ಕರ್ನಾಟಕ ರೈತರಿಗೆ ಜೀವಜಲ ಯೋಜನೆ, ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಬ್ಸಿಡಿ

ಕರ್ನಾಟಕ ವೀರಶೈವ ಅಂಗಾಯತ ನಿಗಮದಿಂದ 2024-25ನೇ ಸಾಲಿಗೆ ವೀರಶೈವ-ಲಿಂಗಾಯತ ಸಮುದಾಯದ ರೈತರಿಗೆ ಉಚಿತವಾಗಿ ಬೋರ್ವೆಲ್ ಬಾವಿ ಕೊರೆಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಸಬ್ಸಿಡಿ ವಿವರಗಳು ಮತ್ತು ಅಗತ್ಯ ದಾಖಲೆಗಳ ಮಾಹಿತಿ ಇಲ್ಲಿದೆ.

  • ವೀರಶೈವ-ಲಿಂಗಾಯತ ಸಮುದಾಯದ 3B ವರ್ಗದ ಅರ್ಹ ರೈತರಿಗೆ ಯೋಜನೆ.
  • ಬೆಂಗಳೂರಿನಿಂದ ಹೊರಗಿನ 25 ಜಿಲ್ಲೆಗಳಿಗೆ ₹3.75 ಲಕ್ಷ ಮತ್ತು 7 ಜಿಲ್ಲೆಗಳಿಗೆ ₹4.75 ಲಕ್ಷ ಸಬ್ಸಿಡಿ.
  • 31 ಜುಲೈ 2025 ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ವೀರಶೈವ ಅಂಗಾಯತ ಅಭಿವೃದ್ಧಿ ನಿಗಮ ನಿಯಮಿತವು 2024-25ನೇ ಸಾಲಿಗೆ ಕೃಷಿಕರಿಗೆ ಉಚಿತವಾಗಿ ಬೋರ್ವೆಲ್ (borewell) ಕೊರೆಸಲು ಜೀವಜಲ (Jalajeevana) ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆ ವಿಶೇಷವಾಗಿ ವೀರಶೈವ-ಲಿಂಗಾಯತ (Lingayat) ಸಮುದಾಯದ ಪವರ್ಗ 3B ಗೆ ಸೇರಿದ ರೈತರಿಗೆ ನೀರಾವರಿ ಸೌಲಭ್ಯ ನೀಡಲು ರೂಪಿಸಲಾಗಿದೆ. (Online application) ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ರೈತರು ತಮ್ಮ ಕೊಳವೆ ಬಾವಿಗಾಗಿ ಈ ಸೌಲಭ್ಯವನ್ನು ಪಡೆಯಬಹುದು.

ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ₹1000 ಆರ್ಥಿಕ ಸಹಾಯ, 10 ಉಚಿತ ಅಗತ್ಯ ವಸ್ತುಗಳು

ಬೋರ್ವೆಲ್ ಕೊರೆಸಲು ನೀಡಲಾಗುವ ಸಬ್ಸಿಡಿ ಎರಡು ಭಾಗಗಳಲ್ಲಿ ವಿಭಜಿಸಲಾಗಿದೆ: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಸೇರಿದಂತೆ 7 ಜಿಲ್ಲೆಗಳಿಗೆ ₹4,75,000/- ಸಬ್ಸಿಡಿ ನಿಗದಿಪಡಿಸಲಾಗಿದೆ.

ಇದರಲ್ಲಿ ಬೋರ್ವೆಲ್ ಡ್ರಿಲ್ಲಿಂಗ್ ಮತ್ತು ಪಂಪ್ ಸೆಟ್ ವೆಚ್ಚ ₹3,50,000/- ಮತ್ತು ವಿದ್ಯುತ್ ಸರಬರಾಜಿಗೆ ₹75,000/- ಸಹಾಯ ನೀಡಲಾಗುತ್ತದೆ. ಉಳಿದ 25 ಜಿಲ್ಲೆಗಳಿಗೆ ₹3,75,000/- ಸಬ್ಸಿಡಿ ಇದೆ. (Subsidy amount) ಜೊತೆಗೆ 4% ಬಡ್ಡಿದರದಲ್ಲಿ ₹50,000/- ಸಾಲ (Loan) ಸಹ ಕೊಡಲಾಗುತ್ತದೆ.

ಅರ್ಜಿದಾರರು ಕರ್ನಾಟಕದ ನಿಕಟ ನಿವಾಸಿಯಾಗಿದ್ದು, ವೀರಶೈವ-ಲಿಂಗಾಯತ 3B ಸಮುದಾಯಕ್ಕೆ ಸೇರಿದವರು ಇರಬೇಕು. ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶಕ್ಕೆ ₹98,000/- ಮತ್ತು ನಗರ ಪ್ರದೇಶಕ್ಕೆ ₹1,20,000/- ಮಿತಿಯೊಳಗಿರಬೇಕು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ! ಅಪ್ಡೇಟ್ ಬಿಡುಗಡೆ

Borewell

ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಇದಕ್ಕೆ 18 ವರ್ಷ ಮೇಲ್ಪಟ್ಟಿರುವವರು ಮಾತ್ರ ಅರ್ಹರು. ಇದೇ ಯೋಜನೆಯ ಅಡಿಯಲ್ಲಿ ಹಿಂದೆ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿಗಳನ್ನು https://sevasindhuservices.karnataka.gov.in ವೆಬ್‌ಸೈಟ್ ಅಥವಾ ಸಮೀಪದ One Karnataka/Grama One/ Bengaluru One ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದು.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಬೆಳೆ ಸಾಲದ ಜೊತೆಗೆ ವಿಮೆ ಸೌಲಭ್ಯ! ಬಂಪರ್ ಕೊಡುಗೆ

ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪೋಟೋಗಳು, ಜಮೀನು ಪಹಣಿ, ಬೆಳೆ ದೃಡೀಕರಣ, ಸ್ವಯಂ ಘೋಷಣೆ ಮತ್ತು ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಬೇಕು.

ನಿಗಮದಿಂದ ಸ್ಪಷ್ಟ ಸೂಚನೆಯಂತೆ ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಂಡಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2025.

ಜೀವಜಲ ಯೋಜನೆಯಡಿ (Jalajeevana Scheme) ನೀಡಲಾದ ಈ ನೆರವು ರೈತರಿಗೆ ನೀರಾವರಿ ವ್ಯವಸ್ಥೆ ಸಧಾರಿಸಲು ಮತ್ತು ಕೃಷಿಗೆ ಉತ್ತಮ ಬೆಂಬಲ ನೀಡಲು ಮುಖ್ಯವಾಗಿದೆ. ಈ ಯೋಜನೆಯು ಕೃಷಿ ಉತ್ಪಾದನೆ ಹಾಗೂ ರೈತರ ಜೀವನಮಟ್ಟ ಹೆಚ್ಚಿಸಲು ಸಹಕಾರಿ ಎಂದು ನಿಗಮವು ಅಭಿಪ್ರಾಯಪಟ್ಟಿದೆ.

Jalajeevana Scheme 2024-25, Free Borewell Subsidy for Farmers in Karnataka

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories