ಗೃಹಲಕ್ಷ್ಮಿ ಬಾಕಿ ಹಣ, ಗೌರಿ-ಗಣೇಶ ಹಬ್ಬಕ್ಕೂ ಮುನ್ನವೇ 6000 ಮಹಿಳೆಯರ ಖಾತೆಗೆ - Karnataka Gruha Lakshmi Scheme
ರಾಜ್ಯದ ಮಹಿಳೆಯರು ಮೂರು-ನಾಲ್ಕು ತಿಂಗಳಿನಿಂದ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಖರ್ಚು ಹೆಚ್ಚಾದ್ದರಿಂದ ಅಸಮಾಧಾನ ಜೋರಾಗಿದೆ. ಸಚಿವರು ತಾಂತ್ರಿಕ ತೊಂದರೆ ಕಾರಣವೆಂದು ಹೇಳಿದ್ರೂ, ಮಹಿಳೆಯರ ಅಸಹನೆ ಕಡಿಮೆಯಾಗಿಲ್ಲ.

- ಗೃಹಲಕ್ಷ್ಮಿ ಯೋಜನೆ ಹಣ ಮೂರು-ನಾಲ್ಕು ತಿಂಗಳಿನಿಂದ ಬಾಕಿ
- ಗೌರಿ-ಗಣೇಶ ಹಬ್ಬಕ್ಕೂ ಮುನ್ನ ಮಹಿಳೆಯರು ಆತಂಕದಲ್ಲಿ
- ಲಕ್ಷ್ಮಿ ಹೆಬ್ಬಾಳ್ಕರ್ ತಾಂತ್ರಿಕ ತೊಂದರೆ ಕಾರಣವೆಂದರು
ಬೆಂಗಳೂರು (Bengaluru): ಕಳೆದ ಮೂರು ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಹಣ ಮಹಿಳೆಯರ ಖಾತೆಗೆ ಜಮಾ ಆಗದ ಕಾರಣದಿಂದ ರಾಜ್ಯದ ಹಲವೆಡೆ ಅಸಮಾಧಾನ ಸೃಷ್ಟಿಯಾಗಿದೆ. ಹಬ್ಬದ ಕಾಲದಲ್ಲಿ ಬರುವ ಈ ಹಣವೇ ಕುಟುಂಬಕ್ಕೆ ಮುಖ್ಯ ಆಧಾರವಾಗಿದ್ದರೂ, ಈಗ ಹಣ ಬಾರದ ಕಾರಣ ಮಹಿಳೆಯರು ನೊಂದಿದ್ದಾರೆ.
ಆಷಾಢ ಮುಗಿದು, ಶ್ರಾವಣ ಕೂಡ ಮುಗಿಯತ್ತಿದೆ. ವರಮಹಾಲಕ್ಷ್ಮಿ ಹಬ್ಬ ಕಳೆದರೂ ಗೃಹಲಕ್ಷ್ಮಿ ಹಣ ಬರದೇ ಹೋಯಿತು. ಇನ್ನು ಮುಂದೆ ಗೌರಿ-ಗಣೇಶ ಹಬ್ಬ ಎದುರಿದೆ. ಈ ಸಮಯದಲ್ಲಿ ಬಟ್ಟೆ, ಸೀರೆ, ಹಬ್ಬದ ಖರ್ಚುಗಳಿಗೆ ಹಣ ಬೇಕು. ಆದರೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ, “ಹಬ್ಬ ಹೇಗೆ ಮಾಡೋದು?” ಎಂದು ಮಹಿಳೆಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರೈತರಿಗೆ ಉಚಿತ ಬೋರ್ವೆಲ್ ಸಬ್ಸಿಡಿ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ
ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ – “ಸರ್ಕಾರಿ ನೌಕರರಿಗೆ ಸಂಬಳ ಟೈಮ್ ಗೆ ಕೊಡ್ತೀರಾ, ನಮಗೆ ಕೊಡೋಕೆ ಏಕೆ ತಡ? ಚುನಾವಣೆಗೂ ಮುನ್ನ ಪ್ರತಿ ತಿಂಗಳು 2000 ಕೊಡುತ್ತೇವೆ ಅಂತ ವೋಟ್ ತೆಗೆದುಕೊಂಡ್ರಿ, ಈಗ ಮೂರು ತಿಂಗಳಿಗೊಮ್ಮೆ ಕೊಡೋದು ಸರಿಯೇ?” ಎಂದು ಪ್ರಶ್ನಿಸುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಾಂತ್ರಿಕ ತೊಂದರೆಯಿಂದ ಹಣ ಜಮಾ (Money Deposit) ಆಗಲು ತಡವಾಗುತ್ತಿದೆ ಎಂದಿದ್ದಾರೆ. ಇತ್ತೀಚಿಗೆ ಕೇಂದ್ರ ಸರ್ಕಾರದ ಹೊಸ ನಿಯಮ ಪ್ರಕಾರ, ಈಗ ಹಣ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಮೂಲಕ ವರ್ಗಾವಣೆ ಆಗಬೇಕು. ಇದರ ಪರಿಣಾಮವಾಗಿ ಕನಿಷ್ಠ ಎರಡು ವಾರ ತಡವಾಗುತ್ತಿದೆ.
