ಬೆಂಗಳೂರು ಹೊರವಲಯದಲ್ಲಿ ಬೆಳ್ಳಂಬೆಳ್ಳಗೆ ರೌಡಿಶೀಟರ್ ಮೇಲೆ ಫೈರಿಂಗ್
ದೊಮ್ಮಸಂದ್ರದ ಬಳಿ ಅವಿತು ಕುಳಿತಿದ್ದ ರೌಡಿಶೀಟರ್ ಗುಬ್ಬಚ್ಚಿ ಸೀನನನ್ನು ಬಂಧಿಸಲು ಹೋದ ವೇಳೆ, ಅವನು ಪೊಲೀಸರು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
- ರೌಡಿ ಶೀಟರ್ ಗುಬ್ಬಚ್ಚಿ ಸೀನ ಬಂಧನಕ್ಕೆ ತೆರಳಿದ್ದ ಪೋಲಿಸರು
- ಪೊಲೀಸರಿಂದ ಆತ್ಮರಕ್ಷಣೆಗಾಗಿ ಫೈರಿಂಗ್, ಕಾಲಿಗೆ ಗುಂಡೇಟು
- ಗುಬ್ಬಚ್ಚಿ ಸೀನನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬೆಂಗಳೂರು (Bengaluru): ಬೆಂಗಳೂರಿನ ಹೊರವಲಯದ ಸರ್ಜಾಪುರದಲ್ಲಿ, ಬೆಳ್ಳಂಬೆಳ್ಳಗೆ ಗುಂಡಿನ ಸದ್ದು ಕೇಳಿ ಬಂದಿದೆ. ದೊಮ್ಮಸಂದ್ರದ ಬಳಿ ಅವಿತು ಕುಳಿತಿದ್ದ ರೌಡಿಶೀಟರ್ ಗುಬ್ಬಚ್ಚಿ ಸೀನನನ್ನು ಬಂಧಿಸಲು ಹೋದ ವೇಳೆ, ಅವನು ಪೊಲೀಸರು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗೆ ಫೈರಿಂಗ್ ಮಾಡಿದ್ದಾರೆ.
ಪ್ರತ್ಯಕ್ಷದರ್ಶಿಗಳಿಂದ ಪಡೆದ ಮಾಹಿತಿ ಪ್ರಕಾರ, ರೌಡಿಶೀಟರ್ ಗುಬ್ಬಚ್ಚಿ ಸೀನಾ ಇತ್ತೀಚಿಗೆ ನಡೆದ ಕೊಲೆಗೆ ಸಂಬಂಧಿಸಿದ್ದಾನೆ ಎನ್ನಲಾಗಿದೆ. ರೌಡಿಶೀಟರ್‌ನ ಗ್ಯಾಂಗ್ ವೆಂಕಟೇಶ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿತ್ತು.
ಬೆಂಗಳೂರು ಕಾಡುಗೋಡಿಯಲ್ಲಿ ಫ್ರಿಡ್ಜ್‌ನಿಂದ ಉಂಟಾದ ಬೆಂಕಿಗೆ ಇಡೀ ಮನೆ ಸುಟ್ಟು ಕರಕಲು
ಮೂಲಗಳಿಂದ ತಿಳಿದುಬಂದಂತೆ, ಇನ್ಸ್‌ಪೆಕ್ಟರ್ ನವೀನ್ ಕುಮಾರ್ ರಕ್ಷಣೆಯ ದೃಷ್ಟಿಯಿಂದ ಗುಬ್ಬಚ್ಚಿ ಸೀನನ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ, ಪೇದೆ ಇರ್ಫಾನ್ ಅವರನ್ನು ರೌಡಿಶೀಟರ್ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದನು ಎನ್ನಲಾಗಿದೆ.
ಈ ವೇಳೆ ಇನ್ಸ್ ಪೆಕ್ಟರ್ ನವೀನ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಫೈರ್ ಮಾಡಿದ್ದಾರೆ. ರೌಡಿ ಶೀಟರ್ ಗುಬ್ಬಚ್ಚಿ ಸೀನನ ಕಾಲಿಗೆ ಗುಂಡೇಟು ಬಿದ್ದಿದ್ದು, ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ 30 ಐಷಾರಾಮಿ ಕಾರುಗಳ ಜಪ್ತಿ: 3 ಕೋಟಿ ರೂ. ತೆರಿಗೆ ವಸೂಲಿ
ದೊಮ್ಮಸಂದ್ರದ ಬಳಿ ಅವಿತು ಕುಳಿತಿದ್ದ ರೌಡಿ ಶೀಟರ್ ಗುಬ್ಬಚ್ಚಿ ಸೀನನನ್ನು ಬಂಧಿಸಲು ಹೋದ ವೇಳೆ, ಅವನು ಪೊಲೀಸರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ.
Bengaluru Police Open Fire as Rowdy Attempts to Escape