ಇನ್ಮುಂದೆ ಪ್ರತಿ ತಿಂಗಳ ಅಂತ್ಯದೊಳಗೆ ಅನ್ನಭಾಗ್ಯ ಯೋಜನೆ ಹಣ ಜಮಾ! ಇಲ್ಲಿದೆ ಬಿಗ್ ಅಪ್ಡೇಟ್
ಯೋಜನೆಗೆ ಸಂಬಂಧಿಸಿದ ಹಾಗೆ ಒಂದು ಸಭೆಯನ್ನು ನಡೆಸಿ, ಪೆಂಡಿಂಗ್ ಇರುವ ಹಣವನ್ನು ವರ್ಗಾವಣೆ ಮಾಡಬೇಕಾಗಿ ತಿಳಿಸಲಾಗಿದೆ.
ರಾಜ್ಯ ಸರ್ಕಾರವು ಜನರ ಹಸಿವನ್ನು ನೀಗಿಸುವ ಸಲುವಾಗಿ ಜಾರಿಗೆ ತಂದ ಯೋಜನೆ ಅನ್ನಭಾಗ್ಯ ಯೋಜನೆ (Annabhagya Scheme) ಆಗಿದೆ. ಈ ಯೋಜನೆಯನ್ನು ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರಲಾಯಿತು.
ಈ ವರೆಗು ಬಹಳಷ್ಟು ಕಂತುಗಳ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ (Bank Account) ವರ್ಗಾವಣೆ ಆಗಿದೆ. ಇದೀಗ ಈ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ..
ಅನ್ನಭಾಗ್ಯ ಯೋಜನೆಯ ಬಗ್ಗೆ ಹೇಳುವುದಾದರೆ, ರಾಜ್ಯ ಸರ್ಕಾರವು ಈ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿತ್ತು, ಆದರೆ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದ ಕಾರಣ, 5 ಕೆಜಿ ಅಕ್ಕಿ ಕೊಟ್ಟು ಇನ್ನು ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೂ ಹಣ ಕೊಡಲಾಗುತ್ತಿದೆ.
ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗಲಿದೆ ₹10,000 ರೂಪಾಯಿ! ಈ ಯೋಜನೆಯ ಬೆನಿಫಿಟ್ ಪಡೆಯಿರಿ
ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5 ಕೆಜಿಗೆ 170 ರೂಪಾಯಿಗಳನ್ನು, ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾವಣೆ (Money Transfer) ಮಾಡಲಾಗುತ್ತಿದೆ. ಜನರಿಗೂ ಈ ಹಣದಿಂದ ಅನುಕೂಲವೇ ಆಗುತ್ತಿತ್ತು.
ಆದರೆ ಕಳೆದ ಎರಡು ಮೂರು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿರಲಿಲ್ಲ ಎಲೆಕ್ಷನ್ ಇದ್ದ ಕಾರಣ ಈ ರೀತಿ ಅಡಚಣೆ ಉಂಟಾಗಿತ್ತು ಎಂದು ತಿಳಿಸಲಾಗಿದೆ. ಹಾಗೆಯೇ ಇನ್ನುಮುಂದೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣ ಜನರಿಗೆ ವರ್ಗಾವಣೆ ಆಗುತ್ತದೆ ಎಂದು ಭರವಸೆ ನೀಡಲಾಗಿದೆ.
ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್
ಹೌದು, ಕೃಷಿ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ನು ಮುಂದೆ ಪ್ರತಿ ತಿಂಗಳು ಮುಗಿಯುವುದರ ಒಳಗೆ ಆಯಾ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಬೇಕು ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಯೋಜನೆಗೆ ಸಂಬಂಧಿಸಿದ ಹಾಗೆ ಒಂದು ಸಭೆಯನ್ನು ನಡೆಸಿ, ಪೆಂಡಿಂಗ್ ಇರುವ ಹಣವನ್ನು ವರ್ಗಾವಣೆ ಮಾಡಬೇಕಾಗಿ ತಿಳಿಸಲಾಗಿದೆ.
ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್
ಜೊತೆಗೆ ವಿಧಾನಸಭೆಯಲ್ಲಿ ಪ್ರತಿ ತಿಂಗಳು ಸಹ ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಸಭೆ ಸೇರಿ, ತೊಂದರೆಗಳನ್ನು ಪರಿಹಾರಿಸಿಕೊಳ್ಳಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಧಾನ್ಯಗಳನ್ನು ಶೇಖರಿಸಿ ಇಡುವ ಗೋಡೌನ್ ಗಳು ಚೆನ್ನಾಗಿರಬೇಕು, ಸ್ವಚ್ಚವಾಗಿರಬೇಕು ಎಂದು ತಿಳಿಸಲಾಗಿದೆ. ಎಲ್ಲವು ಚೆನ್ನಾಗಿದ್ದ ನಂತರ ಧಾನ್ಯಗಳ ಸರಬರಾಜು ಮಾಡಬೇಕು ಎಂದಿದ್ದಾರೆ ಅಧಿಕಾರಿಗಳು.
Annabhagya Yojana Money Deposit by the end of every month from now on