ಇದನ್ನೂ ಓದಿ: ಕುರಿ, ಮೇಕೆ ಖರೀದಿ ಹಾಗೂ ಶೆಡ್ ನಿರ್ಮಾಣಕ್ಕೆ 5 ಲಕ್ಷದ ಭಾರೀ ಸಹಾಯಧನ ಸ್ಕೀಮ್
ಇದನ್ನೂ ಓದಿ: ಸಿಹಿ ಸುದ್ದಿ, ಬಡವರಿಗೆ ರೇಷನ್ ಕಾರ್ಡ್ ವಿತರಣೆ, ಹೊಸ ಬಿಪಿಎಲ್ ಕಾರ್ಡ್ ದಾರಿ ಸುಗಮ
ಜೂನ್ ತಿಂಗಳ ಹಣ ಇನ್ನೂ ಬಿಡುಗಡೆಯಾಗಿಲ್ಲ. ಜುಲೈ ತಿಂಗಳ ಹಣವೂ ಬಾಕಿಯೇ ಇದೆ. ಕೆಲವು ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳ ಕಂತೂ ಇನ್ನೂ ಮಹಿಳೆಯರ ಕೈ ಸೇರಿಲ್ಲ. ಈ ತಡಕ್ಕೆ ಸ್ಪಷ್ಟ ಉತ್ತರ ಸಿಗದೇ, ಫಲಾನುಭವಿಗಳು ಪ್ರತಿದಿನ ಬ್ಯಾಂಕ್ ಬ್ಯಾಲೆನ್ಸ್ (Bank Balance) ಹಾಗೂ ಮೊಬೈಲ್ ಎಸ್‌ಎಂಎಸ್‌ಗಳನ್ನು (Mobile SMS) ಚೆಕ್ ಮಾಡುವ ಪರಿಸ್ಥಿತಿ ಬಂದಿದೆ.
2023ರ ಆಗಸ್ಟ್ 15ರಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಈಗ ಎರಡು ವರ್ಷ ಪೂರೈಸಿದೆ. ಆರಂಭದಿಂದಲೇ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ತಿಂಗಳಿಗೆ ಬರದೇ, ತಡವಾಗಿಯೇ ಬರುತ್ತಿದೆ. ಇದೀಗ 6000 ಮಹಿಳೆಯರ ಖಾತೆಗೆ ಗೌರಿ-ಗಣೇಶ ಹಬ್ಬಕ್ಕೂ ಮುನ್ನ ಹಣ ಬರುವ ಸಾಧ್ಯತೆಯಿದೆ ಎಂಬ ಮಾಹಿತಿ ಬಂದಿದೆ. ಆದರೆ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಹಣ ಬರುವ ಭರವಸೆ ಇನ್ನೂ ಸರ್ಕಾರದಿಂದ ಲಭ್ಯವಾಗಿಲ್ಲ.
ಇದನ್ನೂ ಓದಿ: ಮನೆ, ಆಸ್ತಿ, ಜಮೀನು ನಿಮ್ಮದೇ ಆಗಿದ್ರೂ, ಇನ್ಮೇಲೆ ಮಾರಾಟಕ್ಕೆ ಹೊಸ ರೂಲ್ಸ್
ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಮಹಿಳೆಯರು ಫಲಾನುಭವಿಗಳಾಗಿದ್ದು, ಪ್ರತಿ ತಿಂಗಳು 2400 ಕೋಟಿ ರೂಪಾಯಿ ಅನುದಾನ ಅಗತ್ಯ. ಆದರೂ, ಹಣಕಾಸಿನ ಅಡಚಣೆ ಹಾಗೂ ತಾಂತ್ರಿಕ ಗೊಂದಲಗಳಿಂದ ಯೋಜನೆ ಅಡ್ಡಿಪಡಿಸುತ್ತಿದೆ. ಆದರೂ ಸಚಿವೆ ಹೆಬ್ಬಾಳ್ಕರ್ ಶೀಘ್ರದಲ್ಲೇ ಹಣ ಮಹಿಳೆಯರ ಖಾತೆಗೆ (Bank Account) ಜಮಾ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.
Gruha lakshmi Scheme Delay, Pending Money Ahead of Gauri-Ganesha




