ದಿನ ಭವಿಷ್ಯ 24-11-2026: ಬೆಳಗ್ಗೆಯಿಂದಲೇ ಶುಭ ಸೂಚನೆ! ಈ ರಾಶಿಯವರ ಪಾಲಿಗೆ ಇಂದು ವಿಶೇಷ ದಿನ

ನಾಳೆಯ ದಿನ ಭವಿಷ್ಯ 24 ನವೆಂಬರ್ 2026: ಕೈಗೆ ಬಂದ ಹಣ ಉಳಿಯುತ್ತಾ? ಉದ್ಯೋಗದಲ್ಲಿ ಬದಲಾವಣೆಯಾಗುತ್ತಾ? ಇಂದಿನ ರಾಶಿ ಭವಿಷ್ಯ ತಿಳಿಯಿರಿ । Daily Horoscope, Naleya Dina Bhavishya 24 November 2026

ದಿನ ಭವಿಷ್ಯ 24 ನವೆಂಬರ್ 2026

ಮೇಷ ರಾಶಿ: ಈ ದಿನ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ಮನೆಯವರಿಂದ ಸಂತೋಷ ಸಿಗಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸುವುದು ಅಗತ್ಯ. ಆರ್ಥಿಕವಾಗಿ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೊಸ ಕೆಲಸ ಅಥವಾ ಯೋಜನೆಗಳನ್ನು ಆರಂಭಿಸುವುದಕ್ಕಿಂತ ಸದ್ಯದ ಕೆಲಸಗಳತ್ತ ಗಮನಹರಿಸುವುದು ಉತ್ತಮ. ಆತ್ಮೀಯರ ನೆರವಿಗೆ ಧಾವಿಸಬೇಕಾದ ಸಂದರ್ಭಗಳು ಎದುರಾಗಬಹುದು.

ವೃಷಭ ರಾಶಿ: ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದ್ದು, ದಿನವಿಡೀ ಅನುಕೂಲಕರ ವಾತಾವರಣ ಇರಲಿದೆ. ಶತ್ರುಗಳಿಂದ ಎದುರಾಗಬಹುದಾದ ತೊಂದರೆಗಳು ದೂರವಾಗಲಿವೆ. ನಿರೀಕ್ಷಿತ ಶುಭಸುದ್ದಿ ಕೇಳುವ ಅವಕಾಶವಿದ್ದು, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೊಸ ಅವಕಾಶಗಳು ಒದಗಿಬರಲಿವೆ. ಕುಟುಂಬದಲ್ಲಿ ಪ್ರಗತಿಯ ಜೊತೆಗೆ ಅನಿರೀಕ್ಷಿತ ಹಣದ ಲಾಭವೂ ದೊರೆಯುವ ಸಾಧ್ಯತೆ ಇದೆ.

ಮಿಥುನ ರಾಶಿ: ಕೆಲವು ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಹಠ ಮತ್ತು ಪರಿಶ್ರಮದಿಂದ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಉದ್ಯೋಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಕುಟುಂಬದ ವಾತಾವರಣ ನೆಮ್ಮದಿಯಿಂದ ಕೂಡಿರಲಿದ್ದು, ಮನಸ್ಸಿಗೂ ಸಂತೋಷ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.

ಕರ್ಕಾಟಕ ರಾಶಿ: ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಹಾರ ಮತ್ತು ವಿಶ್ರಾಂತಿಯ ಬಗ್ಗೆ ಗಮನಹರಿಸಬೇಕು. ಯಾವುದೇ ಕಾರಣವಿಲ್ಲದೆ ಕುಟುಂಬ ಅಥವಾ ಪರಿಚಿತರೊಂದಿಗೆ ಮನಸ್ತಾಪ ಉಂಟಾಗಬಹುದು. ಸಣ್ಣ ವಿಚಾರಗಳಿಗೂ ಆತಂಕಪಡುವ ಬದಲು ತಾಳ್ಮೆಯಿಂದ ವರ್ತಿಸುವುದು ಉತ್ತಮ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಏಕಾಗ್ರತೆ ನೀಡಬೇಕು. ವ್ಯಾಪಾರಸ್ಥರು ಹೊಸ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಮಹಿಳೆಯರು ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದಾರೆ.

