ಅರಣ್ಯ ಇಲಾಖೆಯಲ್ಲಿ 540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ! ಇಲ್ಲಿದೆ ಮಾಹಿತಿ - Karnataka Forest Department
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಕ್ರಮ ವಹಿಸಿದ್ದು, 540 ಅರಣ್ಯ ರಕ್ಷಕರ ನೇಮಕಾತಿ ಕಾರ್ಯ ಈಗ ವೇಗ ಪಡೆದುಕೊಂಡಿದೆ ಎಂದು ಸಚಿವ ಈಶ್ವರ ಖಂಡ್ರೆ ವಿಧಾನಪರಿಷತ್ತಿನಲ್ಲಿ ತಿಳಿಸಿದರು.

- ಅರಣ್ಯ ಇಲಾಖೆಯಲ್ಲಿ 540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ
- ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ 20 ಲಕ್ಷ ಪರಿಹಾರ ಘೋಷಣೆ
- ಮಂಗ–ಆನೆ ಸಮಸ್ಯೆ ನಿಯಂತ್ರಣಕ್ಕೆ ಹೊಸ ಕಾರ್ಯಪಡೆ ಹಾಗೂ ಅಧ್ಯಯನ
ಬೆಂಗಳೂರು (Bengaluru): ವಿಧಾನಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಸತ್ಯವೆಂದು ಒಪ್ಪಿಕೊಂಡರು.
ಈ ಸಮಸ್ಯೆಯನ್ನು ಬಗೆಹರಿಸಲು 540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಈಗಲೇ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನೊಂದು ಕಡೆ, ವನ್ಯಜೀವಿ ದಾಳಿಯಿಂದ ಜನರು ಬಲಿಯಾಗುತ್ತಿರುವ ಪ್ರಕರಣಗಳಿಗೂ ಸರ್ಕಾರ ಸ್ಪಂದಿಸಿದೆ. ಕಾಡಾನೆ ದಾಳಿ, ಹುಲಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ₹20 ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಹಾವು ಕಚ್ಚಿದಲ್ಲಿ ಕೃಷಿ ಇಲಾಖೆಯ ಮೂಲಕ ₹2 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಬಾಕಿ ಹಣ, ಗೌರಿ-ಗಣೇಶ ಹಬ್ಬಕ್ಕೂ ಮುನ್ನವೇ 6000 ಮಹಿಳೆಯರ ಖಾತೆಗೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಆನೆ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶಕ್ಕೆ ವಿಶೇಷ ಆನೆ ಕಾರ್ಯಪಡೆ ರೂಪಿಸಲು ಅನುಮತಿ ನೀಡಲಾಗಿದೆ. ಅಧಿಕೃತ ಪ್ರಕಟಣೆ ಇನ್ನೇನು 2–3 ದಿನಗಳಲ್ಲಿ ಹೊರಬೀಳಲಿದೆ ಎಂದು ಸಚಿವರು ಘೋಷಿಸಿದರು.
ಅಲ್ಲದೆ, ಮಂಗಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಸಹ ಗಮನ ಹರಿಸಲಾಗಿದ್ದು, ಮಂಗ ಹಿಡಿಯುವ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ಖಂಡ್ರೆ ತಿಳಿಸಿದರು.
ಇದನ್ನೂ ಓದಿ: ರೈತರಿಗೆ ಉಚಿತ ಬೋರ್ವೆಲ್ ಸಬ್ಸಿಡಿ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ
ಆನೆ ಪಥ ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಸಂಶೋಧನೆ ನಡೆಸಲು ಐಐಎಸ್‌ಸಿ (IISC) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರೊ. ಆರ್. ಸುಕುಮಾರ್ ನೇತೃತ್ವದ ತಂಡ ಈಗಾಗಲೇ ಅಧ್ಯಯನ ಆರಂಭಿಸಿದೆ ಎಂದು ಅವರು ವಿವರಿಸಿದರು.
Forest Department speeds up hiring of 540 Guards in Karnataka



