ದಿನ ಭವಿಷ್ಯ 04 ನವೆಂಬರ್ 2026, ಬುಧವಾರ

Today Horoscope: ನವೆಂಬರ್ 4ರ ದಿನ ಭವಿಷ್ಯದಲ್ಲಿ ಮೇಷ, ಸಿಂಹ, ಮಕರ ರಾಶಿಯವರಿಗೆ ಧನಲಾಭದ ಯೋಗವಿದೆ. ಮಿಥುನಕ್ಕೆ ಎಚ್ಚರಿಕೆ ಅಗತ್ಯ. ಉದ್ಯೋಗ, ಆರೋಗ್ಯ, ಕುಟುಂಬ ಹಾಗೂ ಹಣಕಾಸಿನ ವಿಚಾರಗಳಲ್ಲಿ ಹನ್ನೆರಡು ರಾಶಿಗಳ ಫಲಾಫಲ ಇಲ್ಲಿದೆ.

ಈ ದಿನ ಹಣಕಾಸು ಹಾಗೂ ಅದೃಷ್ಟದ ಸಂಪೂರ್ಣ ರಾಶಿ ಫಲ ತಿಳಿಯಲು ಕ್ಲಿಕ್ಕಿಸಿ: ದಿನ ಭವಿಷ್ಯ 04-11-2026: ಅದೃಷ್ಟ ಖುಲಾಯಿಸುವ ದಿನ! ಈ ರಾಶಿಗಳಿಗೆ ಹೊಸ ಆಭರಣ, ಅನಿರೀಕ್ಷಿತ ಧನಲಾಭ

ಮೇಷ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಲಾಭದ ಯೋಗವಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಲಿದ್ದು, ಆರೋಗ್ಯ ಉತ್ತಮವಾಗಿರುತ್ತದೆ.

ವೃಷಭ ರಾಶಿ: ಮನಸ್ಸಿನಲ್ಲಿ ಆತಂಕ ಮೂಡಬಹುದು, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಪ್ರಗತಿ ಕಂಡರೂ ಆಸ್ತಿ ವಿಚಾರದಲ್ಲಿ ಆತುರ ಬೇಡ.

ಮಿಥುನ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮತ್ತು ಹಣಕಾಸಿನ ನಷ್ಟದ ಬಗ್ಗೆ ಎಚ್ಚರವಿರಲಿ.

ಕರ್ಕಾಟಕ ರಾಶಿ: ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಹೊಸ ಅವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ನೆಮ್ಮದಿ, ಬಂಧುಗಳಿಂದ ಗೌರವ ಹಾಗೂ ಶುಭಕಾರ್ಯಗಳಲ್ಲಿ ಭಾಗವಹಿಸುವ ಯೋಗವಿದೆ.

ಸಿಂಹ ರಾಶಿ: ಅನಿರೀಕ್ಷಿತ ಶುಭಸುದ್ದಿ ಹಾಗೂ ಧನಲಾಭದಿಂದ ಸಂತೋಷ ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಬಂಧುಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ: ಆರಂಭಿಸಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಶುಭಕಾರ್ಯಗಳ ಪ್ರಯತ್ನಗಳು ಫಲ ನೀಡಲಿದ್ದು, ಒಳ್ಳೆಯ ಸುದ್ದಿ ಕೇಳುವಿರಿ.

ತುಲಾ ರಾಶಿ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಹಣಕಾಸಿನ ಖರ್ಚಿನ ಮೇಲೆ ನಿಗಾ ಇರಲಿ.

ವೃಶ್ಚಿಕ ರಾಶಿ: ಹೊಸ ಕೆಲಸ ಆರಂಭಿಸುವ ಉತ್ಸಾಹ ಹೆಚ್ಚಾಗಲಿದ್ದು, ಸಂತೋಷದ ಘಟನೆಗಳು ನಡೆಯಲಿವೆ. ಆದರೆ ಅನಗತ್ಯ ಖರ್ಚು ಮತ್ತು ವೃತ್ತಿ ಸವಾಲುಗಳ ಬಗ್ಗೆ ಎಚ್ಚರವಿರಲಿ.

ಧನು ರಾಶಿ: ಬಾಕಿ ಉಳಿದ ಕೆಲಸಗಳನ್ನು ಪರಿಶ್ರಮದಿಂದ ಪೂರ್ಣಗೊಳಿಸುವಿರಿ, ಅಧಿಕಾರಿಗಳ ಮೆಚ್ಚುಗೆ ಸಿಗಲಿದೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಆರೋಗ್ಯದಲ್ಲೂ ಸುಧಾರಣೆ ಕಂಡುಬರಲಿದೆ.

ಮಕರ ರಾಶಿ: ಹಣಕಾಸಿನ ವಿಚಾರದಲ್ಲಿ ಉತ್ತಮ ಫಲಿತಾಂಶ ಸಿಗಲಿದ್ದು, ಧನಲಾಭದ ಯೋಗವಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಿ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ದೊರೆಯಲಿದೆ.

ಕುಂಭ ರಾಶಿ: ಆರೋಗ್ಯ ಸಮಸ್ಯೆಗಳು ಹಾಗೂ ಪ್ರಯಾಣದ ಆಯಾಸ ಕಾಡುವ ಸಾಧ್ಯತೆಯಿದೆ. ಅನಗತ್ಯ ವಾದಗಳಿಂದ ದೂರವಿರಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ.

ಮೀನ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾದರೂ ಅನಗತ್ಯ ಖರ್ಚುಗಳು ಚಿಂತೆ ಉಂಟುಮಾಡಬಹುದು. ಪ್ರಯಾಣ ಮತ್ತು ಆರೋಗ್ಯದ ಬಗ್ಗೆ ಎಚ್ಚರವಿರಲಿ, ಕುಟುಂಬದಲ್ಲಿ ಹೊಂದಾಣಿಕೆ ಕಾಪಾಡಿಕೊಳ್ಳಿ.

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 3
Show More

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories