ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್, 14 ಹಾಗೂ 15 ಕಂತಿನ ಹಣ ಒಟ್ಟಿಗೆ ಜಮಾ!
ಇದೀಗ ಅಂದರೆ ಜನವರಿಯಲ್ಲಿ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇರುವ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು, ಮಹಿಳೆಯರ ಖಾತೆಗೆ ಒಟ್ಟಾರೆ 4000 ಜಮಾ ಆಗುತ್ತದೆ ಎಂದು ತಿಳಿದುಬಂದಿದೆ
- ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತುಗಳ ಹಣ ಈ ಜಿಲ್ಲೆಯ ಜನರಿಗೆ ಜಮಾ
- 14 ಹಾಗೂ 15 ಕಂತಿನ ಹಣ ಬಿಡುಗಡೆ ಬಗ್ಗೆ ಸರ್ಕಾರದಿಂದ ಬಿಗ್ ಅಪ್ಡೇಟ್
- ಫಲಾನುಭವಿ ಮಹಿಳೆಯರ ಖಾತೆಗೆ ಇಲ್ಲಿಯವರೆಗೆ 30,000 ಹಣ ಜಮಾ
ಕರ್ನಾಟಕದಲ್ಲಿ ವಾಸಿಸುವ ಮಹಿಳೆಯರಿಗೆ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೂಲಕ ಸಾಕಷ್ಟು ಹಣವನ್ನು ಮಂಜೂರು ಮಾಡಿದೆ. 15 ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 1.18 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಇನ್ನು 14 ಮತ್ತು 15ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಡಿಸೆಂಬರ್ ತಿಂಗಳ ಹಣ ಬಿಡುಗಡೆ!
ಹಾವೇರಿ ಹಾಗೂ ಮತ್ತಿತರ ಜಿಲ್ಲೆಗಳಲ್ಲಿ ಡಿಸೆಂಬರ್ ತಿಂಗಳಿನ ಹಣ ಫಲಾನುಭವಿ ಮಹಿಳೆಯ ಖಾತೆಗೆ ಜಮಾ ಆಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಗತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ ಕೆಲವು ತಾಂತ್ರಿಕ ದೋಷದಿಂದ 14 ಮತ್ತು 15ನೇ ಕಂತಿನ ಹಣವನ್ನು ಎಲ್ಲರ ಖಾತೆಗೆ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.
ಆದರೆ ಇದೀಗ ಅಂದರೆ ಜನವರಿಯಲ್ಲಿ ಪೆಂಡಿಂಗ್ ಇರುವ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಮಹಿಳೆಯರ ಖಾತೆಗೆ ಒಟ್ಟಾರೆ 4000 ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ.
ಜನವರಿ ತಿಂಗಳ ಹಣ ಬಿಡುಗಡೆ ಯಾವಾಗ?
16ನೇ ಕಂತಿನ ಹಣ ಬಿಡುಗಡೆಗು ಸರ್ಕಾರ ಯೋಜಿಸಿದ್ದು, ಜನವರಿ ತಿಂಗಳ ಎರಡನೇ ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಮಹಿಳೆಯರಿಗೆ ಕೊಟ್ಟು 30,000 ಜನ ಆಗಿವೆ.
ಆದರೆ ಸಾಕಷ್ಟು ಮಹಿಳೆಯರು ಹಲವು ಕಂತುಗಳ ಹಣ ತಮ್ಮ ಖಾತೆಗೆ ಸೇರಿಲ್ಲ ಎನ್ನುವ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಫಲಾನುಭವಿ ಮಹಿಳೆಯ ಖಾತೆ ಹಾಗೂ ಖಾತೆಗೆ ಸಂಬಂಧಪಟ್ಟ ಮಾಹಿತಿ ಸರಿಯಾಗಿದ್ದರೆ ಅಂತವರ ಖಾತೆಗೆ ಹಣ ಜಮಾ ಆಗೇ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
ನಿಮ್ಮ ಅಕೌಂಟ್ ಸ್ಟೇಟಸ್ ಚೆಕ್ ಮಾಡಿ!
ಇತ್ತೀಚಿಗೆ ಬ್ಯಾಂಕುಗಳಿಂದ ಖಾತೆಗೆ ಹಣ ಜಮಾ ಆದರೆ ಸಾಮಾನ್ಯ ಸಂದೇಶ ಬಾರದೆ ಇರಬಹುದು ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಖಾತೆ ಇರುವ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿಕೊಳ್ಳುವುದರ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವ ಸ್ಟೇಟಸ್ ತಿಳಿಯಬಹುದು.
ಅಥವಾ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ಗೃಹಲಕ್ಷ್ಮಿ ಹಣ ಜಮಾ ಆಗಿರುವ ಮಾಹಿತಿ ಪಡೆಯಬಹುದು. ಡಿಸೆಂಬರ್ ತಿಂಗಳಿನಲ್ಲಿ 26.66 ಲಕ್ಷ ರೂಪಾಯಿಗಳು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿದೆ ಎಂದು ಸರ್ಕಾರ ತಿಳಿಸಿದೆ.
ಯಾವ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿದೆ?
ಕಲಬುರ್ಗಿ, ವಿಜಯಪುರ, ಬೆಳಗಾವಿ ಬೀದರ್, ಬಳ್ಳಾರಿ, ಕೊಪ್ಪಳ ಯಾದಗಿರಿ, ಹಾವೇರಿ, ಬಾಗಲಕೋಟೆ, ಬೆಂಗಳೂರು, ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಗಳಿಗೆ ಮೊದಲ ಹಂತದ ಹಣ ಬಿಡುಗಡೆ ಆಗಿದೆ.
Gruha Lakshmi Scheme 14th and 15th Installments Released For This District