ಸಿಂಹ ರಾಶಿ: ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಅಡೆತಡೆಗಳು ಎದುರಾಗಬಹುದು. ವಿಶೇಷವಾಗಿ ಜಮೀನು, ಮನೆ ಹಾಗೂ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ. ಇತರರನ್ನು ನಂಬಿ ಹಣಕಾಸಿನ ವ್ಯವಹಾರ ನಡೆಸುವಾಗ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು. ಆರ್ಥಿಕ ಪರಿಸ್ಥಿತಿ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ಹೊಸ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ಕೆಲಸದ ನಿಮಿತ್ತ ಅಥವಾ ವೈಯಕ್ತಿಕ ಕಾರಣಗಳಿಂದ ಹೆಚ್ಚು ಪ್ರಯಾಣ ಮಾಡಬೇಕಾಗಬಹುದು.

ಕನ್ಯಾ ರಾಶಿ: ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರಲಿವೆ. ಕೆಲಸದ ನಿಮಿತ್ತ ಸ್ಥಳ ಬದಲಾವಣೆಯ ಅವಕಾಶವೂ ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಕೆಲವು ಒತ್ತಡಗಳು ಕಾಡುವ ಸಾಧ್ಯತೆ ಇದೆ. ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ಒಳಿತು. ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗಬಹುದು. ಮನೆ, ಜಮೀನು ಸೇರಿದಂತೆ ಸ್ಥಿರಾಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ತೋರದೆ ಎಲ್ಲವನ್ನೂ ಪರಿಶೀಲಿಸಿ ಮುಂದುವರಿಯಿರಿ.

ತುಲಾ ರಾಶಿ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆ ಅನುಭವಿಸಬೇಕಾಗಬಹುದು. ಉದ್ಯೋಗ ಅಥವಾ ವೈಯಕ್ತಿಕ ಕಾರಣಗಳಿಂದ ಸ್ಥಳ ಬದಲಾವಣೆಯ ಸೂಚನೆಗಳಿವೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಅವರಿಂದ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಕುಟುಂಬದಲ್ಲಿ ನಿರೀಕ್ಷಿಸಿದಷ್ಟು ನೆಮ್ಮದಿ ಇಲ್ಲದ ಕಾರಣ ಮಾನಸಿಕ ಒತ್ತಡ ಹೆಚ್ಚಾಗಬಹುದು. ಮನೆಯ ವಾತಾವರಣದಲ್ಲಿ ಬದಲಾವಣೆ ತರಲು ಮನಸ್ಸು ಮಾಡಲಿದ್ದೀರಿ. ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುವ ಸೂಚನೆಗಳಿವೆ.

ವೃಶ್ಚಿಕ ರಾಶಿ: ದಿನವು ಸಂತೋಷ ಮತ್ತು ನೆಮ್ಮದಿಯಿಂದ ಕಳೆಯಲಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದೆ. ನಿರೀಕ್ಷೆಯಲ್ಲಿದ್ದ ಶುಭಸುದ್ದಿ ಕೇಳಿ ಮನಸ್ಸಿಗೆ ಸಂತೋಷವಾಗಬಹುದು. ನಿಮ್ಮ ಕೆಲಸಗಳಿಗೆ ಸಹೋದ್ಯೋಗಿಗಳು ಹಾಗೂ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಸ್ನೇಹಿತರೊಂದಿಗೆ ಔತಣಕೂಟ ಅಥವಾ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಮಹಿಳೆಯರು ವಿಶೇಷವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸಲಿದ್ದಾರೆ.

