ಬೆಂಗಳೂರು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ಎಂಜಿನಿಯರ್

Story Highlights

ಈತ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತಮ್ಮ MS Degree ಪೂರ್ಣಗೊಳಿಸಿ, ಮೈಂಡ್‌ಟ್ರೀ ಎಂಬ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡಿದ್ದವರು.

ಬೆಂಗಳೂರು (Bengaluru): ಕೇವಲ ಕೆಲವೇ ವರ್ಷಗಳ ಹಿಂದೆ ಯಶಸ್ವಿಯಾದ ವೃತ್ತಿಪರರಾಗಿದ್ದ ಒಬ್ಬರು ಇಂದು ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ಮನಕಲುಕುವ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವ್ಯಕ್ತಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತಮ್ಮ MS Degree ಪೂರ್ಣಗೊಳಿಸಿ, ಮೈಂಡ್‌ಟ್ರೀ ಎಂಬ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡಿದ್ದವರು. ಆದರೆ ಇದೀಗ, ಅವರು ಮನಸ್ಥಿತಿ ಆಘಾತಕ್ಕೆ ಒಳಗಾಗಿ ನಿರಾಶ್ರಿತನಾಗಿ ಬದಲಾಗಿದ್ದಾರೆ.

“X” ನಲ್ಲಿ ಕರ್ನಾಟಕ ಪೋರ್ಟ್‌ಫೋಲಿಯೊದ ಒಂದು ಪೋಸ್ಟ್ ಪ್ರಕಾರ, ಆತ ತಮ್ಮ ತಾಯ್ತಂದೆ ಮತ್ತು ಸಂಗಾತಿಯನ್ನು ಕಳೆದುಕೊಂಡ ಬಳಿಕ, ಅವರ ಜೀವನದಲ್ಲಿ ಬರಬಾರದ ಕಷ್ಟಗಳು ಬಂದವಂತೆ

“ನಾನು 2013ರಲ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಇದ್ದೆ. ನಂತರ ಬೆಂಗಳೂರಿಗೆ ಬಂದೆ. ನಾನು ಮೈಂಡ್‌ಟ್ರೀ ಅಲ್ಲಿ ಕೆಲಸ ಮಾಡುತ್ತಿದ್ದೆ. ಆಮೇಲೆ ನನ್ನ ಹೆತ್ತವರನ್ನು ಕಳೆದುಕೊಂಡೆ,” ಎಂದು ಈ ವ್ಯಕ್ತಿ ನವೆಂಬರ್ 22ರಂದು ಹಂಚಿಕೊಂಡ ಒಂದು ವಿಡಿಯೋದಲ್ಲಿ ತಮ್ಮ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರೀ ವೈರಲ್ ಆಗಿದೆ

Engineer Now Begging On Bengaluru Streets

English Summary
Related Stories