ಬೆಂಗಳೂರು ಪೂರ್ವ, ಗೊರವಿಗೆರೆ ಗ್ರಾಮದಲ್ಲಿ ಅರ್ಧ ಇಂಚು ಡಾಂಬರಿನಿಂದ ರೋಡ್

ಬೆಂಗಳೂರು ಪೂರ್ವದ ಗೋರವಿಗೆರೆ ಗ್ರಾಮದಲ್ಲಿ ಹೊಸ ರಸ್ತೆ ನಿರ್ಮಾಣ ಕಾರ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಧ ಅಡಿ ರಸ್ತೆ ತೆಗೆಯಲ್ಪಟ್ಟು, ಈಗ ಕೇವಲ ಅರ್ಧ ಇಂಚಿನಷ್ಟೇ ಹೊಸ ರಸ್ತೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಬೆಂಗಳೂರು (Bengaluru): ಇತ್ತೀಚೆಗಷ್ಟೇ ಗೊರವಿಗೆರೆ ಗ್ರಾಮದಲ್ಲಿ (Bengaluru East, Goravigere Village) ಹಳೆಯ ರಸ್ತೆಯನ್ನು ತೆರವುಗೊಳಿಸಿ ಹೊಸ ರಸ್ತೆ ಹಾಕಲಾಗುತ್ತಿದೆ ಎಂಬ ನಾಮದಲ್ಲಿ ಕಾಮಗಾರಿ ಆರಂಭವಾಯಿತು.

ಆದರೆ ಈಗ ನಡೆಯುತ್ತಿರುವ ರಸ್ತೆ ನಿರ್ಮಾಣ ಜನರ ಆಶ್ಚರ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಯಂತ್ರಗಳು ಬಂದು ಅದೆಷ್ಟೋ ದಿನ ರಸ್ತೆ ಅಗೆದುಹೋದರೂ, ಇದೀಗ ನಡೆದಿರುವ ರಸ್ತೆ ಹಾಕುವ ಕೆಲಸ ಕೇವಲ ನೆಪಮಾತ್ರ!

ಇದನ್ನೂ ಓದಿ: 2025ರ ಹೊಸ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ಲಿಸ್ಟ್‌ನಲ್ಲಿ ನಿಮ್ಮ ಹೆಸರು ಪರಿಶೀಲಿಸಿ

ಅರ್ಧ ಇಂಚಿನ ಡಾಂಬರ್ ರೋಡ್

ಹೌದು! ಸ್ಥಳೀಯರ ಪ್ರಕಾರ, ಹೊಸ ರಸ್ತೆ ಕೆಲಸದಲ್ಲಿ ಕೇವಲ ಅರ್ಧ ಇಂಚಿನಷ್ಟು ಮಾತ್ರ ಡಾಂಬರ್ ಹಾಕಲಾಗುತ್ತಿದೆ. ಇದು ಸಾಮಾನ್ಯ ರಸ್ತೆಗೆ ಬೇಕಾದ ಮಟ್ಟಕ್ಕಿಂತ ತುಂಬಾ ಕಡಿಮೆಯಾಗಿದೆ. ಕೆಲವರು ತಮಾಷೆಯಾಗಿ, ಈ ಡಾಂಬರಿಗಿಂತ ಅಪ್ಪಳವೇ ಮಂದ ಇರುತ್ತದೆ! ಎನ್ನುತ್ತಿದ್ದಾರೆ.

ಕಾರ್ಮಿಕರಿಂದ ಬೇಜವಾಬ್ದಾರಿತನ

ಬೇಕಾಬಿಟ್ಟಿ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು,  ಯಾರಾದರೂ ಪ್ರಶ್ನೆ ಮಾಡಿದಾಗ ಮಾತ್ರ, ಅಲ್ಲಿ ರೋಡ್ ಗೆ ಸ್ವಲ್ಪ ಹೆಚ್ಚಿನ ಮಟ್ಟದ ಡಾಂಬರು ಹಾಕಾಲಾಗುತ್ತಿದೆ. ಜೋರು ಮಾಡಿದಾಗ ಮಾತ್ರ ಡಾಂಬರ್ ಹೆಚ್ಚು ಹಾಕುತ್ತಿದ್ದಾರೆ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರ ಖಾತೆಗೆ ಹಾಲಿನ ಪ್ರೋತ್ಸಾಹಧನ! ನಿಮಗೂ ಬಂತಾ? ಚೆಕ್ ಮಾಡಿಕೊಳ್ಳಿ

Goravigere Road

ಯಾವುದೇ ಗುಣಮಟ್ಟದ ಮಾನದಂಡವಿಲ್ಲದ ಕಾಮಗಾರಿ

ರಸ್ತೆಯ ಮೇಲೆ ಮಾರ್ಕಿಂಗ್ ಇಲ್ಲ, ಶುಚಿಗೊಳಿಸುವ ಕಾರ್ಯ ಇಲ್ಲ, ಸಾಮಾನ್ಯ ಮಟ್ಟಕ್ಕೂ ತಲುಪದ ಎತ್ತರದ ರಸ್ತೆ – ಇದೆಲ್ಲವು ಸಾರ್ವಜನಿಕ ಹಣದ ದುರ್ಬಳಕೆಯಂತೆ ಕಾಣುತ್ತಿದೆ. ಯಾರು ಕೇಳಿದರೂ ಉತ್ತರ ಮಾತ್ರ ಇಲ್ಲ

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ Vs ಸರ್ಕಾರ: ಹಣ ಬರುತ್ತೋ ಇಲ್ವೋ, ಇಲ್ಲಿದೆ ಬಿಗ್ ಅಪ್ಡೇಟ್

ಜನರ ಬೇಡಿಕೆ – ಅಧಿಕಾರಿಗಳು ಸ್ಪಂದಿಸಲಿ

ಈ ರೀತಿಯ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಸ್ಥಳಕ್ಕೆ ಭೇಟಿ ನೀಡಿ ನಿಖರ ಪರಿಶೀಲನೆ ನಡೆಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ಸಾರ್ವಜನಿಕ ಹಣ ಬಳಕೆಯಾದ್ದರಿಂದ ಅದು ಸಮರ್ಪಕವಾಗಿ ವಿನಿಯೋಗವಾಗಬೇಕು ಎಂಬ ನಿರೀಕ್ಷೆ ಜನರಿಗೆ ಇರೋದು ಸಹಜ.

Half-Inch Road Work in Goravigere Raises Public Outrage

English Summary

======== Story End ========

Writer of This Story

Author of the Story
About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ ಮಟ್ಟದ ಸುದ್ದಿ ಅಪ್‌ಡೇಟುಗಳನ್ನು ನಿಖರವಾಗಿ, ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ ತಲುಪಿಸುವ ಶೈಲಿ ಅವರದು... ಇನ್ನಷ್ಟು ಓದಿ

✉︎ Feedback: editor@kannadanews.today

For Article Corrections/Report Issues Click here

Related Stories