ಇನ್ಮುಂದೆ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ: ಹೈಕೋರ್ಟ್ ಕಠಿಣ ಸೂಚನೆ! ಅನುಷ್ಠಾನಕ್ಕೆ ಆದೇಶ
ಕರ್ನಾಟಕದಲ್ಲಿ ಈಗ ಮಕ್ಕಳ ಸುರಕ್ಷತೆಯ ವಿಷಯ ಗಂಭೀರ ಹಂತಕ್ಕೆ ತಲುಪಿದೆ. ನಾಲ್ಕು ವರ್ಷದೊಳಗಿನ ಮಕ್ಕಳಿಗೂ ಹೆಲ್ಮೆಟ್ ಹಾಗೂ ಸುರಕ್ಷತಾ ನಿಯಮ ಕಡ್ಡಾಯಗೊಳಿಸಲು ಹೈಕೋರ್ಟ್ ಸರ್ಕಾರಕ್ಕೆ ತಕ್ಷಣದ ಕ್ರಮಕ್ಕೆ ಆದೇಶಿಸಿದೆ.

Helmet Mandatory for Kids: ಕರ್ನಾಟಕದಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ನಾಲ್ಕು ವರ್ಷದೊಳಗಿನ ಮಕ್ಕಳ ಸುರಕ್ಷತೆ ಬಗ್ಗೆ ಹೈಕೋರ್ಟ್ (Karnataka High Court) ಮತ್ತೊಮ್ಮೆ ಗಂಭೀರವಾಗಿ ಗಮನಹರಿಸಿದೆ. ಮೋಟಾರ್ ಸೈಕಲ್‌ಗಳಲ್ಲಿ ಹಿಂಬದಿ ಪ್ರಯಾಣಿಸುವ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠವು ಹಲವು ಪ್ರಮುಖ ಸೂಚನೆಗಳನ್ನು ಹೊರಡಿಸಿದೆ.
ಮಾರುಕಟ್ಟೆಯಲ್ಲಿ ಸುರಕ್ಷತಾ ಪರಿಕರಗಳ ಲಭ್ಯತೆ ಖಚಿತವಾದ ನಂತರ ನಿಯಮ ಅನುಷ್ಠಾನಕ್ಕೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಜ್ಯಾಕ್‌ಪಾಟ್ ಸುದ್ದಿ! ರೇಷನ್ ಕಾರ್ಡ್ ಕುರಿತು ದೊಡ್ಡ ಗುಡ್ ನ್ಯೂಸ್
ನ್ಯಾಯಾಲಯದ ತಾಕೀತು
ಕೇಂದ್ರ ಮೋಟಾರು ವಾಹನ ನಿಯಮಗಳು ಈಗಾಗಲೇ ಮಕ್ಕಳ ಸುರಕ್ಷತೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರೂ ಅವು ವಾಸ್ತವಿಕ ಜಾರಿಗೆ ಬಾರದಿರುವುದನ್ನು ನ್ಯಾಯಪೀಠ ಗಂಭೀರವಾಗಿ ಎತ್ತಿ ಹಿಡಿದಿದೆ.
ನ್ಯಾಯಾಲಯದ ಸಲಹೆಯಂತೆ:
- 9 ತಿಂಗಳು–4 ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
- ಹಿಂಬದಿ ಸವಾರರಾಗಿ ಕರೆದುಕೊಂಡು ಹೋಗುವಾಗ ಸುರಕ್ಷತಾ ಸಾಧನ ಅವಶ್ಯ
- ಮೋಟಾರ್ ಸೈಕಲ್ ವೇಗ ಗಂಟೆಗೆ 40 ಕಿಮೀ ಮೀರಬಾರದು
ಜಾಗೃತಿ ಕಾರ್ಯಕ್ರಮ ಮುಂದುವರಿಸಬೇಕು
ನ್ಯಾಯಪೀಠವು ಅಧಿಕಾರಿಗಳಿಗೆ, ಕೇವಲ ನಿಯಮ ಜಾರಿಗೊಳಿಸುವುದಲ್ಲದೆ, ಪೋಷಕರು ಮತ್ತು ನಾಗರಿಕರು ಮಕ್ಕಳ ಸುರಕ್ಷತೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವಂತೆ ಜಾಗೃತಿ ಅಭಿಯಾನ ನಿರಂತರವಾಗಿ ನಡೆಸುವ ನಿರ್ದೇಶನ ನೀಡಿದೆ.
ಈ ಪಿಐಎಲ್ ಅನ್ನು ಶಿವಮೊಗ್ಗದ ಕೆ. ಅರ್ಚನಾ ಭಟ್, ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ, ಸಲ್ಲಿಸಿದ್ದರು. ಅರ್ಜಿಯನ್ನು ವಿಲೇವಾರಿ ಮಾಡುತ್ತಿದ್ದಂತೆಯೇ, ನ್ಯಾಯಾಲಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.
Helmet Mandatory for Kids, Karnataka High Court Orders Strict Enforcement



