ಗೃಹಲಕ್ಷ್ಮಿ ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ! ಅಪ್ಡೇಟ್ ಬಿಡುಗಡೆ
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ₹2,000 ಹಣವನ್ನು ಶೀಘ್ರವೇ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
Publisher: Kannada News Today (Digital Media)
- ತಾಂತ್ರಿಕ ತೊಂದರೆಯ ನಡುವೆಯೂ ಹಣ ಜಮೆ ಪ್ರಕ್ರಿಯೆ ಪೂರ್ಣ
- ಹೊಸ ಅರ್ಜಿದಾರರಿಗೆ ಅರ್ಜಿ ಅವಕಾಶ ಇನ್ನೂ ಮುಕ್ತ
- ಕುಟುಂಬದ ಆರ್ಥಿಕ ಸ್ಥಿರತೆಗಾಗಿ ಪ್ರತಿ ತಿಂಗಳು ನಗದು ಸಹಾಯ
ಬೆಂಗಳೂರು (Bengaluru): ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ನೀಡಲಾಗುವ ಮಾಸಿಕ ಹಣದ ಸಹಾಯದ 20ನೇ ಕಂತು ಇದೀಗ ಖಾತೆಗೆ ಜಮೆಯಾಗುತ್ತಿದೆ.
ಈ ಯೋಜನೆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಶಕ್ತಿಯನ್ನು ಒದಗಿಸಲು ಸರ್ಕಾರ (Karnataka Government) ಮುಂದಾಗಿದೆ. ಸದ್ಯ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಕಂತುಗಳ ವಿತರಣೆಯಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದರೂ ಈಗ ತಿದ್ದುಪಡಿ ಮಾಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಬೆಳೆ ಸಾಲದ ಜೊತೆಗೆ ವಿಮೆ ಸೌಲಭ್ಯ! ಬಂಪರ್ ಕೊಡುಗೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ ಮಾಹಿತಿಯ ಪ್ರಕಾರ, ಈ ಯೋಜನೆಯ (Gruha Lakshmi Scheme) 20ನೇ ಕಂತಿನಲ್ಲಿ ಪ್ರತಿಯೊಬ್ಬ ಅರ್ಹ ಮಹಿಳೆಯ ಖಾತೆಗೆ ₹2,000 ನೇರವಾಗಿ ಜಮೆಯಾಗುತ್ತಿದೆ. ಈ ಮೊತ್ತವನ್ನು ನೇರ ಹಣ ವರ್ಗಾವಣೆ (Direct Benefit Transfer – DBT) ಮೂಲಕ ನೀಡಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳಿಗೆ ತಲುಪಲಿದೆ.
ಯಾರಿಗೆಲ್ಲ, ಇನ್ನು ಹಣ ಪಾವತಿಯಾಗಿಲ್ಲವೋ ಅವರು ಚಿಂತಿಸುವ ಅಗತ್ಯ ಇಲ್ಲ, ತಾಂತ್ರಿಕ ದೋಷದಿಂದ ಅವ್ಯವಸ್ಥೆ ಉಂಟಾಗಿದೆ ಹೊರತು, ಮುಂದೆ ಬಾಕಿ ಹಣವೂ ಸೇರಿ ಒಟ್ಟಾರೆ ಹಣ ಪಾವತಿಯಾಗುವ ಬಗ್ಗೆ ಭರವಸೆ ನೀಡಲಾಗಿದೆ.
ಇನ್ನು ಸರ್ಕಾರ 19ನೇ ಕಂತಿನ ಹಣ ಬಿಡುಗಡೆ ಆಗಿದೆ ಎನ್ನುತ್ತಿದ್ದರೂ ಮಹಿಳೆಯರು ಮಾತ್ರ ತಮಗೆ ಬರಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದೋರಿಗೆ 8 ಭರ್ಜರಿ ಉಚಿತ ಸೌಲಭ್ಯಗಳು! ಬಿಗ್ ಅನೌನ್ಸ್‌ಮೆಂಟ್
ಈ ಯೋಜನೆಗೆ ಅರ್ಹತೆ ಹೊಂದಿರುವವರು BPL ಅಥವಾ APL ಕಾರ್ಡ್ ಹೊಂದಿರುವವರು ಆಗಿರಬೇಕು. ಅರ್ಜಿ ಸಲ್ಲಿಸಲು Seva Sindhu ಪೋರ್ಟಲ್ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳಿಂದ ಸಹಾಯ ಪಡೆಯಬಹುದು. (Aadhaar card), ಬ್ಯಾಂಕ್ ಖಾತೆ ವಿವರ ಮತ್ತು ಆದಾಯ ಪ್ರಮಾಣಪತ್ರ ಈ ಅರ್ಜಿಗೆ ಅಗತ್ಯವಾಗಿವೆ.
ಇದನ್ನೂ ಓದಿ: ಟ್ಯಾಕ್ಸಿ ವಾಹನ ಖರೀದಿಗೆ ₹3 ಲಕ್ಷ ನೆರವು! ಕರ್ನಾಟಕ ಸಾರಥಿ ಯೋಜನೆ ಬಗ್ಗೆ ಗೊತ್ತಾ
ಇದುವರೆಗೆ 19 ಕಂತುಗಳ ಹಣ ಫಲಾನುಭವಿಗಳಿಗೆ ನೀಡಲಾಗಿದೆ. ಆದರೆ ಕೆಲ ಮಹಿಳೆಯರು “ನಮಗೆ 3 ತಿಂಗಳು ಹಣ ಬರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ತಾಂತ್ರಿಕ ತೊಂದರೆಗಳಿಂದಾಗಿ ಈ ವಿಳಂಬ ಉಂಟಾಗಿದೆ ಎಂದು ಹೇಳಿದ್ದು, ಬಾಕಿ ಎಲ್ಲಾ ಕಂತುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಭರವಸೆ ನೀಡಿದೆ.
ಈ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ ಬರೆಯುತ್ತಿದೆ. ಪ್ರತಿ ತಿಂಗಳು ನೀಡುವ ₹2,000 ಸಹಾಯವು ಕುಟುಂಬದ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ. ಇದು (women empowerment) ಗುರಿಯಲ್ಲಿದೆ ಮತ್ತು ಇಂತಹ ಯೋಜನೆಗಳು ಮಹಿಳೆಯರಿಗೆ ಧೈರ್ಯ ಮತ್ತು ಸ್ವಾತಂತ್ರ್ಯ ನೀಡುತ್ತವೆ.
ಇದನ್ನೂ ಓದಿ: ಕರ್ನಾಟಕ ಅರಿವು ಶಿಕ್ಷಣ ಸಾಲ ಯೋಜನೆ, 2% ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ
ಹೊಸ ಅರ್ಜಿ ಪ್ರಕ್ರಿಯೆಯು ಇನ್ನೂ ಮುಕ್ತವಾಗಿದ್ದು, ಅರ್ಹರು ಇನ್ನು ಸಹ ಅರ್ಜಿ ಸಲ್ಲಿಸಬಹುದು. ಮುಂದಿನ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಹಣ ತಡವಾಗಿ ಬಂದರೂ, ತಕ್ಷಣ ದೋಷಗಳನ್ನು ಪರಿಹರಿಸಲಾಗುವುದು ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
Update on 20th Installment of Gruha Lakshmi Scheme