ಕೋಲಾರದಲ್ಲಿ ನೀಚ ಕೃತ್ಯ, ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ತಂದೆಯಿಂದಲೇ 20 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು, ಯುವತಿ ಈಗ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
- ತಂದೆಯಿಂದಲೇ 5 ತಿಂಗಳಿನಿಂದ ನಿರಂತರ ಅತ್ಯಾಚಾರ
- ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಗರ್ಭಿಣಿಯಾಗಿರುವುದು ಬೆಳಕಿಗೆ
- ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಆರಂಭ
ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಮನುಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಯಾವ ಮಗುವಾದರೂ ತಂದೆಯ ಅಕ್ಕರೆಯನ್ನು (Father’s care) ಅಪೇಕ್ಷಿಸುತ್ತದೆ. ಆದರೆ ಇಲ್ಲೊಬ್ಬ ನೀಚ ತಂದೆಯೇ ಪಾಪಿ ಆಗಿದ್ದಾನೆ!
20 ವರ್ಷದ ಮಗಳು (daughter) ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದಾಗ, ಪರೀಕ್ಷೆ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ತನಿಖೆಯಲ್ಲಿ ಶಾಕಿಂಗ್ ವಿಚಾರಗಳು ಹೊರಬಿದ್ದಿವೆ.
ಆಕೆ ತಂದೆಯೇ ಈ ದುಷ್ಕೃತ್ಯಕ್ಕೆ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ. ಅಪ್ಪಯ್ಯಪ್ಪ ಎಂಬಾತ ತನ್ನ ಮಗಳ ಮೇಲೆ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮಗಳ ಅಳಲು ಕೇಳುವವರೇ ಇಲ್ಲದ ಸ್ಥಿತಿಯಲ್ಲಿ ಆಕೆ ಹೊಟ್ಟೆನೋವಿನಿಂದ ವೈದ್ಯರ ಬಳಿ ಹೋಗಿದ್ದು, ಅಲ್ಲಿ ಸತ್ಯ ಬೆಳಕಿಗೆ ಬಂದಿದೆ.
ಈ ವ್ಯಕ್ತಿಗೆ ಒಟ್ಟು ನಾಲ್ಕು ಮಕ್ಕಳು ಇದ್ದರು, ಮೂರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು. ಪತ್ನಿ ಇಲ್ಲದ ಕಾರಣದಿಂದ ಮಕ್ಕಳನ್ನ ಆತನೇ ನೋಡಿಕೊಳ್ಳುತ್ತಿದ್ದ.
ಮೊದಲ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ್ದಾನೆ. ಆದರೆ ಮೂರನೇ ಮಗಳ ಮೇಲೆ ಅವನು ಕಣ್ಣು ಬಿದ್ದಿತ್ತು! ತಂದೆ ಎನ್ನುವ ಸ್ಥಾನಕ್ಕೆ ಗೌರವ ಮರೆತು ಇಂತಹ ದುಷ್ಕೃತ್ಯ ಎಸಗಿದ್ದಾನೆ.
ಸದ್ಯ ಆಕೆ ದೈಹಿಕ ಹಾಗೂ ಮಾನಸಿಕವಾಗಿ ದೊಡ್ಡ ಆಘಾತಕ್ಕೆ ಗುರಿಯಾಗಿದ್ದಾಳೆ. ಕಾಮಸಮುದ್ರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಪ್ಪಯ್ಯಪ್ಪನನ್ನು ವಶಕ್ಕೆ ಪಡೆದಿದ್ದಾರೆ.
ತಪಾಸಣೆಯ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಕಾನೂನು ಪ್ರಕ್ರಿಯೆಯ ಮೂಲಕ ಆಕೆಗೆ ನ್ಯಾಯ ದೊರಕಿಸಲು ಪೊಲೀಸರು ಬದ್ಧರಾಗಿದ್ದಾರೆ.
Father Repeated Assault on Daughter
Our Whatsapp Channel is Live Now 👇