ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ, ಸಿಸಿಟಿವಿ ದೃಶ್ಯ ವೈರಲ್
ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ವಿಡಿಯೋ ವೈರಲ್, ಆರ್ಡರ್ ವಿಳಂಬಕ್ಕೆ ಕಾರಣ ಕೇಳಿದ ಡೆಲಿವರಿ ಬಾಯ್ ಮೇಲೆ ಹಲ್ಲೆ, ಪ್ರಕರಣ ದಾಖಲು
- ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಹಲ್ಲೆ
- ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್
- ಸೋಲದೇವನಹಳ್ಳಿ (Soladevanahalli) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು (Bengaluru): ಬೆಂಗಳೂರು ನಗರದ ಹೆಸರಘಟ್ಟ ರಸ್ತೆಯ (Hesaraghatta Road) ಸಪ್ತಗಿರಿ ಆಸ್ಪತ್ರೆ ಎದುರಿನ ಗಬ್ರು ಬಿಸ್ಟ್ರೋ ಅಂಡ್ ಕೆಫೆಯಲ್ಲಿ (Bistro & Cafe) ಫೆಬ್ರವರಿ 2 ರಂದು ಗಲಾಟೆ ನಡೆದಿದ್ದು, ಫುಡ್ ಡೆಲಿವರಿ ಬಾಯ್‌ಗೆ ಹಲ್ಲೆ ನಡೆದಿದೆ. ಗ್ರಾಹಕರ ಆರ್ಡರ್ ಪಡೆದ ನಂತರ, ರೆಸ್ಟೋರೆಂಟ್ ಸಿಬ್ಬಂದಿ ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸದ ಕಾರಣ, ಡೆಲಿವರಿ ಬಾಯ್ ತಾವು ಬೇಗನೆ ಫುಡ್ ಕೊಡಲು ವಿನಂತಿಸಿಕೊಂಡಿದ್ದ. ಆದರೆ ಈ ಮಾತಿಗೆ ಆಕ್ರೋಶಗೊಂಡ ಸಿಬ್ಬಂದಿ, ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಬೆಳ್ಳಂಬೆಳ್ಳಗೆ ರೌಡಿಶೀಟರ್ ಮೇಲೆ ಫೈರಿಂಗ್
Brutal Attack on Delivery Boy at Gabru Bistro and Cafe Near Hesaraghatta Road (Opposite Sapthagiri Hospital)
A shocking and distressing incident unfolded at Gabru Bistro and Cafe near Hesaraghatta Road, opposite Sapthagiri Hospital, where a delivery boy was mercilessly attacked… pic.twitter.com/VgVWtCiFAZ
— Karnataka Portfolio (@karnatakaportf) February 3, 2025
ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನಿನ ಮಿತಿಯೊಳಗೆ ಇಂತಹ ಕೃತ್ಯಗಳ ವಿರುದ್ಧ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Food Delivery Boy Attacked in Bengaluru Restaurant