ಬೆಂಗಳೂರು ನಗರಕ್ಕೂ ಮೊದಲೇ ಶಿವಮೊಗ್ಗದಲ್ಲಿ HMPV ವೈರಸ್ ಪತ್ತೆ
ಶಿವಮೊಗ್ಗದಲ್ಲಿ ಆರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ (HMPV Virus) ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೀಗ ಮಕ್ಕಳಲ್ಲಿ ಕಂಡುಬಂದ ಈ ವೈರಸ್ ಕುರಿತು ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಶಿವಮೊಗ್ಗ (Shivamogga): ಶಿವಮೊಗ್ಗದಲ್ಲಿ ಆರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ (HMPV Virus) ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೀಗ ಮಕ್ಕಳಲ್ಲಿ ಕಂಡುಬಂದ ಈ ವೈರಸ್ ಕುರಿತು ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಕಳೆದ ನವಂಬರ್ ತಿಂಗಳಲ್ಲಿ 1 ಮತ್ತು 2 ವರ್ಷಗಳ ವಯಸ್ಸಿನ ಮಕ್ಕಳಲ್ಲಿ ಈ ವೈರಸ್ ಪತ್ತೆಯಾಗಿದ್ದು, ಅದಾಗಲೇ ಈ ಮಕ್ಕಳು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಡಾ. ಧನಂಜಯ್ ಸರ್ಜಿ, ಮಕ್ಕಳ ವೈದ್ಯರು ಮಾಹಿತಿ ನೀಡಿದ್ದು, ಈ ವೈರಸ್ ಕುರಿತು ಹೆಚ್ಚಿನ ಆತಂಕಕ್ಕೆ ಕಾರಣವಿಲ್ಲ. ಇದು ಸಾಮಾನ್ಯವಾಗಿ ಕಂಡುಬರುವ ಉಸಿರಾಟದ ಸೋಂಕಿನ ಭಾಗವಾಗಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮಕ್ಕಳು ಸೋಂಕಿಗೆ ಗುರಿಯಾಗಿದ್ದರು. ಆದರೆ, ತಕ್ಷಣವೇ ಚಿಕಿತ್ಸೆ ನೀಡಿದ ಪರಿಣಾಮ ಮಕ್ಕಳು ಶೀಘ್ರವಾಗಿ ಗುಣಮುಖರಾದರು ಎಂದು ಅವರು ಸ್ಪಷ್ಟಪಡಿಸಿದರು.
ಕೊರೋನಾ ಶಂಕೆ ಹಿನ್ನೆಲೆ ಮಕ್ಕಳ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಆದರೂ, ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ (ಹೆಚ್ಎಂಪಿ) ದೃಢಪಟ್ಟಿತು. ಮಕ್ಕಳಿಗೆ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈಗ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಹಾಗೂ ಮಕ್ಕಳ ವೈದ್ಯ ಡಾ. ಧನಂಜಯ್ ಸರ್ಜಿ, “ಎಚ್‌ಎಂಪಿ ವೈರಸ್ ಒಂದು ಕಾಮನ್ ವೈರಸ್, ಇದನ್ನು ವರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಈ ಸೋಂಕು ಆಗಾಗ್ಗೆ ಬಂದು ಹೋಗುತ್ತದೆ. ನಮ್ಮ ಆಸ್ಪತ್ರೆಗೆ ಬಂದ ಮಕ್ಕಳನ್ನು ಟೆಸ್ಟ್‌ಗೆ ಕಳುಹಿಸಿದ್ದೆವು. ಐದು ಮಕ್ಕಳಿಗೆ ಸೋಂಕು ದೃಢಪಟ್ಟಿತ್ತು. ಈಗ ಎಲ್ಲಾ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ” ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ ಮೊದಲೇ ಎರಡು ಪ್ರಕರಣಗಳು ಪತ್ತೆಯಾದರೂ, ಶಿವಮೊಗ್ಗದಲ್ಲಿ ವೈರಸ್ ಮುಂಚೆಲೇ ಪತ್ತೆಯಾಗಿರುವುದು ಇದೀಗ ತಿಳಿದುಬಂದಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಲಹೆ ನೀಡಿದೆ.
HMPV Virus Detected in 6 Children in Shivamogga Before Bengaluru