ಗೃಹಲಕ್ಷ್ಮಿ ಯೋಜನೆ ಕ್ಯಾನ್ಸಲ್, ಹಣ ಹೆಚ್ಚಳ! ಎಲ್ಲಾ ಗೊಂದಲಗಳಿಗೂ ತೆರೆ

ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಜಮಾ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಣ ಹೆಚ್ಚಳವಾಗುತ್ತದೆಯೆಂಬ ಪ್ರಶ್ನೆ ಎದ್ದಿದ್ದು, ಸರ್ಕಾರದ ತಿರುವು ಸ್ಪಷ್ಟನೆ ಹಾಗೂ ರಾಜಕೀಯ ವಿವಾದಗಳು ಮತ್ತೆ ಸದ್ದು ಮಾಡಿವೆ.

  • ಗೃಹಲಕ್ಷ್ಮಿ ಯೋಜನೆಗೆ ಹಣ ತಲುಪದಿರುವ ಕಾರಣ ಗೊಂದಲ
  • ಹಣ ಹೆಚ್ಚಳವಿಲ್ಲ, ಯೋಜನೆ ಬದಲಾಗಿಲ್ಲ ಎಂದು ಸಚಿವ ಸ್ಪಷ್ಟನೆ
  • ಬಿಜೆಪಿಯ ನಾಯಕರ ವಿರುದ್ಧ ಸಚಿವೆ ತೀವ್ರ ವಾಗ್ದಾಳಿ

ಬೆಂಗಳೂರು (Bengaluru): ರಾಜ್ಯದಲ್ಲಿ ‘ಪಂಚ ಗ್ಯಾರಂಟಿ’ಯ ಅಡಿಯಲ್ಲಿ ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಇದೀಗ ಹಣ ವಿತರಣೆ ವಿಳಂಬದಿಂದ ಮತ್ತೊಮ್ಮೆ ಸುದ್ದಿಗೆ ಬಂದಿದೆ.

ಹಲವಾರು ಮಹಿಳೆಯರು ತಮ್ಮ ಖಾತೆಗೆ (Bank Account) ಹಣ ಜಮಾ ಆಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವಂತೆಯೇ, ಈ ಯೋಜನೆ ಸ್ಥಗಿತಗೊಳ್ಳುತ್ತಾ? ಅಥವಾ ಹಣ ಹೆಚ್ಚಳವಾಗುತ್ತಾ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಿಂದ ಹಿಡಿದು ಗ್ರೂಪ್ ಚಾಟ್‌ಗಳವರೆಗೆ ಹರಡಿವೆ.

ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಪಂಚಾಯಿತಿಯಲ್ಲೂ ಸಿಗುತ್ತೆ ಇ-ಖಾತಾ

ಹಣ ಪಾವತಿ ತಡವಾದ ಹಿನ್ನೆಲೆ, ನಕಲಿ ಸುದ್ದಿಗಳು ಹರಡುತ್ತಿದ್ದು, ಯೋಜನೆ ಕ್ಯಾನ್ಸಲ್ ಆಗುತ್ತೆ, ಹಣ ಹೆಚ್ಚಾಗುತ್ತೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಬಾಕಿ ಹಣ ಇದೆ ತಿಂಗಳು 20ನೇ ತಾರೀಖಿನ ಒಳಗಾಗಿ ಬಿಡುಗಡೆ ಆಗುವ ಬಗ್ಗೆಯೂ ಭರವಸೆ ನೀಡಲಾಗಿದೆ

ಮಹಿಳೆಯರ ಖಾತೆಗೆ ತಿಂಗಳಿಗೆ ₹2000 ಹಣ ನೀಡುವ ಗೃಹಲಕ್ಷ್ಮಿ ಯೋಜನೆ, ಕಾಂಗ್ರೆಸ್‌ ಸರ್ಕಾರದ ಪ್ರಮುಖ ಭರವಸೆಯೊಂದಾಗಿದೆ. ಆರಂಭದಲ್ಲಿ ಯೋಜನೆ ನಿರಂತರವಾಗಿ ಹಣ ಪಾವತಿಸುತ್ತಿದ್ದರೂ, ಕಳೆದ ಕೆಲವು ತಿಂಗಳುಗಳಿಂದ ಹಣ ತಡವಾಗಿ ಅಥವಾ ಯಾವುದೇ ಸೂಚನೆ ಇಲ್ಲದೇ ಖಾತೆಗೆ ಜಮೆಯಾಗದ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಗ್ರಾಮ ಒನ್ ಕೇಂದ್ರದಲ್ಲಿ ಹೊಸ ರೇಷನ್ ಕಾರ್ಡ್ ಸೇರಿ ಒಂದೇ ಕಡೆ 800ಕ್ಕೂ ಹೆಚ್ಚು ಸೇವೆ!

