ಗೃಹಲಕ್ಷ್ಮಿ ಯೋಜನೆಯ 21ನೇ ಕಂತು ಯಾವಾಗ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ಈ ಹಿಂದೆ ಬಿಡುಗಡೆ ಆದ 20ನೇ ಕಂತಿನ ಬಳಿಕ, ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಇನ್ನೂ ಬಾಕಿಯಿದ್ದು, ಮುಂಬರುವ ಒಂದು ವಾರದಲ್ಲಿ ಹಣ ಬರುವ ನಿರೀಕ್ಷೆ ಸರ್ಕಾರ ನೀಡಿದೆ.

- ಗೃಹಲಕ್ಷ್ಮಿ 20ನೇ ಕಂತು ಜಮಾ, 21ನೇ ಕಂತು ಶೀಘ್ರದಲ್ಲಿ
- ಫಲಾನುಭವಿಗಳ ಲೆಕ್ಕದಲ್ಲಿ ತಾಂತ್ರಿಕ ವಿಳಂಬ
- ವರ್ಷಾಂತ್ಯದವರೆಗೆ ಎಲ್ಲ ಕಂತುಗಳು ಬಿಡುಗಡೆ ನಿರೀಕ್ಷೆ
ಬೆಂಗಳೂರು (Bengaluru) : ರಾಜ್ಯದ ಲಕ್ಷಾಂತರ ಮಹಿಳೆಯರು ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) 21ನೇ ಕಂತು ಇನ್ನೂ ಬಿಡುಗಡೆಯಾಗಿಲ್ಲ.
ಕರ್ನಾಟಕ ಸರ್ಕಾರವು (Karnataka Government) ಈಗಾಗಲೇ 20ನೇ ಕಂತು ಜಮಾ ಮಾಡಿದ್ದು, ಬಾಕಿ ಹಣವನ್ನೂ ಮುಂಬರುವ ಒಂದು ವಾರದಲ್ಲಿ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಕಟಿಸಿದ ಮಾಹಿತಿಯಂತೆ, ಯಾವುದೇ ಫಲಾನುಭವಿ ಹೆಸರನ್ನು ಯೋಜನೆಯ ಪಟ್ಟಿಯಿಂದ ತೆಗೆಯಲಾಗುತ್ತಿಲ್ಲ. ಇದಲ್ಲದೇ ಪ್ರತಿದಿನವೂ ಸಾವಿರಾರು ಮಹಿಳೆಯರು ಹೊಸದಾಗಿ ಯೋಜನೆಗೆ ಸೇರ್ಪಡೆಯಾಗುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಕೃಷಿ ಭೂಮಿ ಯೋಜನೆ, ಭೂಮಿ ಖರೀದಿಗೆ ಸಾಲ ಸೌಲಭ್ಯ!
ಈ ವರ್ಷದ ಏಪ್ರಿಲ್ ವೇಳೆಗೆ 20 ಕಂತುಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ (bank transfer) ಮುಖಾಂತರ ಜಮಾ ಮಾಡಲಾಗಿದ್ದು, ಈ ನಿಯಮಿತ ಪಾವತಿ ಮುಂದೆಯೂ ಮುಂದುವರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಯೋಜನೆಯ ಅನುಷ್ಠಾನವನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳ ಮೂಲಕ ಮಾಡಲಾಗುತ್ತಿದೆ ಎಂಬುದು ಹೊಸ ನಿಯಮವಾಗಿದೆ.
ಹಣ ಜಮೆಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರುವುದನ್ನು ಸರ್ಕಾರ ಗುರುತಿಸಿದ್ದು, ಆಧಾರ್ ಲಿಂಕ್ ಸಮಸ್ಯೆ ಅಥವಾ KYC (Know Your Customer) ಪೂರ್ಣಗೊಳಿಸದಿರುವುದೇ ಪ್ರಮುಖ ಅಡ್ಡಿ ಎಂದು ತಿಳಿಸಿದೆ. ಇದಕ್ಕಾಗಿ ಆಧಾರ್ ಸೀಡಿಂಗ್ ಪ್ರಕ್ರಿಯೆ ಸರಳಗೊಳಿಸಲಾಗಿದೆ.
ಇದನ್ನೂ ಓದಿ: ಬಿಪಿಎಲ್ ರೈತರಿಗೆ ಉಚಿತ ಹಸು ಹಾಗೂ ಮೇವು ಯಂತ್ರ ಯೋಜನೆಗೆ ಅರ್ಜಿ ಆಹ್ವಾನ
ಈ ಯೋಜನೆಯಡಿ ಪ್ರತಿ ತಿಂಗಳು ₹2,000 ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದ್ದು, ಮಹಿಳೆಯರ ಆರ್ಥಿಕ ಸ್ಥಿತಿಗೆ ಬಲ ತುಂಬುತ್ತಿರುವುದು ಸತ್ಯ. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರ ಹಣ ವರ್ಗಾವಣೆ (direct benefit transfer) ಮಾಡಲಾಗುತ್ತಿದೆ ಎಂಬುದು ಈ ಯೋಜನೆಯ ವೈಶಿಷ್ಟ್ಯ.
ಕೆಲವು ಜನರಿಗೆ ಹಣ ತಡವಾಗಿ ಬರುವುದು ಸಹಜ. ಆದರೆ ಸರ್ಕಾರ ಹೇಳಿಕೆಯಂತೆ, ಎಲ್ಲಾ ಬಾಕಿ ಕಂತುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಮಹಿಳೆಯರಲ್ಲಿ ಈಗಲೂ 20ನೇ ಕಂತು ಕುರಿತು ಕುತೂಹಲ ಹಾಗೂ ನಿರೀಕ್ಷೆಯೇ ಇದೆ. ಕೆಲವರಿಗೆ ಪಾವತಿ ಆಗಿದ್ದರೆ ಕೆಲವರಿಗಿನ್ನೂ ಪಾವತಿ ಆಗಿಲ್ಲ ಎಂಬುದಾಗಿ ಮಹಿಳೆಯರು ದೂರುತ್ತಿದ್ದಾರೆ.
Gruhalakshmi Scheme, 21th Installment Expected Soon





