ರೈತರಿಗೆ ಗುಡ್ ನ್ಯೂಸ್, ವಿವಿಧ ಯೋಜನೆ ಅಡಿಯಲ್ಲಿ ಸಿಗುತ್ತಿದೆ ರೈತರಿಗೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ
Subsidy Loan Scheme : ಹುಬ್ಬಳ್ಳಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಡೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಯಂತ್ರೋಪಕರಣ ಯೋಜನೆಯ ಅಡಿಯಲ್ಲಿ ಈ ಎಲ್ಲಾ ಯೋಜನೆಯನ್ನು ಜಾರಿಗೆ ತರಲಾಗಿದೆ
Subsidy Loan Scheme : 2024-25ನೇ ವರ್ಷದಲ್ಲಿ ಇದೀಗ ರೈತರಿಗೆ ಒಂದು ಗುಡ್ ನ್ಯೂಸ್ ಕೇಳಿಬಂದಿದ್ದು, ತೋಟಗಾರಿಕೆ ಕೆಲಸ ಮಾಡುವ ಬೆಳೆಗಾರರಿಗೆ ಮತ್ತು ರೈತ ಉತ್ಪಾದಕ ಕಂಪನಿಯ ರೈತರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.
ಹುಬ್ಬಳ್ಳಿಯ ರೈತರಿಗೆ ಇದು ಸಂತೋಷದ ಸುದ್ದಿ ಆಗಿದ್ದು, ಹುಬ್ಬಳ್ಳಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಡೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಯಂತ್ರೋಪಕರಣ ಯೋಜನೆಯ ಅಡಿಯಲ್ಲಿ ಈ ಎಲ್ಲಾ ಯೋಜನೆಯನ್ನು ಜಾರಿಗೆ ತರಲಾಗಿದೆ..
ಇದೀಗ ಜಾರಿಗೆ ಬಂದಿರುವ ಈ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯುವುದು ಹೇಗೆ ಎಂದು, ಯಾವೆಲ್ಲಾ ಕೆಲಸಕ್ಕೆ Loan ಸಿಗುತ್ತದೆ ಎಂದರೆ, ಹಣ್ಣು (ಬಾಳೆಹಣ್ಣು), ಹೈಬ್ರಿಡ್ ತರಕಾರಿ ಜಾಗದ ವಿಸ್ತರಣೆ, ಹೂವುಗಳ ಜಾಗದ ವಿಸ್ತರಣೆ (ಕತ್ತರಿಸಿದ ಹೂವು, ಗಡ್ಡೆ ಜಾತಿಯ ಹೂವು, ಬಿಡಿ ಹೂವು), ತ
ಮ್ಮದೇ ಆದ ಕೃಷಿಹೊಂಡ, ಸಮುದಾಯ ಕೃಷಿಹೊಂಡ, ಸಣ್ಣ ಟ್ರ್ಯಾಕ್ಟರ್ (Upto 20 PTO HP) ಪಾಲಿಹೌಸ್, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್ ಹೌಸ್ ಮತ್ತು ತಳ್ಳುವ ಗಾಡಿ ಇದೆಲ್ಲದಕ್ಕೂ Loan ಪಡೆಯಬಹುದು.
ನಿಮ್ಮ ಎಷ್ಟೇ ಹಳೆಯ ಜಮೀನಿನ ದಾಖಲೆಗಳು ಬೇಕಾದ್ರೂ ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ! ಇಲ್ಲಿದೆ ಲಿಂಕ್
ಅರ್ಜಿ ಸಲ್ಲಿಕೆಗೆ ಅರ್ಹತೆ:
ಸರ್ಕಾರಿ ಜಾರಿಗೆ ತಂದಿರುವ ಹನಿ ನೀರಾವರಿ ಯೋಜನೆಯ ಅಡಿಯಲ್ಲಿ ತೋಟಗಾರಿಕೆಯ ಕೆಲಸಗಳನ್ನು ಮಾಡುವವರಿಗೆ, ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬೆಳೆಯುವವರಿಗೆ ಸರ್ಕಾರದ ಕಡೆಯಿಂದ ಸಹಾಯ ಧನ ಸಿಗುತ್ತದೆ. ಹಾಗೆಯೇ ತೋಟಗಾರಿಕೆ ಬೆಳೆಗಳಿಗೆ ಬೇಕಾಗುವ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಹಾಗೆ ಕೂಡ ಸಹಾಯಧನ ನಿಮಗೆ ಲಭ್ಯವಾಗುತ್ತದೆ.
ಅಗತ್ಯವಿರುವ ದಾಖಲೆಗಳು:
ಸರ್ಕಾರದಿಂದ ಸಿಗುವ ಈ ಸಹಾಯಧನವನ್ನು ಪಡೆಯಲು ಬೇಕಾಗುವ ದಾಖಲೆಗಳು, ರೈತರ ಹತ್ತಿರ ಸ್ವಂತ ಜಮೀನು ಮತ್ತು ನೀರಾವರಿ ಸೌಲಭ್ಯ ಇರಬೇಕು. ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ ಇರಬೇಕು, SC ವರ್ಗದವರಿಗೆ 17%, ST ವರ್ಗದವರಿಗೆ 7%, ಮಹಿಳೆಯರಿಗೆ 33%, ಅಲ್ಪಸಂಖ್ಯಾತ ವರ್ಗದವರಿಗೆ 5%, ಅಂಗವಿಕಲರಿಗೆ 3% ಮೀಸಲಾತಿ, ಈ ಯೋಜನೆಯ ಮೂಲಕ ಸಿಗುತ್ತದೆ.
ಅನರ್ಹ ಮಹಿಳೆಯರ ಪಟ್ಟಿ ಪರಿಶೀಲನೆ! ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಯೋಜನೆ ಅರ್ಜಿ ಸಲ್ಲಿಸಿ, ಸರ್ಕಾರದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಜುಲೈ 15 ಕೊನೆಯ ದಿನಾಂಕ ಆಗಿದೆ. ಈ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಈ ಬಗ್ಗೆ ಹುಬ್ಬಳ್ಳಿಯ ತೋಟಗಾರಿಕೆ ನಿರ್ದೇಶಕರಾಗಿರುವ ಪ್ರಭುಲಿಂಗ ಆರ್ ಗಡ್ಡದ ಅವರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯಲು, ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹುಬ್ಬಳ್ಳಿ (ಮೊ.ನಂ.9740164868) ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಛಬ್ಬಿ (ಮೊ.ನಂ.9164126426) ಸಹಾಯಕ ತೋಟಗಾರಿಕ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ (ಮೊ.ನಂ. 9663474155) ಈ ನಂಬರ್ ಗಳಿಗೆ ಕರೆ ಮಾಡಬಹುದು.
farmers are getting subsidy loans under various schemes