ಮಹಿಳೆಯರು ಕಷ್ಟಪಡದೇ ಮನೆ ನಡೆಸಿಕೊಂಡು ಹೋಗಬೇಕು, ಅವರ ಖರ್ಚು ವೆಚ್ಚಗಳಿಗೆ ಸ್ವಲ್ಪ ಆದರೂ ಸಹಾಯ ಆಗಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು.

ಈ ಒಂದು ಯೋಜನೆಯ (Gruha Lakshmi Scheme) ಮೂಲಕ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುವ ಭರವಸೆಯನ್ನು ನೀಡಿತು. ಅದೇ ರೀತಿ ಈಗ ಪ್ರತಿ ತಿಂಗಳು ಮಹಿಳೆಯರಿಗೆ ಹಣ ವರ್ಗಾವಣೆ (Money Transfer) ಆಗುತ್ತಿದೆ.

ಅನರ್ಹ ಮಹಿಳೆಯರ ಪಟ್ಟಿ ಪರಿಶೀಲನೆ! ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ - Kannada News

ಗೃಹಲಕ್ಷ್ಮಿ ಯೋಜನೆ ಶುರು ಆದಾಗಿನಿಂದಲೂ 1.18 ಕೋಟಿಗಿಂತ ಹೆಚ್ಚು ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪೈಕಿ ಎಲ್ಲರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಖಾತೆಗೆ (Bank Account) ಸಿಗುತ್ತಿಲ್ಲ.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೇಸರದ ಸುದ್ದಿ! ಸರ್ಕಾರ ಕಠಿಣ ನಿರ್ಧಾರ

ಒಂದಷ್ಟು ಮಹಿಳೆಯರು ಇನ್ನು ಕೂಡ ತಮಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಕೂಡ ಬಂದಿಲ್ಲ ಎನ್ನುತ್ತಿದ್ದಾರೆ. ಇನ್ನಷ್ಟು ಜನರು ಒಂದು ಕಂತಿನ ಹಣ ಬಂದರೆ ಇನ್ನೊಂದು ಕಂತಿನ ಹಣ ಬರುವುದಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಯೋಜನೆ ಗೊಂದಲ ತಂದಿರುವುದಂತೂ ನಿಜ.

ಈ ಎಲ್ಲಾ ಗೊಂದಲಗಳ ನಡುವೆ, ಗೃಹಲಕ್ಷ್ಮಿ ಯೋಜನೆಯ 11 ಕಂತುಗಳ ಹಣ ಬಿಡುಗಡೆಯಾಗಿದ್ದು, ಲಕ್ಷಾಂತರ ಮಹಿಳೆಯರಿಗೆ ಎಲ್ಲಾ ಕಂತಿನ ಹಣ ಒಟ್ಟು ₹22,000 ರೂಪಾಯಿ ತಲುಪಿದ್ದು ಅವರೆಲ್ಲರೂ ಸಂತೋಷವಾಗಿದ್ದಾರೆ.

ಆದರೆ ಇನ್ನಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣವೇ ಬರುತ್ತಿಲ್ಲ. ಎಲ್ಲಾ ಡಾಕ್ಯುಮೆಂಟ್ ಗಳು (Documents) ಸರಿ ಇದೆಯಾ ಎಂದು ಅವರು ಚೆಕ್ ಮಾಡಿದರು ಸಹ, ಯಾವುದು ಪ್ರಯೋಜನವಾಗುತ್ತಿಲ್ಲ.

ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್

Gruha Lakshmi Yojanaಕೆಲವು ಮಹಿಳೆಯರಿಗೆ ಯಾಕೆ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿಲ್ಲ ಎಂದು ಸರ್ಕಾರಕ್ಕೆ ಕೂಡ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮಹಿಳೆಯರು ಯೋಜನೆಗೆ ಅಪ್ಲೈ ಮಾಡುವ ವೇಳೆ ಕೊಟ್ಟಿರುವ ದಾಖಲೆಗಳು ಸರಿಯಾಗಿದೆಯಾ? ಎಲ್ಲಾ ಮಾಹಿತಿಗಳು ಸರಿ ಇದ್ಯಾ? ಆಧಾರ್ ಲಿಂಕ್ ಆಗಿದ್ಯಾ? NCPI ಮ್ಯಾಪಿಂಗ್ ಆಗಿದ್ಯಾ ಇದೆಲ್ಲವನ್ನು ಚೆಕ್ ಮಾಡುವುದಕ್ಕೆ ಸರ್ಕಾರ ತಿಳಿಸಿದೆ. ಇದಲ್ಲಾ ಒಂದು ಕಡೆಯಾದರೆ ಇನ್ನಷ್ಟು ಮಹಿಳೆಯರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ.

ಹೌದು, ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿದ್ದರು ಸಹ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದು, ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಅವೆಲ್ಲವನ್ನೂ ಪರಿಶೀಲಿಸಲಾಗುತ್ತಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್

GST ಮತ್ತು Tax ಕಟ್ಟುತ್ತಿರುವ ಒಂದಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ಪಡೆಯುತ್ತಿದ್ದಾರೆ. ಇದು ಅನರ್ಹರ ಸೂಚನೆ ಆಗಿದ್ದು, ಈ ರೀತಿ ಮಾಡುತ್ತಿರುವ ಮಹಿಳೆಯರನ್ನು ಕಂಡು ಹಿಡಿದು, ಅವರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ಇಂದ ತೆಗೆದುಹಾಕಲಾಗುತ್ತದೆ. ಅಂಥವರಿಗೆ ಇನ್ನುಮುಂದೆ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

Checking the list of ineligible women, such women will not get Gruha Lakshmi Yojana money