ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೇಸರದ ಸುದ್ದಿ! ಸರ್ಕಾರ ಕಠಿಣ ನಿರ್ಧಾರ

ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಸರ್ಕಾರ ಕೋಟಿ ಕೋಟಿ ಹಣವನ್ನು ಒದಗಿಸಬೇಕು. ಈಗಾಗಲೇ 5 ಯೋಜನೆಗಳ ನಿರ್ವಹಣೆಗೆ ಸರ್ಕಾರ ₹56 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

Bengaluru, Karnataka, India
Edited By: Satish Raj Goravigere

ಕಳೆದ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವು 5 ಗ್ಯಾರೆಂಟಿ ಯೋಜನೆಗಳು ಮತ್ತು ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಿ, ಆ ಎಲ್ಲಾ ವಿಶೇಷ ಸವಲತ್ತುಗಳನ್ನು ಸರ್ಕಾರ ಜಾರಿಗೆ ತರುತ್ತದೆ ಎಂದು ಹೇಳಿದ ಕಾರಣ ಜನರು ಕಾಂಗ್ರೆಸ್ ಸರ್ಕಾರವನ್ನು ನಂಬಿ, ವೋಟ್ ಹಾಕಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಮೊದಲೇ ಹೇಳಿದ್ದ ಹಾಗೆ 5 ಗ್ಯಾರೆಂಟಿ ಯೋಜನೆಗಳನ್ನು ಸಹ ಜಾರಿಗೆ ತಂದಿದೆ.

ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ (Free Electricity), ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿಗಳು, ಅನ್ನಭಾಗ್ಯ ಯೋಜನೆಯ ಮೂಲಕ 5 ಕೆಜಿ ಅಕ್ಕಿ ಹಾಗೂ 5 ಕೆಜಿಯ ಅಕ್ಕಿಯ ಹಣ ಮತ್ತು ಯುವನಿಧಿ ಯೋಜನೆಯ ಮೂಲಕ ಕೆಲಸ ಸಿಗದವರಿಗೆ ಪ್ರತಿ ತಿಂಗಳು ₹3000 ಸ್ಟೈಪಂಡ್ ಕೊಡುವ ಯೋಜನೆಗಳು ಜಾರಿಗೆ ಬಂದು, ಜನರು ಈ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಇದರ ಹೊಡೆತ ಈಗ ಜನರ ಮೇಲೆ ಬಿದ್ದಿದೆ.

The government will cancel the Gruha Lakshmi Yojana Money for tax paying women

ಇನ್ಮುಂದೆ ಪ್ರತಿ ತಿಂಗಳ ಅಂತ್ಯದೊಳಗೆ ಅನ್ನಭಾಗ್ಯ ಯೋಜನೆ ಹಣ ಜಮಾ! ಇಲ್ಲಿದೆ ಬಿಗ್ ಅಪ್ಡೇಟ್

ಇಷ್ಟೆಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಸರ್ಕಾರ ಕೋಟಿ ಕೋಟಿ ಹಣವನ್ನು ಒದಗಿಸಬೇಕು. ಈಗಾಗಲೇ 5 ಯೋಜನೆಗಳ ನಿರ್ವಹಣೆಗೆ ಸರ್ಕಾರ ₹56 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಇನ್ನು ಪ್ರತಿ ತಿಂಗಳು ಎಲ್ಲಾ ಯೋಜನೆಗಳನ್ನು ಉಚಿತವಾಗಿ ಜನರಿಗೆ ತಲುಪಿಸುವ ಹೊರೆ ಸರ್ಕಾರದ ಮೇಲಿದೆ. ಹಾಗಾಗಿ ಸರ್ಕಾರವು ಇದೀಗ ಪ್ರಮುಖ ನಿರ್ಧಾರಗಳನ್ನು ಮಾಡುತ್ತಿದ್ದು, ಇದರಿಂದಾಗಿ ಎಲ್ಲದರ ಹೊರೆ ನೇರವಾಗಿ ಜನರ ಮೇಲೆ ಬೀಳುತ್ತಿದೆ.

ಇತ್ತೀಚೆಗೆ ಹಾಲಿನ ಬೆಲೆಯನ್ನು (Milk Price Hike) ಜಾಸ್ತಿ ಮಾಡಲಾಯಿತು, ಬಳಿಕ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ (Petrol Diesel Price) ಕೂಡ ಏರಿಕೆ ಮಾಡಲಾಯಿತು. ಮಧ್ಯಮವರ್ಗದ ಮತ್ತು ಬಡವರ್ಗಕ್ಕೆ ಸೇರಿದ ಜನರಿಗೆ ಇದು ಶಾಕಿಂಗ್ ವಿಷಯ ಎಂದರೆ ತಪ್ಪಲ್ಲ.

ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್

ಇವುಗಳ ಜೊತೆಗೆ ಪ್ರತಿದಿನ ಖರೀದಿ ಮಾಡುವ ತರಕಾರಿ ಬೆಲೆ, ದಿನನಿತ್ಯ ವಸ್ತುಗಳ ಬೆಲೆ ಇದೆಲ್ಲವೂ ಸಹ ಏರಿಕೆ ಆಗುತ್ತಿದ್ದು, ಹಾಲಿನ ದರ ಏರಿಕೆ ಮಾಡಿರುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಹಾಲಿನ ದರ ಜಾಸ್ತಿ ಮಾಡಿಲ್ಲ, ಹೆಚ್ಚಿನ ಹಾಲು ಉತ್ಪಾದನೆ ಆಗುತ್ತಿರುವ ಕಾರಣ ಹಾಲಿನ ಪ್ಯಾಕೆಟ್ ಗಳಲ್ಲಿ 50ml ಹಾಲನ್ನು ಜಾಸ್ತಿ ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ ಹಾಲಿನ ಬೆಲೆಯನ್ನು ಜಾಸ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ..

ಈ ಬೆಲೆ ಏರಿಕೆಯ ಜೊತೆಗೆ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕಾದಿದ್ದು, ಹಾಲಿನ ಬೆಲೆಯ ಜೊತೆಗೆ ಈಗ ಕುಡಿಯುವ ನೀರಿನ ಬೆಲೆಯನ್ನು (Drinking Water Price Hike) ಏರಿಸಲು ಸರ್ಕಾರ ನಿರ್ಧರಿಸಿದೆ, ಇದರ ಬಗ್ಗೆ ಬೆಂಗಳೂರು ಜಲ ಮಂಡಳಿ ಜೊತೆಗೆ ಮಾತುಕತೆ ನಡೆಸಿ, ಈ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಏನೇ ತೊಂದರೆಗಳು ಬಂದಿದ್ದರು ಸಹ ಕಳೆದ 14 ವರ್ಷಗಳಿಂದ ಸರ್ಕಾರ ನೀರಿನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ, ಆದರೆ ಈಗ ನೀರಿನ ಬೆಲೆಯನ್ನು ಏರಿಸಿ, ನೇರವಾಗಿ ಜನರ ಮೇಲೆ ಹೊರೆಹಾಕಲು ಸಿದ್ಧವಾಗಿದ್ದು, ಇದರಿಂದ ಜನರಿಗೆ ಬೇಸರವಾಗಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್

Big Update For Gruha Jyothi and Gruha Lakshmi Scheme Beneficiaries