿ ನಡುವೆ ಮಾತಿನ ಸಮರ ತೀವ್ರವಾಗಿದೆ. 2000 ಬೇಡ, 5000 ನೀಡ್ತೀನಿ ಎಂಬ ಹೆಚ್‌ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

Publisher: Kannada News Today (Digital Media)

  • ಗೃಹಲಕ್ಷ್ಮಿ ಯೋಜನೆಗೆ ಕುಮಾರಸ್ವಾಮಿ ₹5000 ಕೊಡ್ತೀನಿ ಎಂದ್ರು
  • ಡಿಕೆಶಿ: ಸರ್ಕಾರ ಅವರ ಹಾಗೆ ಮಾಡಿದ್ರೆ ನಾನು ಸಹ ಕೊಡ್ತೀನಿ
  • ಹೆಚ್‌ಡಿಕೆ ಮತ್ತು ಡಿಕೆಶಿ ನಡುವೆ ಮಾತಿನ ಸಮರ

ಬೆಂಗಳೂರು (Bengaluru): ಬಿಜೆಪಿ (BJP) ಮತ್ತು ಜೆಡಿಎಸ್ (JDS) ವಿರುದ್ಧ ಕಾಂಗ್ರೆಸ್ ಸರ್ಕಾರದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಸಂಬಂಧಿಸಿದಂತೆ ಹೆಚ್‌ಡಿಕೆ ನೀಡಿದ ಹೇಳಿಕೆಯ ಬೆನ್ನಲ್ಲೇ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy), “ಈ ಸರ್ಕಾರ 2000 ಕೊಟ್ಟು ಬಡವರ ಉದ್ದಾರ ಮಾಡ್ತಿದೆ ಅನ್ನೋದು ನಗಣೀಯ. ನಾನಿದ್ದರೆ ಗೃಹಲಕ್ಷ್ಮಿಗೆ ₹5000 ಕೊಡ್ತೀನಿ,” ಎಂದು ಹೇಳಿದ್ದರು. ಅವರ ಈ ಮಾತು ತೀವ್ರ ಚರ್ಚೆಗೆ ಕಾರಣವಾಯಿತು.

ಗೃಹಲಕ್ಷ್ಮಿ ಯೋಜನೆ ಹಣ 5 ಸಾವಿರ ಕೊಡ್ತೀವಿ! ಹೆಚ್‌ಡಿಕೆ, ಡಿಕೆಶಿ ನಡುವೆ ಮಾತಿನ ಸಮರ

ಇದನ್ನೂ ಓದಿ: ಮೊಬೈಲ್ ಕ್ಯಾಂಟಿನ್‌ಗೆ ಸಿಗುತ್ತೆ ₹5 ಲಕ್ಷ ಸಬ್ಸಿಡಿ! ಏನಿದು ಯೋಜನೆ? ಇಲ್ಲಿದೆ ಡೀಟೇಲ್ಸ್

ಇದಕ್ಕೂ ಮುನ್ನ ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ, “ನಾನು ಶಕ್ತಿಯುತ ವ್ಯಕ್ತಿ. 3 ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ರೂ ಗಟ್ಟಿಯಾಗಿ ನಿಂತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜನತಾದಳವನ್ನ ಮುನ್ನಡೆಸುತ್ತೇನೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಗೃಹಲಕ್ಷ್ಮಿ ಯೋಜನೆ ವಿರುದ್ಧ ಟೀಕೆ ಮಾಡಿದ್ದು ಗಮನಾರ್ಹ.

HD Kumaraswamy

ಈ ಮಧ್ಯೆ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, “ಅವರು ಮಾಡುವಂತೆ ಸರ್ಕಾರ ನಡೆಸಿದ್ರೆ ನಾನು 2000 ಅಲ್ಲ, ₹5000 ಕೊಡ್ತೀನಿ” ಎಂದು ವ್ಯಂಗ್ಯಮಾಡಿದರು. ಜೊತೆಗೆ, “ಅವರು ಆರೋಗ್ಯವಾಗಿರಲಿ, ನನ್ನ ಶುಭಾಶಯ,” ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಈ ರೀತಿ ಮಾಡಲು ಸೂಚನೆ! ಬಿಗ್ ಅಪ್ಡೇಟ್

ಕುಮಾರಸ್ವಾಮಿ ಮತ್ತೊಂದು ದಿಕ್ಕಿನಲ್ಲಿ, “ಕಾವೇರಿ ನದಿಗೆ ಆರತಿ ಏಕೆ? ನಿಮ್ಮ ಮುಖಕ್ಕೆ ಆರತಿ ಎತ್ತಬೇಕಾ?” ಎಂಬ ವ್ಯಂಗ್ಯವನ್ನ ಕಾಂಗ್ರೆಸ್ ಸರ್ಕಾರದ ಕಾರ್ಯಪಧದ ವಿರುದ್ಧ ವ್ಯಕ್ತಪಡಿಸಿದರು. ಕಾವೇರಿ ಆರತಿಗೆ ₹92 ಕೋಟಿ ವೆಚ್ಚ ಮಾಡಬೇಕಿತ್ತ, ಎಂದೂ ಟೀಕಿಸಿದರು.

DK Shivakumar

ಡಿಕೆಶಿಯ ಮುಂದುವರೆದು, ವಿಮಾನ ದುರಂತದ ಘಟನೆ ಬಗ್ಗೆ ಮಾತನಾಡಿದ ಅವರು, “ಇಂತಹದು ಯಾವುದೇ ರಾಷ್ಟ್ರದಲ್ಲಿ ಆಗಬಾರದು. ನಾವು ಶೋಕ ವ್ಯಕ್ತಪಡಿಸುತ್ತಿದ್ದೇವೆ, ಆದರೆ ಇವರೆಲ್ಲ ರಾಜಕೀಯ ಮಾಡುತ್ತಿದ್ದಾರೆ,” ಎಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದರು.

DKS and HDK Talk War on Gruha Lakshmi Scheme

English Summary

Related Stories