ಇನ್ಮುಂದೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಈ ದಾಖಲೆಗಳು ಬೇಕು
- ಜನವರಿ 31 2025 ರವರೆಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ
- ಇಂಥವರ ರೇಷನ್ ಕಾರ್ಡನ್ನು ರದ್ದುಪಡಿಸಿದ ಸರ್ಕಾರ
- ಆನ್ಲೈನ್ ಮೂಲಕವೂ ಮಾಡಿಕೊಳ್ಳಬಹುದು ರೇಷನ್ ಕಾರ್ಡ್ ತಿದ್ದುಪಡಿ
Ration Card : ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ಇದನ್ನ ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ವಾಸಿಸುವ ಬೇರೆ ಬೇರೆ ವರ್ಗದ ಜನರಿಗೆ ಬೇರೆ ಬೇರೆ ರೀತಿಯ ರೇಷನ್ ಕಾರ್ಡ್ ನೀಡಲಾಗುವುದು. ಉದಾಹರಣೆಗೆ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ (BPL Card and APL Card) ಹಾಗೂ ಅಂತ್ಯೋದಯ ಕಾರ್ಡ್.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ
ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸರ್ಕಾರ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅಗತ್ಯ ಇರುವವರಿಗಿಂತ ಹೆಚ್ಚಾಗಿ ಉಳ್ಳವರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಂತವರ ರೇಷನ್ ಕಾರ್ಡ್ ರದ್ದುಪಡಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ.
ಇನ್ನು ರೇಷನ್ ಕಾರ್ಡ್ ನಲ್ಲಿ ಬೇಕಾಗಿರುವ ತಿದ್ದುಪಡಿಯನ್ನು ಮಾಡಲು ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದೇ ಜನವರಿ 31 2025 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. ಬೆಳಿಗ್ಗೆ 10:00ಯಿಂದ ಸಂಜೆ 5:30ರ ವರೆಗೆ ಮಾನ್ಯ ಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದೆ. ಅದೇ ರೀತಿ ಆನ್ಲೈನ್ ಮೂಲಕವೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಇಂತಹ ಸಿಎಸ್ಆರ್ ಕೇಂದ್ರಗಳಲ್ಲಿಯೂ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯ.
ಏನೆಲ್ಲ ತಿದ್ದುಪಡಿ ಮಾಡಬಹುದು!
* ಮನೆಯ ಯಜಮಾನರ ಹೆಸರು ಬದಲಾವಣೆ
* ಮನೆಯಲ್ಲಿ ಇಲ್ಲದೆ ಇರುವ ಸದಸ್ಯರ ಹೆಸರನ್ನು ತೆಗೆದುಹಾಕುವುದು
* ಮಕ್ಕಳ ಮತ್ತು ಹೆಂಡತಿಯ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸುವುದು.
* ವಿಳಾಸದ ಬದಲಾವಣೆ
* ಸದಸ್ಯರ ಹೆಸರುಗಳಲ್ಲಿ ತಪ್ಪಾಗಿದ್ದರೆ ತಿದ್ದುಪಡಿ
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗಿರುವ ದಾಖಲೆಗಳು
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಮಕ್ಕಳ ಜನನ ಪ್ರಮಾಣ ಪತ್ರ
* ಸದಸ್ಯರ ಫೋಟೋ
ಇನ್ನು, ಹೊಸ ರೇಷನ್ ಕಾರ್ಡ್ (New Ration Card) ವಿತರಣೆಯನ್ನು ವಿಶೇಷ ಸಂದರ್ಭ ದಲ್ಲಿ ಮಾತ್ರ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಅಗತ್ಯ ಇರುವ ಎಲ್ಲರಿಗೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಲು ಅವಕಾಶ ಕಲ್ಪಿಸಿ ಕೊಡುವ ನಿರೀಕ್ಷೆ ಇದೆ.
Here are the documents required to obtain a new ration card from now on