3 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಈ ದಿನ ಖಾತೆಗೆ ಜಮಾ! ಪಕ್ಕಾ ಮಾಹಿತಿ ಬಿಡುಗಡೆ
ಮೂರು ತಿಂಗಳು ಕಳೆದರೂ, ಸರ್ಕಾರದಿಂದ ಸ್ಪಷ್ಟತೆ ಇಲ್ಲ, 3 ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಬಾರದೆ ಮಹಿಳೆಯರಿಗೆ ಕುಗ್ಗಿದ ಭರವಸೆ

ಈ ತಿಂಗಳ ಕೊನೆಯೊಳಗೆ ಬಾಕಿ ಇರುವ ಗೃಹಲಕ್ಷ್ಮಿ (Gruha Lakshmi scheme) ಹಣವನ್ನು ಪಾವತಿಸಲು ಸರ್ಕಾರ ತಯಾರಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ರಾಜ್ಯದ ಮಹಿಳೆಯರಲ್ಲಿ ನಿರೀಕ್ಷೆ ಜಾಸ್ತಿಯಾಗಿದ್ದರೂ, ಈ ಯೋಜನೆಯ ವಿಳಂಬದಿಂದ ಗೊಂದಲ ಉಂಟಾಗಿದೆ.
ಮೇ ತಿಂಗಳಲ್ಲಿ ಮೂರು ತಿಂಗಳ ಹಣವನ್ನು ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಉಡುಪಿಯ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅವರ ಮಾತುಗಳಿಂದ ಮಹಿಳೆಯರಲ್ಲಿ ಕಿಂಚಿತ್ತು ಭರವಸೆ ಮೂಡಿದರೂ, ರಾಜಕೀಯ ವ್ಯಕ್ತಿಗಳ ತರಾವರಿ ಹೇಳಿಕೆಗಳಿಂದ ಗೊಂದಲದಲ್ಲಿಯೇ ಇದ್ದಾರೆ.
ಇದಾದ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆ ಸರಕಾರದ ನಿಲುವಿಗೆ ವಿರುದ್ಧವಾಗಿರುವಂತೆ ತೋರುತ್ತದೆ. “ನಾವು ಪ್ರತಿ ತಿಂಗಳು ಹಣ ಕೊಡುತ್ತೇವೆ ಎಂದು ಮಾತು ನೀಡಿಲ್ಲ. ನೀವು ತೆರಿಗೆ (tax) ಕಟ್ಟಬೇಕು, ಹಣ ಸರ್ಕಾರಕ್ಕೆ ಬರಬೇಕು, ಆಗ ನಾವು ಕೊಡಬಹುದು” ಎಂಬ ವಾಕ್ಯವು ಇನ್ನಷ್ಟು ಗೊಂದಲ ಉಂಟು ಮಾಡಿದೆ.
ಇಂತಹ ಸಂದರ್ಭದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಅವರ ವಾಕ್ಯ ಮತ್ತಷ್ಟು ಬಿಸಿ ಎಬ್ಬಿಸಿದೆ. “ಇದು ಸಂಬಳ ಅಲ್ಲ? ಪ್ರತಿ ತಿಂಗಳು ತಪ್ಪದೆ ಕೊಡೋಕೆ” ಎಂಬ ಉತ್ತರ ಜನಸಾಮಾನ್ಯರಲ್ಲಿ ಆಕ್ರೋಶ ಉಂಟು ಮಾಡಿದೆ. ಇನ್ನು ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ತಮ್ಮದೇ ಪಕ್ಷದ ಕೆಲ ಶಾಸಕರೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಪಕ್ಷದ ನಾಯಕ ಆರ್.ಅಶೋಕ್ ತೀವ್ರವಾಗಿ ಪ್ರತಿಕ್ರಿಯಿಸಿ, “ಈ ಸರ್ಕಾರ ಮಹಿಳೆಯರ ಭರವಸೆಗೆ ದ್ರೋಹ ಮಾಡಿದೆ. ಮಹಿಳೆಯರ ಶಾಪ ತಪ್ಪುವುದಿಲ್ಲ” ಎಂದು ಗಂಭೀರ ಟೀಕೆ ಮಾಡಿದ್ದಾರೆ.
ಈ ಹೇಳಿಕೆಗಳಿಂದ, ಗೃಹಲಕ್ಷ್ಮಿ ಯೋಜನೆ (Gruha Lakshmi scheme delay) ಸುತ್ತ ರಾಜಕೀಯ ವಾಗ್ಯುದ್ಧ ಮತ್ತಷ್ಟು ತೀವ್ರಗೊಂಡಿದೆ. ಮಹಿಳೆಯರ ಮನಸ್ಸಿನಲ್ಲಿ ಸರ್ಕಾರದ ಮೇಲೆ ನಂಬಿಕೆ ಕುಗ್ಗುತ್ತಿರುವುದು ಸ್ಪಷ್ಟವಾಗಿದೆ.
ಒಟ್ಟಾರೆ ಸದ್ಯದ ಮಾಹಿತಿಯಂತೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಈ ತಿಂಗಳ ಕೊನೆಯೊಳಗೆ ಬಾಕಿ ಹಣ ಮಹಿಳೆಯರ ಖಾತೆ ಸೇರುವ ಬಗ್ಗೆ ಭರವಸೆ ನೀಡಿದ್ದಾರೆ.
Gruha Lakshmi Payment Delay Sparks Political Firestorm




