Ads By Google
Bangalore News

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಅಕೌಂಟ್ ಗೆ ಬಂದಿಲ್ವಾ? ಹಾಗಿದ್ದಲ್ಲಿ ಈ ಕೆಲಸ ಮಾಡಿ

ಹಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುತ್ತಿದ್ದರು ಸಹ, ಕೆಲವರಿಗೆ ಮಾತ್ರ ಇನ್ನು ಕೂಡ ಅನ್ನಭಾಗ್ಯ ಯೋಜನೆಯ ಹಣ ಇನ್ನು ಕೂಡ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗುತ್ತಿಲ್ಲ.

Ads By Google

ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 5 ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿತು. ಆ ಯೋಜನೆಗಳ ಪೈಕಿ ಬಹುತೇಕ ಎಲ್ಲವೂ ಜಾರಿಗೆ ಬಂದಿದ್ದು, ಜನರು ಅವುಗಳ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಜನಸಮಾನ್ಯರಿಗೆ ಪ್ರತಿ ಕುಟುಂಬಕ್ಕೆ ಅನುಕೂಲ ಅಗುವಂಥ ಯೋಜನೆ ಅನ್ನಭಾಗ್ಯ ಯೋಜನೆ (Annabhagya Yojana), ಗೃಹಲಕ್ಷ್ಮೀ ಯೋಜನೆ ಮತ್ತು ಗೃಹಜ್ಯೋತಿ ಯೋಜನೆ ಆಗಿದೆ. ಅನ್ನಭಾಗ್ಯ ಯೋಜನೆ ಸಹ ಈ ಮೂರು ಯೋಜನೆಗಳಲ್ಲಿ ಪ್ರಮುಖವಾದದ್ದು.

ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮತ್ತು ಅಂತ್ಯೋದಯ ಕಾರ್ಡ್ ಇದೆಲ್ಲವೂ ಇರುವವರಿಗೆ ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಪ್ರತಿ ವ್ಯಕ್ತಿಗೆ ನೀಡಬೇಕು ಎಂದು ಪ್ಲಾನ್ ಮಾಡಿತ್ತು ಸರ್ಕಾರ.

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಹಂತ ಹಂತವಾಗಿ ಹಣ ಬಿಡುಗಡೆ

ಆದರೆ ಅಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದ ಕಾರಣ, ಒಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವುದಕ್ಕೆ ನಿರ್ಧಾರ ಮಾಡಿತು. ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5 ಕೆಜಿಗೆ 170 ರೂಪಾಯಿಗಳನ್ನು ಪ್ರತಿ ವ್ಯಕ್ತಿಗೆ ನೀಡುತ್ತಿದೆ.

ಈ 170 ರೂಪಾಯಿ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರು ಎಂದು ಇರುವ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ತಲುಪಲಿದೆ. 10 ತಿಂಗಳುಗಳಿಂದ ಜನರು ಅನ್ನಭಾಗ್ಯ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ಬಹಳಷ್ಟು ಜನರ ಹಸಿವು ನೀಗುವುದಕ್ಕೆ ಸಹಾಯ ಆಗುತ್ತಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಜನರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ಹಣದ ವರ್ಗಾವಣೆ ಆಗುತ್ತಲಿದೆ.

ಹಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುತ್ತಿದ್ದರು ಸಹ, ಕೆಲವರಿಗೆ ಮಾತ್ರ ಇನ್ನು ಕೂಡ ಅನ್ನಭಾಗ್ಯ ಯೋಜನೆಯ ಹಣ ಇನ್ನು ಕೂಡ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗುತ್ತಿಲ್ಲ. ಅಂಥವರಿಗೆ ಈಗ ಸರ್ಕಾರದ ಕಡೆಯಿಂದ ಒಂದು ಸೂಚನೆ ಸಿಕ್ಕಿದೆ, ಒಂದು ವೇಳೆ ನಿಮಗೂ ಕೂಡ ಇನ್ನು ಸಹ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ತಕ್ಷಣವೇ ಈ ಒಂದು ಕೆಲಸವನ್ನು ಮಾಡಿ. ಆಗ ಖಂಡಿತವಾಗಿಯು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬರುತ್ತದೆ.

ಕೃಷಿ ಭೂಮಿಯ ಸರ್ವೇ ನಂಬರ್ ಬಳಸಿ ಬರ ಪರಿಹಾರ ಹಣ ಎಷ್ಟು ಬಂದಿದೆ ಸ್ಟೇಟಸ್ ತಿಳಿಯಿರಿ!

ಈ ಕೆಲಸವನ್ನು ತಕ್ಷಣವೇ ಮಾಡಿ:

*ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ಈ ಕೂಡಲೇ ಅಪ್ಡೇಟ್ ಮಾಡಿಸಿ

*ನಿಮ್ಮ ರೇಷನ್ ಕಾರ್ಡ್ ನ kyc ಅಪ್ಡೇಟ್ ಮಾಡಿಸಿ

*ಮನೆಯ ಮುಖ್ಯಸ್ಥರ kyc ಮಾಡಿಸುವುದು ಬಹಳ ಮುಖ್ಯ ಆಗುತ್ತದೆ.

*ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿ.

ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಯಾರಿಗೆ ಬಂದಿಲ್ವೋ ಅವರಿಗೆ ಪೆಂಡಿಂಗ್ ಹಣ ಸೇರಿ ಒಟ್ಟಿಗೆ ₹4000 ಜಮೆ!

ಇದಿಷ್ಟು ಕೆಲಸಗಳನ್ನು ಮಾಡಿಸುವುದು ಬಹಳ ಮುಖ್ಯ ಆಗಿದ್ದು, ಈ ಕೂಡಲೇ ಮಾಡಿಸಿದರೆ, ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬರುವುದು ಖಚಿತ.

Do this if Annabhagya Yojana money not reached your Bank account yet

Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere