ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್
ಹಂತ ಹಂತವಾಗಿ ಎಲ್ಲವನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಈಗ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ (Ration Card) ಬಹಳ ಅಗತ್ಯವಾದ ಪುರಾವೆ ಆಗಿದೆ. ರೇಷನ್ ಕಾರ್ಡ್ ಬಳಸಿ ಅನ್ನಭಾಗ್ಯ (Annabhagya Scheme), ಗೃಹಲಕ್ಷ್ಮಿ (Gruha Lakshmi Yojana) ಹಾಗೂ ಇನ್ನಿತರ ಯೋಜನೆಗಳ ಸೌಲಭ್ಯವನ್ನು ಪಡೆಯಲಾಗುತ್ತಿದೆ.
ಆದರೆ ಕೆಲವು ಜನರು ಸರ್ಕಾರಕ್ಕೆ ಮೋಸ ಮಾಡಿ ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೆಲವು ನಿರ್ಧಾರವನ್ನು ತೆಗೆದುಕೊಂಡಿದೆ.
ರೇಷನ್ ಕಾರ್ಡ್ ಇಂದ ಆಗುತ್ತಿರುವ ಮೋಸವನ್ನು ಪತ್ತೆ ಮಾಡಿ, ಅವುಗಳನ್ನು ತಡೆಗಟ್ಟಲು ಆಹಾರ ಇಲಾಖೆಗೆ ಸರ್ಕಾರ ಜವಾಬ್ದಾರಿಯನ್ನು ನೀಡಿದೆ. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸುಮಾರು 3 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ.
ಕೋಳಿ ಸಾಕಾಣಿಕೆ ಉಚಿತ ತರಬೇತಿ! ಸರ್ಟಿಫಿಕೇಟ್ ಸೇರಿದಂತೆ ಊಟ ಮತ್ತು ವಸತಿಯೂ ಕೂಡ ಉಚಿತ
ಆ ಅರ್ಜಿಗಳನ್ನು ಪರಿಶೀಲಿಸಿ, ದಾಖಲೆಗಳನ್ನು ಚೆಕ್ ಮಾಡಲು, ಆಹಾರ ಇಲಾಖೆಯ ಅಧಿಕಾರಿಗಳೇ ನಿಮ್ಮ ಮನೆಗೆ ಬರಲಿದ್ದಾರೆ. ಇದು ಸರ್ಕಾರದ ಹೊಸ ನಿಯಮ ಆಗಿದೆ.
ಹೌದು, ನಿಮ್ಮ ಮನೆಗಳಿಗೆ ಭೇಟಿ ನೀಡಿ, ರೇಷನ್ ಕಾರ್ಡ್ ಗಾಗಿ ನೀವು ಸಲ್ಲಿಸಿರುವ ಅರ್ಜಿಯಲ್ಲಿ ಇರುವ ಮಾಹಿತಿ ಸರಿ ಇದೆಯಾ, ಅದಕ್ಕಾಗಿ ನೀವು ನೀಡಿರುವ ದಾಖಲೆಗಳು ಸರಿ ಇದೆಯಾ ಎಂದು ಪರಿಶೀಲಿಸಿ ಒಂದು ವೇಳೆ ತಪ್ಪಾಗಿದ್ದರೆ, ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದರೆ ಅಂಥವರ ಅರ್ಜಿಯನ್ನು ಸ್ಥಳದಲ್ಲೇ ರಿಜೆಕ್ಟ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೀತಿ ಹಂತ ಹಂತವಾಗಿ ಎಲ್ಲವನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
7ನೇ ತರಗತಿ ಪಾಸ್ ಆಗಿದ್ರೂ ಸಾಕು, ನಿಮಗೆ ಸಿಗಲಿದೆ KSRTC ಯಲ್ಲಿ ಕೆಲಸ, ಇಂದೇ ಅರ್ಜಿ ಸಲ್ಲಿಸಿ!
ಹೊಸ ರೇಷನ್ ಕಾರ್ಡ್ ಪಡೆಯಲು ಬಂದಿರುವ ಅರ್ಜಿ ವಿವರ:
ನಮ್ಮ ರಾಜ್ಯದಲ್ಲಿ 2017 ರಿಂದ 2021ರ ಸಮಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ (BPL Card) ಪಡೆಯುವುದಕ್ಕೆ ಮತ್ತು ಈಗಾಗಲೇ ಇರುವ ಬಿಪಿಎಲ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡುವುದಕ್ಕೆ ಬಂದಿರುವ ಅರ್ಜಿಗಳ ವಿವರ ಹೀಗಿದೆ…
*39,04,798 ಅರ್ಜಿಗಳು ಒಟ್ಟಾರೆಯಾಗಿ ಸಲ್ಲಿಕೆ ಆಗಿದೆ.
*ಇವುಗಳ ಪೈಕಿ 9,60,641 ಅರ್ಜಿಗಳು ಈಗಾಗಲೇ ರಿಜೆಕ್ಟ್ ಆಗಿದೆ.
*2,95,986 ಅರ್ಜಿಗಳ ಪರಿಶೀಲನೆ ಬಾಕಿ ಉಳಿದಿದೆ.
*36,08,812 ಅರ್ಜಿಗಳು ವಿಲೇವಾರಿ ಆಗಿದೆ..
ಹೊಸ ಬಿಪಿಎಲ್ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಗುಡ್ ನ್ಯೂಸ್
ಸರಿಯಾದ ದಾಖಲೆ ಇದ್ದರೆ ಮಾತ್ರ ರೇಷನ್ ಕಾರ್ಡ್:
ಕಳೆದ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ಹೊಸ ರೇಷನ್ ಕಾರ್ಡ್ ಆಗಿರಲಿಲ್ಲ, ಇನ್ನು ಕೂಡ ಆಗಿಲ್ಲ. 2,95,986 ಅರ್ಜಿಗಳ ಪರಿಶೀಲನೆ ಆಗಿ, ವಿತರಣೆ ಆಗಬೇಕಿದ್ದು, ಅವುಗಳನ್ನು ಪರಿಶೀಲಿಸಲು, ಅಧಿಕಾರಿಗಳೆ ನಿಮ್ಮ ಮನೆಗೆ ಬರಲಿದ್ದಾರೆ. ಆಗ ನೀವು ಸರಿಯಾದ ದಾಖಲೆಗಳನ್ನು ತೋರಿಸಿದರೆ ಮಾತ್ರ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ.
Here is the update if you applied for new ration card