ಕರ್ನಾಟಕ ರೈತರಿಗೆ ಬಂಪರ್ ಸುದ್ದಿ! ಕೃಷಿ ಪಂಪ್ಸೆಟ್‌ಗೆ 1 ಲಕ್ಷ ಸಹಾಯಧನ
ಸೌರ ಕೃಷಿ ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಶೇ.80% ರಷ್ಟು ಸಹಾಯಧನ ದೊರೆಯಲಿದೆ. ಅರ್ಹ ರೈತರು ಹೇಗೆ ಅರ್ಜಿ ಹಾಕಬಹುದು ಮತ್ತು ಯಾವ ಮಟ್ಟದ ಹಣಕಾಸು ನೆರವು ಸಿಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
- ಕುಸುಮ್ ಬಿ ಯೋಜನೆಯಡಿಯಲ್ಲಿ ಶೇ.50% ಸಹಾಯಧನ ನೀಡಲಾಗುತ್ತಿದೆ
- 3 ಹೆಚ್‌ಪಿ ಪಂಪ್ಸೆಟ್‌ಗೆ 1 ಲಕ್ಷ ರೂ., ಹೆಚ್ಚಿನ ಸಾಮರ್ಥ್ಯಕ್ಕೆ 1.5 ಲಕ್ಷ ರೂ. ಸಹಾಯಧನ
- ಆನ್ಲೈನ್ ಪೋರ್ಟಲ್ ಮೂಲಕ ಸರಳ ನೋಂದಣಿ ಅವಕಾಶ
Solar Pumpsets : ರೈತ ಬಂಧುಗಳೇ, ಸರ್ಕಾರದಿಂದ ನಿಮಗಾಗಿ ಮತ್ತೊಂದು ಸೂಪರ್ ಸೌಲಭ್ಯ ಬಂದಿದೆ! ಹೌದು, ರೈತರಿಗೆ ಹೆಚ್ಚು ಲಾಭ ನೀಡುವ ಸೌರ ಕೃಷಿ ಪಂಪ್ಸೆಟ್ ಅಳವಡಿಕೆಗೆ ಶೇ.80% ರಷ್ಟು ಸಹಾಯಧನ (Solar Subsidy) ಒದಗಿಸಲಾಗುತ್ತಿದೆ. ಇದು ಕೃಷಿಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲದ ಲಾಭವನ್ನು ತರುವ ಯೋಜನೆ.
ಇದೀಗ, ಕುಸುಮ್ ಬಿ ಯೋಜನೆಯಡಿ (Kusum B scheme) 3 ಹೆಚ್‌ಪಿ ಸಾಮರ್ಥ್ಯದ ಸೋಲಾರ್ ಪಂಪ್ಸೆಟ್ ಗಳಿಗೆ (Solar Pumpsets) ಶೇ.50% ಸಹಾಯಧನ ಸಿಗಲಿದೆ. 3 ಹೆಚ್‌ಪಿಗೆ ₹2 ಲಕ್ಷ ಖರ್ಚಾದರೆ ₹1 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
ಇದನ್ನೂ ಓದಿ: 200 ಯೂನಿಟ್ ಉಚಿತ ವಿದ್ಯುತ್ ಯೋಜನೆ, ಗೃಹಜ್ಯೋತಿ ಬಗ್ಗೆ ಬಿಗ್ ಅಪ್ಡೇಟ್
ಅದೇ ರೀತಿ, ಹೆಚ್ಚಿನ ಸಾಮರ್ಥ್ಯದ ಪಂಪ್ಸೆಟ್ ಗಳಿಗೆ ₹3 ಲಕ್ಷ ಖರ್ಚಿಗೆ ₹1.5 ಲಕ್ಷ ರೂ. ಸಹಾಯಧನ ದೊರೆಯಲಿದೆ. ಹೇಗಿದೆ ಯೋಜನೆ? ರೈತರಿಗೆ ನಿಜಕ್ಕೂ ಬಂಪರ್ ಆಫರ್ ಅಲ್ಲವೇ?
ಹಾಗೇ ಕುಸುಮ್-ಸಿ ಯೋಜನೆಯಡಿ ಖಾಸಗಿ ಮತ್ತು ಸರ್ಕಾರಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ (solar power generation) ಮಾಡಿ ಗ್ರಿಡ್‌ಗೆ ಪೂರೈಸುವ ಅವಕಾಶವಿದೆ.
ಈ ಮೂಲಕ ರೈತರು ಸತತ ಆದಾಯವನ್ನು ಸಂಪಾದಿಸಬಹುದು. ಇಂಧನ ಸಚಿವರ ಮಾತಿನಲ್ಲಿ ಹೇಳುವುದಾದರೆ, ರೈತರು ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಮುಂದೆ ಬಂದರೆ ಹೆಚ್ಚು ಅನುಕೂಲ ಪಡೆಯುತ್ತಾರೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ 2000 ರೂಪಾಯಿ ಮೊತ್ತದ ಉಚಿತ ತರಕಾರಿ ಬೀಜ ವಿತರಣೆ! ಅರ್ಜಿ ಸಲ್ಲಿಸಿ
ರೈತರನ್ನು ತಕ್ಷಣವೇ ಆನ್ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ. ಹೌದು, https://souramitra.com ಪೋರ್ಟಲ್ ಮೂಲಕ ನಿಮ್ಮ ಆಧಾರ್, ಆರ್‌ಟಿಸಿ ಹಾಗೂ ಬ್ಯಾಂಕ್ ವಿವರಗಳೊಂದಿಗೆ ತಕ್ಷಣ ಅರ್ಜಿ ಸಲ್ಲಿಸಿ. ಮುಂದಿನ ಬೆಳಕಿನ ಬದುಕಿಗೆ ಪ್ರಾರಂಭವನ್ನು ಮಾಡಿ.
Government Offers 80 Percent Subsidy for Solar Pumpsets