ಬೆಂಗಳೂರಿಗೆ ಭಾರೀ ಮಳೆಯ ಎಚ್ಚರಿಕೆ! 24 ಗಂಟೆಗಳಲ್ಲಿ ಧಾರಾಕಾರ ಮಳೆ

ನೈಋತ್ಯ ಮಾನ್ಸೂನ್ ಪ್ರವೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೇ 30ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಅಗತ್ಯವಾಗಿದೆ.

  • ಮುಂದಿನ ವಾರದವರೆಗೆ ಧಾರಾಕಾರ ಮಳೆ ಮುಂದುವರಿಕೆ
  • ಬೆಂಗಳೂರು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಆತಂಕ
  • ಮಳೆ ಜೊತೆಗೆ ಗರಿಷ್ಠ ಗಾಳಿ ವೇಗ 50 ಕಿ.ಮೀ ನಿರೀಕ್ಷೆ

ಬೆಂಗಳೂರು (Bengaluru): ಈ ಬಾರಿ ಬೆಂಗಳೂರು ಮಾರ್ಚ್ 1ರಿಂದಲೇ ಭಾರೀ ಮಳೆಯನ್ನನುಭವಿಸುತ್ತಿದೆ. ಈಗಾಗಲೇ 343 ಮಿ.ಮೀ (34.3 ಸೆಂ.ಮೀ) ಮಳೆಯಾಗಿದೆ. ಈ ಬಾರಿಯ ಮುಂಗಾರು ಆರಂಭಿಕವಾಗಿಯೇ ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು (heavy rain forecast) ಇರುವ ಸಾಧ್ಯತೆ ಇದೆ.

ಬೆಂಗಳೂರು ನಗರದ ತಗ್ಗು ಪ್ರದೇಶಗಳಲ್ಲಿ ಕಳೆದ ವಾರದ ಮಳೆಗೆ ಭಾರೀ ಪ್ರವಾಹ ಉಂಟಾಗಿ ನಾಗರಿಕರಿಗೆ ತೊಂದರೆಯಾಗಿದೆ. ಇದೀಗ ಮತ್ತೆ ಮಳೆಯ ಮುನ್ಸೂಚನೆಗಳು ಜಾರಿಯಾಗಿರುವುದರಿಂದ ಸ್ಥಳೀಯರು ಮುನ್ನೆಚ್ಚರಿಕೆಯಿಂದಿರಬೇಕಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೂಡ ಸಜ್ಜಾಗಿದೆ ಎಂಬ ಮಾಹಿತಿ ದೊರಕಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಬಂಪರ್ ಸ್ಕೀಮ್! 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್‌ಸೆಟ್ ವಿತರಣೆ

ಮೇ 30ರವರೆಗೆ ಬೆಂಗಳೂರಿನಲ್ಲಿ ಮಳೆ (Bengaluru Rain) ಮುಂದುವರಿಯಲಿದೆ. ಮೇ 31ರಿಂದ ಜೂನ್ 2ರ ವರೆಗೆ ಕೂಡ (Southwest monsoon) ಬಲಿಷ್ಠವಾಗಲಿದೆ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚಿಸಿದೆ.

ಭಾನುವಾರ ಹಾಗೂ ಸೋಮವಾರ ಬೆಂಗಳೂರಿನಲ್ಲಿ ಮೋಡ ಮುಸುಕು ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಮಳೆ

ಹವಾಮಾನ ಇಲಾಖೆ ಇಂದಿನ ಮುನ್ಸೂಚನೆಯಲ್ಲಿ ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿಯೂ ಮಳೆ ನಿರಂತರವಾಗಿರಲಿದೆ ಎಂದು ಹೇಳಿದೆ. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಬಿಪಿಎಲ್‌ ಕಾರ್ಡ್‌ ಕುಟುಂಬಗಳಿಗೆ ಇನ್ನುಂದೆ ಈ ಸೌಲಭ್ಯ ಉಚಿತ! ಹೊಸ ಯೋಜನೆ

ನೈಋತ್ಯ ಮಾನ್ಸೂನ್ ಈಗಾಗಲೇ ಕೇರಳದತ್ತ ಪ್ರವೇಶಿಸಿದ ಪರಿಣಾಮ, ಕರ್ನಾಟಕದ ಹಲವೆಡೆ, ಬೆಂಗಳೂರು ಸೇರಿದಂತೆ ಧಾರಾಕಾರ ಮಳೆಯ ಅನುಭವವಾಗುತ್ತಿದೆ. ಇದು ಕೃಷಿಕರಿಗೆ ಅನುಕೂಲವಾಗಬಹುದು ಆದರೆ ನಗರ ಪ್ರದೇಶಗಳಲ್ಲಿ ದೈನಂದಿನ ಜೀವನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

Heavy Rains in Bengaluru for Another Week

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories