Bengaluru NewsKarnataka News

ಗೃಹಲಕ್ಷ್ಮಿ 16ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂದಿದೆ! ಚೆಕ್ ಮಾಡಿದ್ರಾ

ಜನವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಪ್ರಕ್ರಿಯೆ ತ್ವರಿತಗೊಳ್ಳುತ್ತಿದ್ದು, ಬಾಕಿ ಉಳಿದ ಯಜಮಾನಿಯರ ಖಾತೆಗೆ ನಾಳೆ ಅಥವಾ ನಾಡಿದ್ದು ಹಣ ಜಮಾ ಆಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

  • 16ನೇ ಕಂತಿನ ಹಣ ಬಿಡುಗಡೆ, ಲಕ್ಷಾಂತರ ಮಹಿಳೆಯರಿಗೆ ಜಮಾ
  • ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸಚಿವ ಸಂಪುಟಕ್ಕೆ ಸಲ್ಲಿಕೆ
  • ಸರ್ಕಾರ ಮುಂದಿನ ಕ್ರಮವನ್ನು ಶೀಘ್ರದಲ್ಲಿ ನಿರ್ಧರಿಸಲಿದೆ

ಬೆಂಗಳೂರು (Bengaluru): ರಾಜ್ಯದಲ್ಲಿ ಗೃಹಲಲಕ್ಷ್ಮಿ ಯೋಜನೆ (Gruha Lakshmi Scheme) ನಿರೀಕ್ಷಿತ ಹಣ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಿದ್ದು, 16ನೇ ಕಂತಿನ ಹಣವನ್ನು ಜನವರಿ ತಿಂಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ಯಜಮಾನಿಯರ ಖಾತೆಗೆ ಜಮಾ ಮಾಡಲಾಗಿದೆ.

ಕೆಲವರ ಖಾತೆಗೆ (Bank Account) ಇನ್ನೂ ಹಣ ಬಾರದ ಕಾರಣ, ಅದು ನಾಳೆ ಅಥವಾ ನಾಡಿದ್ದು ಜಮಾ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ 16ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂದಿದೆ! ಚೆಕ್ ಮಾಡಿದ್ರಾ

ಇದನ್ನೂ ಓದಿ: ಕರ್ನಾಟಕ ಖಾಸಗಿ ಶಾಲೆಗಳಲ್ಲಿ RTE ಅಡಿ ಮಕ್ಕಳಿಗೆ ಉಚಿತ ಶಿಕ್ಷಣ! ಅರ್ಜಿ ಪ್ರಕ್ರಿಯೆ

ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಜನವರಿ ತಿಂಗಳ ಬಾಕಿ ಹಣ ಬಿಡುಗಡೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸದ್ಯವೇ ಎಲ್ಲಾ ಯಜಮಾನಿಯರಿಗೂ ಹಣ ಜಮಾ (Money Deposit) ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಈ ಹಣದ ನಿರೀಕ್ಷೆಯಲ್ಲಿ ಸಾವಿರಾರು ಮಹಿಳೆಯರು ಕಾಯುತ್ತಿದ್ದು, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುತ್ತಿದೆ.

Lakshmi Hebbalkar

ಬಿಡುಗಡೆಗೊಂಡ ಹಣ ಹಲವು ಜಿಲ್ಲೆಗಳ ಮಹಿಳೆಯರ ಖಾತೆಗೆ ನೆನ್ನೆಯಿಂದಲೇ ಜಮಾ ಆಗಿರುವ ಬಗ್ಗೆ ಮಹಿಳೆಯರು ಹೇಳಿಕೊಂಡಿದ್ದಾರೆ, ಈ ಬಗ್ಗೆ ಸಚಿವರು ಎಲ್ಲರಿಗೂ ಹಣ ಜಮಾ ಆಗಲಿದ್ದು ಬಾಕಿ ಮಹಿಳೆಯರಿಗೆ ಅಥವಾ ಜಿಲ್ಲೆಗಳಿಗೆ ಇಂದು ಅಥವಾ ನಾಳೆ ಜಮಾ ಆಗಲಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಆಸ್ತಿದಾರರಿಗೆ ಬಿಗ್ ಶಾಕ್‌, ಆಸ್ತಿ ತೆರಿಗೆ ಹೆಚ್ಚಳ! ಏಪ್ರಿಲ್ 1ರಿಂದ ಅನ್ವಯ

Gruha Lakshmi Scheme

ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸಿದ್ಧ

ಇನ್ನೊಂದೆಡೆ, ರಾಜ್ಯ ಸರ್ಕಾರ ನಡೆಸಿದ ಗುತ್ತಿಗೆ ಅವ್ಯವಹಾರದ (Contract Scam) ತನಿಖಾ ವರದಿ ಸಲ್ಲಿಕೆಯಾಗಿದ್ದು, ಇದನ್ನು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಮಾಜಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ಪೈಕಿ ಪಿಎಸ್‌ಐ ನೇಮಕಾತಿ, ಉಪನ್ಯಾಸಕರ ನೇಮಕ, ಕೊರೋನಾ ಉಪಕರಣ ಖರೀದಿ ಸೇರಿದಂತೆ ಹಲವು ಅವ್ಯವಹಾರಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಇಂತವರ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರದ ಯಾವುದೇ ಯೋಜನೆ ಸಿಗಲ್ಲ!

ಮುಂದಿನ ಕ್ರಮ ಏನು?

ಈ ವರದಿ ಇದೀಗ ಸಚಿವ ಸಂಪುಟದ ಮುಂದೆ ಚರ್ಚೆಗೆ ಒಳಗಾಗಲಿದ್ದು, ಮುಂದಿನ ಹಂತದಲ್ಲಿ ಸರ್ಕಾರ ಹೇಗೆ ಕ್ರಮ ಕೈಗೊಳ್ಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಬರಲಿದೆ. ಹಗರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಭಾಗಿಯಾಗಿದ್ದವರ ವಿರುದ್ಧ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ.

Gruha Lakshmi Scheme, Funds Disbursement Update

English Summary

Related Stories