ಧನು ರಾಶಿ: ಅನಿರೀಕ್ಷಿತ ಕೆಲಸಗಳು ಎದುರಾಗಲಿದ್ದು, ಹೊಸ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಬಹುದು. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಅವಕಾಶಗಳು ದೊರೆಯಲಿವೆ. ಆತ್ಮೀಯರನ್ನು ಭೇಟಿಯಾಗಬೇಕೆಂಬ ಆಸೆಯಿದ್ದರೂ ಕೆಲವು ಕಾರಣಗಳಿಂದ ಅದು ಸಾಧ್ಯವಾಗದೆ ಹೋಗಬಹುದು. ಅನಗತ್ಯ ಖರ್ಚುಗಳು ಹಾಗೂ ಪ್ರಯಾಣಗಳಿಂದ ಹಣ ಮತ್ತು ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಮಹಿಳೆಯರ ಮೂಲಕ ಹಣಕಾಸಿನ ಲಾಭ ದೊರೆಯುವ ಸೂಚನೆಗಳಿದ್ದು, ಖರ್ಚಿನ ವಿಚಾರದಲ್ಲಿ ಮಿತವ್ಯಯ ಅನುಸರಿಸುವುದು ಉತ್ತಮ.

ಮಕರ ರಾಶಿ: ನಿಮ್ಮ ನಿರೀಕ್ಷೆಗೂ ಮೀರಿದ ಉತ್ತಮ ಅವಕಾಶಗಳು ಎದುರಾಗಲಿವೆ. ಮನೆಯಲ್ಲಿ ಶುಭಕಾರ್ಯಗಳನ್ನು ಆಯೋಜಿಸಲು ನಡೆಸುವ ಪ್ರಯತ್ನಗಳು ಸುಲಭವಾಗಿ ಕೈಗೂಡಲಿವೆ. ಪ್ರಮುಖ ವಿಚಾರಗಳಲ್ಲಿ ಸಂತೋಷದ ಸುದ್ದಿ ಕೇಳುವ ಸಾಧ್ಯತೆ ಇದೆ. ಕಷ್ಟದ ಸಮಯದಲ್ಲಿ ಆತ್ಮೀಯರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಅನಿರೀಕ್ಷಿತವಾಗಿ ಹಣ ಕೈ ಸೇರಲಿದ್ದು, ಆರ್ಥಿಕವಾಗಿ ನೆಮ್ಮದಿ ದೊರೆಯಲಿದೆ. ಹೊಸ ಬಟ್ಟೆ, ವಸ್ತುಗಳು ಹಾಗೂ ಆಭರಣಗಳನ್ನು ಖರೀದಿಸುವ ಯೋಗವೂ ಇದೆ.

ಕುಂಭ ರಾಶಿ: ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವ ಆಸಕ್ತಿ ಹೆಚ್ಚಾಗಲಿದೆ. ದೇವಾಲಯಗಳಿಗೆ ಭೇಟಿ ನೀಡಿ ದೈವದರ್ಶನ ಪಡೆಯುವ ಅವಕಾಶ ದೊರೆಯಬಹುದು. ಕುಟುಂಬದಲ್ಲಿ ಸುಖ, ಸಂತೋಷ ನೆಲೆಸಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕೆಲಸ ಮತ್ತು ಸಾಧನೆಗಳಿಂದ ಹೆಸರು ಹಾಗೂ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಹಣದ ಲಾಭವಾಗಬಹುದು. ಶುಭಕಾರ್ಯಗಳಿಗೆ ಸಂಬಂಧಿಸಿದ ಪ್ರಯತ್ನಗಳು ಯಾವುದೇ ದೊಡ್ಡ ಅಡೆತಡೆಯಿಲ್ಲದೆ ಯಶಸ್ವಿಯಾಗುವ ಸೂಚನೆಗಳಿವೆ.

ಮೀನ ರಾಶಿ: ಇತ್ತೀಚಿನ ದಿನಗಳಲ್ಲಿ ಕಾಡುತ್ತಿದ್ದ ಅನಗತ್ಯ ಆತಂಕ ಮತ್ತು ಭಯಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಪ್ರಯಾಣ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಉದ್ಯೋಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ವರ್ಗಾವಣೆ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ಹಣಕಾಸಿನ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಕಂಡುಬರಲಿದ್ದು, ಸಾಲ ಪಡೆಯಲು ಪ್ರಯತ್ನಿಸಬೇಕಾದ ಸಂದರ್ಭ ಎದುರಾಗಬಹುದು. ಆತ್ಮೀಯರಿಂದ ನಿರೀಕ್ಷಿಸಿದ ಸಹಾಯ ಸಿಗಲು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯಿಂದ ಮುಂದುವರಿಯುವುದು ಒಳಿತು.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories