ಅನ್ನಭಾಗ್ಯ ಯೋಜನೆಯ ಹಣ ಅಕೌಂಟ್ ಗೆ ಇನ್ನೂ ಬರ್ತಿಲ್ವಾ? ಈ ಒಂದು ಕೆಲಸ ತಪ್ಪದೇ ಮಾಡಿ
ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ರೇಷನ್ ಕಾರ್ಡ್ (Ration Card) ಮತ್ತು ಅಂತ್ಯೋದಯ ಕಾರ್ಡ್ ಇರುವ ಕುಟುಂಬಗಳ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು
Annabhagya Scheme : ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದಲ್ಲಿ ಯಾರಿಗೂ ಹಸಿವಿನ ಸಮಸ್ಯೆ ಇರಬಾರದು, ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಬೇಕು ಎನ್ನುವ ಸದುದ್ದೇಶದಿಂದ ಶುರು ಮಾಡಿರುವ ಯೋಜನೆ ಅನ್ನಭಾಗ್ಯ ಯೋಜನೆ ಆಗಿದೆ.
ಎಲೆಕ್ಷನ್ ಗಿಂತ ಮೊದಲೇ ಅನ್ನಭಾಗ್ಯ ಯೋಜನೆಯ (Annabhagya Yojana) ಮೂಲಕ ಬಿಪಿಎಲ್ ರೇಷನ್ ಕಾರ್ಡ್ (Ration Card) ಮತ್ತು ಅಂತ್ಯೋದಯ ಕಾರ್ಡ್ ಇರುವ ಕುಟುಂಬಗಳ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ದಿನ ಬಿಡುಗಡೆ! ಮಹಿಳೆಯರೇ ಖಾತೆ ಚೆಕ್ ಮಾಡಿಕೊಳ್ಳಿ
ಆದರೆ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ, ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಿ, ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳ ಹಾಗೆ, ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ವ್ಯಕ್ತಿಗೆ 170 ರೂಪಾಯಿ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡುವುದಾಗಿ ಸರ್ಕಾರ ನಿರ್ಧರಿಸಿತ್ತು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗಿನಿಂದ ಕೂಡ ಸರ್ಕಾರ ಇದೇ ರೀತಿ ಮಾಡಿಕೊಂಡು ಬಂದಿದೆ.
ಹಲವರಿಗೆ ಇನ್ನು ಬಂದಿಲ್ಲ ಅನ್ನಭಾಗ್ಯ ಹಣ!
ಸರ್ಕಾರ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣವನ್ನು ವರ್ಗಾವಣೆ ಮಾಡುತ್ತಿದ್ದರು ಸಹ ಇನ್ನು ಕೂಡ ಹಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಅವರ ಬ್ಯಾಂಕ್ ಅಕೌಂಟ್ ತಲುಪಿಲ್ಲ. ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು ಇದೆ. ಅಂಥ ಜನರು ಇನ್ನುಮುಂದೆ ಯೋಚನೆ ಮಾಡುವ ಅಗತ್ಯವಿಲ್ಲ, ಈ ಒಂದು ಕೆಲಸ ಮಾಡಿದರೆ ಸಾಕು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬರುತ್ತದೆ..
ಇನ್ಮುಂದೆ ಇವರಿಗೆ ಮಾತ್ರ ಸಿಗೋದು ಹೊಸ ರೇಷನ್ ಕಾರ್ಡ್! ಸರ್ಕಾರದಿಂದ ಹೊಸ ರೂಲ್ಸ್
ಅನ್ನಭಾಗ್ಯ ಹಣ ಪಡೆಯಲು ಈ ಒಂದು ಕೆಲಸ ಮಾಡಿ!
ಅನ್ನಭಾಗ್ಯ ಯೋಜನೆಯ ಹಣ ಇನ್ನು ಕೂಡ ನಿಮ್ಮ ಅಕೌಂಟ್ ಗೆ ಬರದೇ ಇರುವುದಕ್ಕೆ ಕಾರಣ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಜೊತೆಗೆ ಲಿಂಕ್ ಆಗದೇ ಇರುವುದಕ್ಕೆ ಇರಬಹುದು ಅಥವಾ ಮನೆಯ ಮುಖ್ಯಸ್ಥರ ಸ್ಥಾನದಲ್ಲಿ ಯಾರು ಕೂಡ ಇಲ್ಲದಿರುವ ಕಾರಣಕ್ಕೂ ಹಣ ಬಂದಿಲ್ಲದೇ ಇರಬಹುದು.
ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎರಡನ್ನು ಚೆಕ್ ಮಾಡಿಸಿ, ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲದೇ ಹೋದರೆ ಜೂನ್ 14ರ ಒಳಗೆ ಉಚಿತವಾಗಿ ಅಪ್ಡೇಟ್ ಮಾಡಿಸಿ, ಮನೆಯ ಮುಖ್ಯಸ್ಥರ ಹೆಸರನ್ನು ಕೂಡ ಅಪ್ಡೇಟ್ ಮಾಡಿಸಿ.
ಪ್ರತಿ ತಿಂಗಳು 15ರ ಒಳಗೆ ಬರಲಿದೆ ಹಣ!
ಅನ್ನಭಾಗ್ಯ ಯೋಜನೆಯ ಹಣ ಪ್ರತಿ ತಿಂಗಳು 15ನೇ ತಾರೀಕಿನ ಒಳಗೆ ಫಲಾನುಭವಿಗಳ ಖಾತೆಯನ್ನು ತಲುಪುತ್ತದೆ ಎಂದು ಸರ್ಕಾರ ತಿಳಿಸಿದೆ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಕಾರಣ ಕಳೆದ 2 ತಿಂಗಳುಗಳ ಕಾಲ ಅನ್ನಭಾಗ್ಯ ಯೋಜನೆಯ ಹಣ ಸರಿಯಾಗಿ ಬಿಡುಗಡೆ ಆಗಿಲ್ಲ. ಮೇ 31ರ ಒಳಗೆ 10ನೇ ಕಂತಿನ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಆಗಬೇಕಿತ್ತು, ಆದರೆ ಈಗ ತಡವಾಗಿದ್ದು ಶೀಘ್ರದಲ್ಲೇ ಹಣ ಬಿಡುಗಡೆ ಆಗಲಿದೆ.
Do This if Annabhagya Yojana money still Not credited to the Bank account