Gruha Lakshmi Scheme

ಈ ನಡುವೆ, ಯೋಜನೆಯ ಫಲಾನುಭವಿಗಳ ಪಟ್ಟಿ ಕಡಿತಗೊಳ್ಳುತ್ತಿದೆ ಎಂಬ ವದಂತಿಗಳು ಕೂಡ ಮಿಂಚಿದ್ದವು. ಇಂಥದ್ದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದು, “ಯೋಜನೆಗೆ ಯಾವುದೇ ಬದಲಾವಣೆ ಇಲ್ಲ. ಹಣ ಪಾವತಿಯಲ್ಲಿ ತಾಂತ್ರಿಕ ವಿಳಂಬವಷ್ಟೆ. ಹಣಕಾಸು ಇಲಾಖೆ ಮೇ ತಿಂಗಳ ಹಣ ಬಿಡುಗಡೆ ಮಾಡಬೇಕಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನನಿ ಯೋಜನೆ, ಮಹಿಳೆಯರಿಗೆ ಸಿಗಲಿದೆ ₹5 ಸಾವಿರ! ಈ ರೀತಿ ಅರ್ಜಿ ಸಲ್ಲಿಸಿ

ಇನ್ನೊಂದು ಕಡೆ, ಬಿಜೆಪಿ ನಾಯಕ ರವಿ ಕುಮಾರ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಬಗ್ಗೆ ರವಿ ಕುಮಾರ್ ಮಾಡಿದ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಇದು ಎಲ್ಲಾ ಮಹಿಳಾ ಸಮುದಾಯದ ಮೇಲೆ ಮಾಡಿದ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Lakshmi Hebbalkar

ಸಚಿವೆ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾ, “ಇಡೀ ರಾಜ್ಯದಲ್ಲಿ ಮಹಿಳೆಯರ ಬಗ್ಗೆಯೇ ತಪ್ಪಾಗಿ ಮಾತನಾಡುತ್ತಿರುವುದು ಬಿಜೆಪಿ ನಾಯಕರಲ್ಲಿ ಸಾಮಾನ್ಯವಾಗಿದೆ. ನನ್ನ ಕುರಿತು ಸಿಟಿ ರವಿ ನೀಡಿದ ಹೇಳಿಕೆಯಲ್ಲಿಯೂ ಪಕ್ಷದ ಹೈಕಮಾಂಡ್ ಮೌನವಾಗಿದ್ದದ್ದು ಸಹಮತಿಯ ಸೂಚನೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಜೊತೆಗೆ, ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಮತ್ತು ಜವಾಬ್ದಾರಿಯಿಂದ ವರ್ತಿಸುವಂತೆ ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಸೈಟುಗಳು ಹರಾಜು! ಕಮ್ಮಿ ಬೆಲೆ, ಚಾನ್ಸ್ ಮಿಸ್ ಮಾಡ್ಬೇಡಿ

ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಗೃಹಲಕ್ಷ್ಮಿಯಂತಹ ನೇರ ಹಣ ಪಾವತಿ ಯೋಜನೆ ಬೃಹತ್ ಹೊರೆ ಆಗಿರುವುದರೊಂದಿಗೆ, ಮಹಿಳೆಯರ ನಿರೀಕ್ಷೆಗಳಿಗೆ ತಕ್ಕಂತೆ ಸರಿಯಾದ ತುರ್ತು ಕ್ರಮಗಳು ಜರುಗುತ್ತವೆಯೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಹಣ ಹೆಚ್ಚಳದ ಬಗ್ಗೆ ಸರ್ಕಾರದ ಯಾವುದೇ ಸ್ಪಷ್ಟನೆ ಇಲ್ಲದಿರುವುದರಿಂದ ಈ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ವ್ಯರ್ಥ.

Gruha Lakshmi Scheme Delays Spark Confusion

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories