Bangalore NewsKarnataka News

ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ!

2025-26ನೇ ಸಾಲಿನ ಬಜೆಟ್ ಮಂಡನೆ ಮಾರ್ಚ್ 7 ರಂದು. ರಾಜ್ಯ ಸರ್ಕಾರ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  • 2025-26ನೇ ಸಾಲಿನ ಬಜೆಟ್ ಮಂಡನೆ 7 ರಂದು: ಸಿದ್ದರಾಮಯ್ಯ ಘೋಷಣೆ
  • ರೈತರ ಹಿತಾಸಕ್ತಿಗೆ ಅನುಕೂಲ ಮಾಡಿಕೊದುತ್ತೇವೆ, ಮುಖ್ಯಮಂತ್ರಿ ಭರವಸೆ
  • ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಹಣ ಕೂಡಲೇ ಬಿಡುಗಡೆ

ಬೆಂಗಳೂರು (Bengaluru): 2025-26ನೇ ಸಾಲಿನ ಬಜೆಟ್​​ ಮಂಡನೆ ಮಾರ್ಚ್ 7ರಂದು ನಡೆಯಲಿದೆ (Karnataka Budget) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka CM Siddaramaiah) ಹೇಳಿದ್ದಾರೆ. ಮಾರ್ಚ್ 3ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿದ್ದು, ಅದರ ಬಗ್ಗೆ ಚರ್ಚೆ ನಡೆಯಲಿದೆ. ಬಜೆಟ್ ಮಂಡನೆ, ರಾಜ್ಯಪಾಲರ ಭಾಷಣದ ನಂತರ ನಡೆಯಲಿದೆ,” ಎಂದರು.

”ಗತ ಕೆಲ ದಿನಗಳಿಂದ ನಾನು ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿದ್ದೇನೆ. ನಾನು ಅನಾರೋಗ್ಯದಿಂದ ಬಳಲಿದರೂ ಕೃಷಿಕರ ಅಭಿಪ್ರಾಯವನ್ನು ಕೇಳುವ ಕೆಲಸ ಕೈಗೊಂಡಿದ್ದೇನೆ. ರಾಜ್ಯ ಸರ್ಕಾರ ಯಾವಾಗಲೂ ರೈತರ ಹಿತವನ್ನು ರಕ್ಷಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ,” ಎಂದು ಸಿದ್ದರಾಮಯ್ಯ ಹೇಳಿದರು.

ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ!

ಬೆಲೆ ಏರಿಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ ಸಿಎಂ, ಬೆಲೆ ಇಳಿಕೆಗೆ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ, ಎಂದರು.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸರ್ಕಾರದ ಬಳಿ ಹಣ ಇಲ್ವಾ? ಏನಿದು ಹೊಸ ವಿಷಯ

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ

Gruha Lakshmi Scheme

”ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ (Gruha Lakshmi) ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪ ಕುರಿತು ಮಾತನಾಡಿದ ಅವರು, ”ನೀವು ಹೇಳಿದಂತೆ, ಹಣ ಇಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಮುಂದೆಯೂ ನಾವು ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಯಾವತ್ತೂ ಅದನ್ನು ಅನುಷ್ಠಾನಗೊಳಿಸುತ್ತೇವೆ,” ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

ಯೋಜನೆಗಳ ಪಾವತಿ ಪೆಂಡಿಂಗ್ ಬಗ್ಗೆ ಕೂಡಲೇ ಮಾಹಿತಿ ತರಿಸಿಕೊಳ್ಳುತ್ತೇನೆ, ಈ ಕೂಡಲೇ ಹಣ ಬಿಡುಗಡೆಗೆ ಸೂಚಿಸುತ್ತೇನೆ, ಯಾವುದೇ ಯೋಜನೆ ಬಗ್ಗೆ ಆತಂಕ ಬೇಡ ,  ಯಾವ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಏನ ಭರವಸೆ ನೀಡಿದರು. ಈ ಮೂಲಕ ಮಹಿಳೆಯರು ಶೀಘ್ರದಲ್ಲೇ ಬಾಕಿ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುವ ನಿರೀಕ್ಷೆ ಇದೆ.

ಅನಾರೋಗ್ಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ”ನೋವು ಕಡಿಮೆಯಾಗಿದೆ, ಆರೋಗ್ಯ ಸುಧಾರಣೆಯಲ್ಲಿದೆ, ಆದರೆ ಒತ್ತಡದಿಂದಾಗಿ ತೊಂದರೆಯಿದ್ದೇನೆ,” ಎಂದರು.

ನಾಯಕತ್ವ ಬದಲಾವಣೆ ಹೇಳಿಕೆಗಳ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ”ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಸ್ಪಷ್ಟಪಡಿಸಿದರು.

ಅನ್ನಭಾಗ್ಯ ಯೋಜನೆ

ರೇಷನ್ ಕಾರ್ಡ್ ಅಪ್ಡೇಟ್: ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ!

ಸರ್ಕಾರದಲ್ಲಿ ಹಣ ಇಲ್ಲ

ಇನ್ನು ಹುಬ್ಬಳ್ಳಿಯಲ್ಲಿ, ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿದ್ದು, ದಿವಾಳಿ ಹಂತಕ್ಕೆ ತಲುಪಿರುವುದಾಗಿ ಟೀಕಿಸಿದರು. ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಗಾಗಿ (Annabhagya Yojane) ಹಣವಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

Gruha Lakshmi and Annabhagya Scheme funds will be released soon

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories